ಆ್ಯಪ್ನಗರ

ಸಾಲಕೊಟ್ಟವನಿಗೆ ಹನಿಟ್ರ್ಯಾಪ್‌ ಮಾಡಿದ ಮಹಿಳೆಯರು: ಬೆಳಗಾವಿಯಲ್ಲಿ ಹನಿಟ್ರ್ಯಾಪ್‌ ದಂಧೆಯದ್ದೇ ಸದ್ದು

ಇತ್ತೀಚೆಗೆ ಹನಿಟ್ರ್ಯಾಪ್‌ ದಂಧೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಇದೇ ರೀತಿ ಬೆಳಗಾವಿಯಲ್ಲೂ ಹನಿಟ್ರ್ಯಾಪ್‌ ದಂಧೆ ಸದ್ದು ಮಾಡುತ್ತಿದೆ. ಮಹಿಳೆಯರೇ ದಂಧೆ ನಡೆಸುತ್ತಿದ್ದು, ಈ ಸಂಬಂಧ ಹಲವರನ್ನು ಬಂಧಿಸಲಾಗಿದೆ.

Vijaya Karnataka 4 Dec 2019, 9:52 am
ಬೆಳಗಾವಿ: ಬೆಳಗಾವಿಯಲ್ಲಿ 'ಹನಿಟ್ರ್ಯಾಪ್‌' ದಂಧೆ ಸದ್ದು ಮಾಡುತ್ತಿದ್ದು, ಈ ಕೃತ್ಯ ನಡೆಸಲು ಯತ್ನಿಸಿದ ಮತ್ತೊಂದು ತಂಡವನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ. ಈ ಬಾರಿ ಒಬ್ಬ ಬಾಲಕ, ಇಬ್ಬರು ಮಹಿಳೆ ಸೇರಿ ಆರು ಜನರ ತಂಡವನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web 3PRAMOD1045727
ಪೊಲೀಸರು ಬಂಧಿಸಿದ ಹನಿಟ್ರ್ಯಾಪ್‌ ಆರೋಪಿ ಗ್ಯಾಂಗ್‌


ಬೆಳಗಾವಿ ನಗರದ ಕ್ಯಾಂಪ್‌ ಪ್ರದೇಶದ ಕಾಕರ್‌ಸ್ಟ್ರೀಟ್‌ನ ಅಲೀಶಾನ್‌ ಶಾಬುದ್ದೀನ್‌ ಸೈಯ್ಯದ್‌, ಮಾರ್ಕೆಟ್‌ ಸ್ಟ್ರೀಟ್‌ನ ಅಖೀಬ್‌ ಅಲ್ಲಾಭಕ್ಷ್ ಬೇಪಾರಿ, ಬೀಫ್‌ಬಜಾರ್‌ ಸ್ಟ್ರೀಟ್‌ನ ಸಲ್ಮಾನ್‌ ಗುಲಾಜ್‌ ಬೇಗ್‌ ಅವರೊಂದಿಗೆ ಮಹಾಂತೇಶ ನಗರ ಮತ್ತು ರುಕ್ಮಿಣಿ ನಗರ ಆಶ್ರಯ ಕಾಲನಿ ಮೂಲದ ಇಬ್ಬರು ಮಹಿಳೆಯರು ಹಾಗೂ ಓರ್ವ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಬಟ್ಟೆ ಅಂಗಡಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯರಲ್ಲಿ ಓರ್ವಳು ವೀರಭದ್ರ ನಗರದ ಎಂ.ಎಂ. ಮುಜಾವರ್‌ ಅವರಿಗೆ ಆರು ಲಕ್ಷ ರೂ. ಹಣ ಕೊಡಬೇಕಿತ್ತು. ಈಚೆಗೆ ಮುಜಾವರ್‌ ಅವರನ್ನು ಮಹಾಂತೇಶ ನಗರದಲ್ಲಿ ಸಂಪರ್ಕಿಸಿದ ಆರೋಪಿ ಮಹಿಳೆಯರು ಬಾಕಿ ಹಣ ಕೊಡುವುದಾಗಿ ಹೇಳಿ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಯುವತಿಯ ಸೊಂಟ ಸವರಿ 'ಕಳಂಕದ ಬಂಡಿ' ಹತ್ತಿದ ಬಿಜೆಪಿಯ ರಸಿಕ ಶಾಸಕ!

ಈ ವೇಳೆ ಮೊದಲೇ ಮನೆಯಲ್ಲಿದ್ದ ಆರೋಪಿಗಳಾದ ಅಲೀಶಾನ್‌, ಅಖೀಬ್‌, ಸಲ್ಮಾನ್‌ ಹಾಗೂ ಬಾಲಕ ಸೇರಿ ಮುಜಾವರ್‌ ಅವರನ್ನು ಕೂಡಿ ಹಾಕಿದ್ದಾರೆ. ಅಲ್ಲದೆ, ಅವರನ್ನು ನಗ್ನಗೊಳಿಸಿ 16,500 ರೂ. ನಗದು, ಕೈ ಗಡಿಯಾರ ಕಸಿದುಕೊಂಡು, ನಗ್ನ ವಿಡಿಯೊ ಮಾಡಿ ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಮುಜಾವರ್‌ ಅವರು 2.50 ಲಕ್ಷ ರೂ. ತಂದು ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಮಾಳಮಾರುತಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸಂಚಲನ; ‘ಹನಿ’ ಗೂಡಿನಲ್ಲಿ ಅನರ್ಹರಿಬ್ಬರು ಟ್ರ್ಯಾಪ್ !

ಇನ್‌ಸ್ಪೆಕ್ಟರ್‌ ಬಿ.ಆರ್‌. ಗಡ್ಡೇಕರ್‌, ಸಬ್‌ ಇನ್‌ಸ್ಪೆಕ್ಟರ್‌ ಹೊನ್ನಪ್ಪ ತಳವಾರ, ಎಂ.ಜಿ. ಕುರೇರ್‌. ಕೆಂಪಣ್ಣ ಗೌರಾಣಿ, ಲತೀಫ್‌ ಮುಶಾಪುರಿ, ವಿ.ಎಚ್‌ ದೊಡಮನಿ, ಶಿವಶಂಕರ ಗುಡದಯ್ಯಗೋಳ, ಮಂಜುನಾಥ ಮೇಲಸರ್ಜಿ, ಜೆ.ಕೆ. ಲಡಂಗಿ, ಎಸ್‌.ಎ. ಗಾಳಿ ದಾಳಿಯಲ್ಲಿದ್ದರು.

ಅತ್ಯಾಚಾರ ಕೇಸ್‌ ಬೆದರಿಕೆ:
ಆರೋಪಿಗಳು ಹಣ ಕೊಡದೇ ಇದ್ದರೆ ಅತ್ಯಾಚಾರ ಕೇಸ್‌ ದಾಖಲಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಮುಜಾವರ್‌ ಅವರನ್ನು ಬೆದರಿಸಿದ್ದರು. ಮುಜಾವರ್‌ ದೂರಿನ ಆಧಾರದ ಮೇಲೆ ಭಾನುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕ ಸೇರಿ ಎಲ್ಲ ಆರು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 16,500 ರೂ. ನಗದು, ವಿಡಿಯೊ ಮಾಡಲು ಬಳಸಿದ ಮೊಬೈಲ್‌, ಮೂರು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಗೋಕಾಕದಲ್ಲಿಯೂ ನಡೆದಿತ್ತು:
ಉದ್ಯಮಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದ ಗ್ಯಾಂಗ್‌ವೊಂದನ್ನು ಕೆಲ ದಿನಗಳ ಹಿಂದೆ ಗೋಕಾಕ ಪೊಲೀಸರು ಬಂಧಿಸಿದ್ದರು.

ಸುಮಾರು ಏಳು ಜನರ ಗ್ಯಾಂಗ್‌ ಬೆಳಗಾವಿ ಜಿಲ್ಲೆಯ ಹಲವು ಭಾಗದಲ್ಲಿ ಹನಿಟ್ರ್ಯಾಪ್‌ ಮಾಡಿದ ಬಗ್ಗೆ ಬೆಳಕಿಗೆ ಬಂದಿತ್ತು. ಆ ಗ್ಯಾಂಗ್‌ ಕೂಡ ಇದೇ ರೀತಿ ಹಣವಂತರನ್ನು ಕೋಣೆಯಲ್ಲಿಕೂಡಿ ಹಾಕಿ ನಗ್ನಗೊಳಿಸಿ ವಿಡಿಯೊ ಮಾಡಿ ಹೆದರಿಸಿ ಹಣ ಕೀಳುತ್ತಿತ್ತು. ಆ ಗ್ಯಾಂಗ್‌ನ ಕಿರುಕುಳಕ್ಕೆ ಬೇಸತ್ತ ವ್ಯಾಪಾರಿಯೊಬ್ಬ ಆತ್ಮಹತ್ಯೆಗೆ ಮುಂದಾಗಿದ್ದ. ಕೊನೆ ಗಳಿಗೆಯಲ್ಲಿ ಸ್ನೇಹಿತನಿಂದ ಬಚಾವ್‌ ಆಗಿ ಪೊಲೀಸರಿಗೆ ದೂರು ಕೊಟ್ಟಿದ್ದ. ಅದರ ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಆತಂಕ ಸೃಷ್ಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ