ಆ್ಯಪ್ನಗರ

ರಾಜ್ಯಾದ್ಯಂತ ‘ಸುಜಲಾ’ ಯೋಜನೆ ವಿಸ್ತರಣೆಗೆ ಕ್ರಮ

ಹಣ್ಣು ಹಾಗೂ ...

Vijaya Karnataka 24 Aug 2019, 5:00 am
ಬೆಂಗಳೂರು: ಹಣ್ಣು ಹಾಗೂ ತರಕಾರಿಯನ್ನು ತಾಜಾ ಸ್ಥಿತಿಯಲ್ಲೇ ಗ್ರಾಹಕರಿಗೆ ತಲುಪಿಸಲು ಸಂಚಾರಿ ಮಾರಾಟ ವಾಹನ ಸೌಲಭ್ಯದ 'ಸುಜಲಾ' ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ರಾಜ್ಯ ಸರಕಾರ ಹಾಗೂ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) ಸಹಮತ ವ್ಯಕ್ತಪಡಿಸಿವೆ.
Vijaya Karnataka Web dinesh


ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಐಐಎಚ್‌ಆರ್‌ ನಿರ್ದೇಶಕ ಡಾ. ಎಂ.ಆರ್‌.ದಿನೇಶ್‌ ''ಮೈಸೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಜಾರಿಗೆ ತಂದಿರುವ ಪ್ರಾಯೋಗಿಕ ಯೋಜನೆಗೆ ನಾಗರಿಕರ ಸ್ಪಂದನೆ ವ್ಯಕ್ತವಾಗಿದೆ,''ಎಂದರು.

''ಪ್ರತಿ ಮಾರಾಟದ ವಾಹನದಲ್ಲಿ 300-400 ಕೆ.ಜಿ. ಉತ್ಪನ್ನವನ್ನು ಸಂಗ್ರಹಿಸಬಹುದು. ಉತ್ಪನ್ನಗಳನ್ನು ತಾಜಾ ಆಗಿ ಇಡಲು ಸೌರ ಪ್ಯಾನೆಲ್‌ಗಳ ಮೂಲ ಉಷ್ಣಾಂಶ ನಿಯಂತ್ರಿಸುವ ವ್ಯವಸ್ಥೆ ಮಾಡಲಾಗಿದೆ. ಯೋಜನೆ ಬಗ್ಗæ್ಗ ಕೇರಳ, ಒಡಿಶಾ ಹಾಗೂ ಪುದಿಚೇರಿ ರಾಜ್ಯಗಳು ಆಸಕ್ತಿ ತೋರಿವೆ,'' ಎಂದರು.

ಎಟಿಎಂ ಮಾದರಿಯಲ್ಲಿ ಬೀಜ ಪ್ಯಾಕೆಟ್‌ ವಿತರಣೆ

'' ಹಣ್ಣು ಹಾಗೂ ತರಕಾರಿ ಬೀಜ ಪಡೆಯಲು ಎಟಿಎಂ ಮಾದರಿಯಲ್ಲಿ ಯಂತ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ತೋಟಗಾರಿಕೆ ಇಲಾಖೆಗೆ ಕಳುಹಿಸಲಾಗಿದೆ. ಪ್ಯಾಕೆಟ್‌ ಪಡೆಯಲು 10 ರೂ., 20 ರೂ. ನೋಟನ್ನು ಯಂತ್ರಕ್ಕೆ ಗ್ರಾಹಕರೇ ತುಂಬ ವ್ಯವಸ್ಥೆ ಇದೆ. ಹಣ ಪಾವತಿಯಾಗುತ್ತಿದ್ದಂತೆ ಯಂತ್ರದ ಕೆಳ ಭಾಗದ ಟ್ರೇನಲ್ಲಿ ಪ್ಯಾಕೆಟ್‌ ಬಿದ್ದ ನಂತರ ಅದನ್ನು ಸ್ವೀಕರಿಸುವ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ,'' ಎಂದರು.

ಸಂಸ್ಥೆಯ ಪ್ರಧಾನ ವಿಜ್ಞಾನಿಗಳಾದ ಡಾ.ಬಿ.ನಾರಾಯಣಸ್ವಾಮಿ, ಡಾ.ಪ್ರಕಾಶ್‌ ಪಾಟೀಲ್‌, ತರಬೇತಿ ವಿಭಾಗದ ಮುಖ್ಯಸ್ಥ ಡಾ.ಆರ್‌.ವೆಂಕಟಕುಮಾರ್‌ ಹಾಜರಿದ್ದರು.

ರೋಗ ನಿರೋಧಕ ತಳಿಗಳ ಅಭಿವೃದ್ಧಿ

ಸಂಸ್ಥೆಯು ಬರ ಹಾಗೂ ರೋಗ ನಿರೋಧಕ ಅಂಶಗಳುಳ್ಳ ತೋಟಗಾರಿಕೆ ಬೆಳೆಗಳ ತಳಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನಿರತವಾಗಿದೆ. ಬರದಲ್ಲೂ ಬೆಳೆಯಬಹುದಾದ ಅವರೆ, ಅಲಸಂದೆ ಹಾಗೂ ಹೆಚ್ಚು ಉಷ್ಣಾಂಷ ತಾಳಿಕೊಳ್ಳುವ ಬಟಾಣಿ, ಕ್ಯಾಪ್ಸಿಕಂ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. 5-6 ದಿನಗಳವರೆಗೆ ಟೊಮೇಟೊ ಗಿಡಗಳು ನೀರಿನಲ್ಲಿ ಮುಳುಗಿದರೂ 'ಬೇರು ಸಸಿ' ಮಾದರಿಯಿಂದ ಬೆಳೆ ರಕ್ಷಿಸಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ