ಆ್ಯಪ್ನಗರ

ಗ್ಯಾಸ್‌ ಸ್ಟೌ ಖರೀದಿಯಲ್ಲಿ ಅಕ್ರಮ ಸುಳ್ಳು: ಜಾರ್ಜ್‌

ಸಿಎಂ ಅನಿಲಭಾಗ್ಯ ಯೋಜನೆಯಡಿ ಎಂಎಸ್‌ಐಎಲ್‌ ಮೂಲಕ ಗ್ಯಾಸ್‌ ಸ್ಟೌ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆಪಾದನೆಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ.ಜೆ.ಜಾರ್ಜ್‌ ನಿರಾಕರಿಸಿದ್ದಾರೆ.

Vijaya Karnataka 27 Jul 2018, 9:34 am
ಬೆಂಗಳೂರು: ಸಿಎಂ ಅನಿಲಭಾಗ್ಯ ಯೋಜನೆಯಡಿ ಎಂಎಸ್‌ಐಎಲ್‌ ಮೂಲಕ ಗ್ಯಾಸ್‌ ಸ್ಟೌ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆಪಾದನೆಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ.ಜೆ.ಜಾರ್ಜ್‌ ನಿರಾಕರಿಸಿದ್ದಾರೆ.
Vijaya Karnataka Web K J


ಗುರುವಾರ ಎಂಎಸ್‌ಐಎಲ್‌ ಕಚೇರಿಗೆ ಭೇಟಿ ನೀಡಿದ ಜಾರ್ಜ್‌ ಸುದ್ದಿಗಾರರೊಂದಿಗೆ ಮಾತನಾಡಿ ''ಸರಕಾರಿ ಆದೇಶ ಹೊರಡಿಸುವ ಮೊದಲೇ ಗ್ಯಾಸ್‌ ಸ್ಟೌ ಖರೀದಿ ಮಾಡಲಾಗಿದೆ ಎಂಬ ಆರೋಪ ಸುಳ್ಳು. ಸ್ಯಾಂಪಲ್‌ಗಾಗಿ ಸಂಸ್ಥೆಗಳಿಂದ ಸ್ಟೌಗಳನ್ನು ತರಿಸಿಕೊಳ್ಳಲಾಗಿದೆ'' ಎಂದು ತಿಳಿಸಿದರು.

''ಸಿಎಂ ಅನಿಲ ಭಾಗ್ಯ ಯೋಜನೆ ಜಾರಿ ಮಾಡುವ ತೀರ್ಮಾನ ಮೂರ್ನಾಲ್ಕು ತಿಂಗಳ ಹಿಂದೆಯೇ ನಡೆದಿದೆ. ಹೀಗಾಗಿ, ಫಲಾನುಭವಿಗಳಿಗೆ ಪೂರೈಕೆಗಾಗಿ ತಯಾರಿ ಮಾಡಿಕೊಳ್ಳಲಾಗಿದೆ. ಪಾರದರ್ಶಕ ಕಾಯಿದೆ ಪ್ರಕಾರವೇ ಎಲ್ಲ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಯಾವ ಗೋಲ್‌ಮಾಲ್‌ ನಡೆದಿಲ್ಲ'' ಎಂದು ಸಮಜಾಯಿಷಿ ನೀಡಿದರು. ಎಂ ಎಸ್‌ ಐ ಎಲ್‌ ಅಧ್ಯಕ್ಷ ಪ್ರಕಾಶ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ