ಆ್ಯಪ್ನಗರ

790 ಕೋಟಿ ರೂ. ಮೌಲ್ಯದ ವಿದೇಶಿ ಆಸ್ತಿ-ಪಾಸ್ತಿ ಪತ್ತೆ

-ಐಟಿ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಬಿ...

Vijaya Karnataka 25 Mar 2019, 5:00 am
ಬೆಂಗಳೂರು: ಕರ್ನಾಟಕ ಮತ್ತು ಗೋವಾ ವಲಯಕ್ಕೆ ಸೇರಿದ ಹಲವು ವ್ಯಕ್ತಿಗಳು ವಿದೇಶದಲ್ಲಿ ಹೂಡಿಕೆ ಮಾಡಿರುವ ಒಟ್ಟಾರೆ 790 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಟಲಾಗಿದೆ ಎಂದು ವಲಯದ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್‌ ಬಾಲಕೃಷ್ಣನ್‌ ತಿಳಿಸಿದ್ದಾರೆ.
Vijaya Karnataka Web bala krishna


''ಹಾಂಕಾಂಗ್‌, ಯುಕೆ, ಸಿಂಗಾಪುರ, ಬಲ್ಗೇರಿಯಾ, ಪನಾಮ ಮುಂತಾದ ದೇಶಗಳಲ್ಲಿ ಹಲವು ವ್ಯಕ್ತಿಗಳು ಹಣ ಹೂಡಿಕೆ ಮಾಡಿರುವುದು ಕಂಡು ಬಂದಿದೆ. ರಿಯಲ್‌ ಎಸ್ಟೇಟ್‌, ಕಂಪನಿಗಳಲ್ಲಿ ಹೂಡಿಕೆ ಸೇರಿದಂತೆ ಹಲವು ಕಾನೂನುಬಾಹಿರ ವಿದೇಶಿ ಹೂಡಿಕೆ ಪತ್ತೆಯಾಗಿದ್ದು, 3 ಪ್ರಕರಣಗಳಲ್ಲಿ ಕಪ್ಪು ಹಣ ಕಾಯಿದೆ ಅನ್ವಯ ವಿಚಾರಣೆ ಆರಂಭವಾಗಿದೆ. ಉಳಿದ ಹತ್ತು ಪ್ರಕರಣಗಳಲ್ಲಿ ಕಪ್ಪು ಹಣ ಕಾಯಿದೆ ಜಾರಿ ಮಾಡಲಾಗುತ್ತಿದೆ'' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

''ತೆರಿಗೆ ಸಂಗ್ರಹ ವಿಚಾರದಲ್ಲಿ ಮುಂಬೈ ಮತ್ತು ದಿಲ್ಲಿ ಬಳಿಕ ಮೂರನೇ ಸ್ಥಾನದಲ್ಲಿ ಕರ್ನಾಟಕ ವಲಯವಿದೆ. 2017-18ನೇ ಸಾಲಿನಲ್ಲಿ 1.03 ಲಕ್ಷ ರೂ. ತೆರಿಗೆ ಸಂಗ್ರಹಿಸಲಾಗಿದ್ದು, ಈ ಬಾರಿ ಆರ್ಥಿಕ ವರ್ಷ ಪೂರ್ಣಗೊಳ್ಳುವ ಮೊದಲೇ 1.11 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಈವರೆಗೆ 15,340 ಕೋಟಿ ರೂ. ರಿಫಂಡ್‌ ಮಾಡಲಾಗಿದೆ'' ಎಂದು ತಿಳಿಸಿದರು.

2018-19ರ ಫೆಬ್ರವರಿ ಅಂತ್ಯದವರೆಗೆ ತನಿಖೆ

144 ಕಡೆ ಅಧಿಕಾರಿಗಳಿಂದ ಶೋಧ ಕಾರಾರ‍ಯಚರಣೆ

4,711 ಕೋಟಿ ರೂ. ಒಪ್ಪಿಕೊಂಡಿರುವ ಅಘೋಷಿತ ಆದಾಯ ಪತ್ತೆ

7,098 ಕೋಟಿ ರೂ. ಒಟ್ಟಾರೆ ಅಘೋಷಿತ ಆದಾಯ ಪತ್ತೆ

175 ಕೋಟಿ ರೂ. ನಗದು ಜಪ್ತಿ

20,390 ಪ್ರಕರಣಗಳಲ್ಲಿ ಐಟಿ ರಿಟರ್ನ್ಸ್‌ಗಳ ಕುರಿತು ಪರಿಶೀಲನೆ

ತನಿಖೆ ನಡೆಸಿರುವುದು

ರಾಜಕಾರಣಿಗಳು, ಅಧಿಕಾರಿಗಳು, ಬಹುರಾಷ್ಟ್ರೀಯ ಕಂಪನಿಗಳು, ಗಣಿ ಮಾಲೀಕರು, ಸಿನಿಮಾ ನಟರೂ ಸೇರಿದಂತೆ ಹಲವರ ಮನೆ, ಕಚೇರಿ ಯಲ್ಲಿ ತನಿಖೆ ನಡೆದಿದೆ.


212.83 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ:

''ಇನ್‌ಫೆಂಟ್ರಿ ರಸ್ತೆಯಲ್ಲಿ ಐಟಿ ಇಲಾಖೆಗೆ ಸೇರಿದ 57,509 ಚದರಡಿ ವಿಸ್ತೀರ್ಣದ ಜಾಗವಿದೆ. ಅಲ್ಲಿ ಅತ್ಯಾಧುನಿಕ ಸೌಲಭ್ಯಗಳ 18 ಮಹಡಿಯ ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡುಲಾಗುತ್ತಿದೆ. 212.83 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟಡ ಮೂರೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ