ಆ್ಯಪ್ನಗರ

ಸೋನಿಯಾ ಭೇಟಿಯಾಗಿ ವರದಿ ಒಪ್ಪಿಸಿದ ಪರಂ: ಸಿದ್ದುಗೆ ಸಿಗದ ಅವಕಾಶ ಪರಂಗೆ!

ಇತ್ತೀಚೆಗಷ್ಟೇ ಹೊಸದಿಲ್ಲಿಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಸೋನಿಯಾ ಗಾಂಧಿಯವರನ್ನು ಭೇಟಿಯಾಗಲು ಪ್ರಯತ್ನಿಸಿ, ಸಾಧ್ಯವಾಗದೆ ಹಿಂದಿರುಗಿದ್ರು. ಇದೀಗ ಮಾಜಿ ಡಿಸಿಎಂ ಪರಮೇಶ್ವರ್‌ಗೆ ಆ ಅದೃಷ್ಟ ಒಲಿದಿದೆ. ಸದ್ದಿಲ್ಲದೆ ಸೋನಿಯಾ ಅವರನ್ನು ಭೇಟಿಯಾದ ಪರಂ, ರಾಜ್ಯದ ವಿದ್ಯಮಾನಗಳ ವರದಿ ಒಪ್ಪಿಸಿದ್ದಾರೆ!

Vijaya Karnataka Web 17 Sep 2019, 9:31 pm
ಹೊಸದಿಲ್ಲಿ: ಮಾಜಿ ಡಿಸಿಎಂ ಜಿ.ಪರಮೇಶ್ವರ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್‌ ವಿದ್ಯಮಾನಗಳ ಬಗ್ಗೆ ಸಮಗ್ರವಾಗಿ ವಿವರ ಒಪ್ಪಿಸಿದ್ದಾರೆ.
Vijaya Karnataka Web siddu sonia param


ಕಳೆದ ವಾರ ದಿಲ್ಲಿಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ 2 ದಿನ ವಾಸ್ತವ್ಯ ಹೂಡಿದ್ದರೂ ಸೋನಿಯಾ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಸೋನಿಯಾ ಅವರನ್ನು ಮಂಗಳವಾರ ಭೇಟಿಯಾಗಿದ್ದ ಬಗ್ಗೆ ಸ್ವತಃ ಪರಮೇಶ್ವರ ಅವರೇ ಟ್ವೀಟ್‌ ಮೂಲಕ ಖಚಿತ ಪಡಿಸಿದ್ದಾರೆ.


ದೋಸ್ತಿ ಸರಕಾರದ ಪತನದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲೇ ಬಣ ರಾಜಕೀಯ ಚುರುಕಾಗಿದೆ. ಪ್ರತಿಪಕ್ಷದ ನಾಯಕನ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಮತ್ತೊಂದೆಡೆ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದ್ದು, ಕಾರ್ಯಕರ್ತರ ಆತ್ಮಸ್ಥೈರ್ಯ ಕುಸಿದಿದೆ. ಈ ಎಲ್ಲ ವಿಚಾರವನ್ನೂ ಸೋನಿಯಾ ಗಾಂಧಿ ಗಮನಕ್ಕೆ ತಂದರು. ಪಕ್ಷಕ್ಕೆ ಪುನಶ್ಚೇತನವಾಗಬೇಕು. ಪಕ್ಷ ನಿಷ್ಟರಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಸಲಹೆ ನೀಡಿದರು ಎನ್ನಲಾಗಿದೆ.

ಖಾಸಗಿ ಶಾಲೆಗಳ ಎಡವಟ್ಟು!: ಓದಿದ ತರಗತಿಯಲ್ಲೇ ಮತ್ತೆ ಓದಬೇಕು ವಿದ್ಯಾರ್ಥಿಗಳು

ಡಿಕೆಶಿ ಪರವಾಗಿ ಪರಂ ಬ್ಯಾಟಿಂಗ್

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಪಕ್ಷ ವಹಿಸಿದ್ದ ಎಲ್ಲ ಜವಾಬ್ದಾರಿಯನ್ನೂ ಅವರು ಸಮರ್ಥವಾಗಿ ನಿಭಾಯಿಸಿದ್ದರು. ಹಾಗಾಗಿ ಕಷ್ಟಕಾಲದಲ್ಲಿಅವರ ಬೆನ್ನಿಗೆ ಪಕ್ಷ ನಿಲ್ಲಬೇಕು ಎಂದು ಸೋನಿಯಾ ಬಳಿ ಪರಮೇಶ್ವರ ಪ್ರಸ್ತಾಪಿಸಿದರು ಎಂದು ತಿಳಿದು ಬಂದಿದೆ.

ಡಿಕೆಶಿ ಭೇಟಿ ಮಾಡಿದ ಪರಂ

ಈ ಮಧ್ಯೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನೂ ಪರಮೇಶ್ವರ್ ಭೇಟಿಯಾಗಿದ್ದಾರೆ. ಈ ಸಂಬಂಧವೂ ಟ್ವೀಟ್‌ ಮಾಡಿರುವ ಅವರು, 'ದಿಲ್ಲಿಯ ಆಸ್ಪತ್ರೆಯಲ್ಲಿ ನನ್ನ ಸ್ನೇಹಿತ ಹಾಗೂ ಮಾಜಿ ಸಚಿವ ಡಿ. ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದೇನೆ. ಅವರ ಆರೋಗ್ಯ ಸುಧಾರಿಸಲಿ. ಕಾನೂನು ಹೋರಾಟದಲ್ಲಿಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ' ಎಂದು ಪರಮೇಶ್ವರ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.


ಎನ್‌ಜಿಒ ಹೆಸರಲ್ಲಿ ಮತಾಂತರ!: 18 ಸಾವಿರ ಸಂಸ್ಥೆಗಳ ಬಾಲ ಕತ್ತರಿಸಿದ ಮೋದಿ ಸರ್ಕಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ