ಆ್ಯಪ್ನಗರ

ಜಾಲಪ್ಪ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ; ಮಾಜಿ ಸಿಎಂ ಸಿದ್ದರಾಮಯ್ಯ ಅರಸು ಶಿಕ್ಷಣ ಸಂಸ್ಥೆಯ ಟ್ರಸ್ಟಿ

ಜಾಲಪ್ಪ ಅವರ ಅದ್ಯಕ್ಷತೆಯಲ್ಲಿರುವ ಅರಸು ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಲ್ಲಿ ಸಿದ್ದರಾಮಯ್ಯ ಸಹ ಒಬ್ಬರಾಗಿದ್ದಾರೆ.

Vijaya Karnataka 12 Oct 2019, 8:52 am
ಚಿಕ್ಕಬಳ್ಳಾಪುರ: ಆರ್‌.ಎಲ್‌.ಜಾಲಪ್ಪ ಒಡೆತನದ ಸಂಸ್ಥೆ ಮತ್ತು ಸಂಬಂಧಿಕರ ಮನೆಗಳಲ್ಲಿ ಶುಕ್ರವಾರವೂ ಐಟಿ ಅಕಾರಿಗಳು ಶೋಧ ನಡೆಸಿದರು. 1984ರಲ್ಲಿ ನೋಂದಣಿಯಾದ ಶ್ರೀ ದೇವರಾಜ ಅರಸು ಶಿಕ್ಷಣ ಟ್ರಸ್ಟ್‌ ಅಡಿಯಲ್ಲಿ ಮೆಡಿಕಲ್‌ ಕಾಲೇಜು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ನಡೆಯುತ್ತಿದೆ.
Vijaya Karnataka Web Siddaramaiah


ಪರಮೇಶ್ವರ್, ಜಾಲಪ್ಪ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ: ತಿಂಗಳ ಹಿಂದೆಯೇ ನಡೆದಿತ್ತು ತಯಾರಿ

ಆರ್‌.ಎಲ್‌.ಜಾಲಪ್ಪ ಅವರ ಅಧ್ಯಕ್ಷತೆಯಲ್ಲಿನ ಈ ಟ್ರಸ್ಟ್‌ನ ಎಂಟು ಮಂದಿ ಆಡಳಿತ ಮಂಡಳಿಯಲ್ಲಿ ಸಿದ್ದರಾಮಯ್ಯ ಅವರೂ ಒಬ್ಬರು. ಹೀಗಾಗಿ ಅವರನ್ನೂ ಐಟಿ ಅಧಿಕಾರಿಗಳು ವಿಚಾರಣೆ ಮಾಡುವ ಸಾಧ್ಯತೆಗಳಿವೆ. ಜಾಲಪ್ಪ ಪುತ್ರ ನಾಗರಾಜ್‌, ಮನೆಯ ಕಾಂಪೌಂಡ್‌ ಆಚೆ ನೆರೆದಿದ್ದ ಸುದ್ದಿಗಾರರನ್ನು ಉದ್ದೇಶಿಸಿ, ನಮ್ಮ ಎಲ್ಲಾ ವ್ಯವಹಾರ ಪಾರದರ್ಶಕವಾಗಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ, ಎಂದು ಪ್ರತಿಕ್ರಿಯಿಸಿದರು.

ಐಟಿ ದಾಳಿಯಲ್ಲಿ ಮೆಡಿಕಲ್‌ ಮಾಫಿಯಾದ ಬೃಹತ್ ಜಾಲ ಬಯಲು

ತೆರಿಗೆ ಪಾವತಿಗೆ ನಗರಸಭೆ ವಾರ್ನಿಂಗ್‌: ಇದೇ ವೇಳೆ ನಗರಸಭೆಯವರು ತಮಗೆ ಬಾಕಿ ಇರುವ 11 ಕೋಟಿ ರೂ. ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸುವಂತೆ ಜಾಲಪ್ಪ ಸಂಸ್ಥೆಗಳಿಗೆ ಎಚ್ಚರಿಕೆ ನೋಟಿಸ್‌ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ