ಆ್ಯಪ್ನಗರ

ಕನ್ನಡ ಸಾಹಿತ್ಯ ಸಮ್ಮೇಳನ: ಹಿರಿಯ ಅಧಿಕಾರಿಯಾದ್ಧರಿಂದ ಗೌರವ ನೀಡುತ್ತಾರೆಂದ ಡಿ. ರೂಪಾ

ನಾವು ಅವರಿಗಿಂತ ಹಿರಿಯ ಅಧಿಕಾರಿಯಾಗಿದ್ದರೂ ಮಹಿಳೆ. ಅವಳಿಗೆ ನಮ್ಮಷ್ಟು ಲೋಕಾನುಭವನ ಇರುವುದಿಲ್ಲ. ಕೇವಲ ಓದಿ ಐಪಿಎಸ್ ಪರೀಕ್ಷೆ ಪಾಸ್ ಮಾಡಿರುತ್ತಾರೆ. ಪ್ರಾಯೋಗಿಕ ಜ್ಞಾನ ಕಡಿಮೆ ಎನ್ನುವುದೇ ಇದಕ್ಕೆ ಪ್ರಮುಖ ಕಾರಣ. ಈ ಭಾವನೆ ಬದಲಾಯಿಸುವುದೇ ಒಂದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ರೂಪಾ ಅವರು.

Vijaya Karnataka 5 Jan 2019, 11:57 pm
- ವಿಜಯ ಹೂಗಾರ್ ಅಂಬಿಕಾತನಯದತ್ತ ಪ್ರಧಾನ ವೇದಿಕೆ ಧಾರವಾಡ
Vijaya Karnataka Web D Roopa

ಐಪಿಎಸ್ ಮಹಿಳಾ ಅಧಿಕಾರಿಗಳು ನೀಡಿದ ಆದೇಶ ಪಾಲನೆಗೆ ಕೆಳಗಿನ ಕೆಲ ಪುರುಷ ಪೊಲೀಸ್ ಅಧಿಕಾರಿಗಳು ಉದಾಸೀನತೆ ತೋರುವುದು ಸಾಮಾನ್ಯವಾಗಿದೆ ಎನ್ನುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಲಿಂಗ ತಾರತಮ್ಯ ಇನ್ನೂ ಜೀವಂತವಿದೆ ಎಂಬ ಸಂಗತಿಯನ್ನು ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಬಹಿರಂಗಪಡಿಸಿದ್ದಾರೆ.

‘ಮಹಿಳಾ ಸಂವೇದನೆ’ ಗೋಷ್ಠಿಯಲ್ಲಿ ‘ಮಹಿಳೆ ಮತ್ತು ಕಾನೂನುಗಳು’ ಕುರಿತು ಅವರು ಮಾತನಾಡಿದ ಅವರು, ‘‘ಹಿರಿಯ ಅಧಿಕಾರಿ ಎನ್ನುವ ಕಾರಣಕ್ಕೆ ಅವರು ಬೇಸರದ ಮನಸ್ಸಿನಿಂದ ಕೆಲಸ ಮಾಡುತ್ತಾರೆಯೇ ಹೊರತೂ ಮನಪೂರ್ವಕವಾಗಿ ಪ್ರೀತಿಯಿಂದ ಕೆಲಸ ಮಾಡುವುದಿಲ್ಲ. ಇದು ವಾಸ್ತವ,’’ ಎಂದರು.

‘‘ನಾವು ಅವರಿಗಿಂತ ಹಿರಿಯ ಅಧಿಕಾರಿಯಾಗಿದ್ದರೂ ಮಹಿಳೆ. ಅವಳಿಗೆ ನಮ್ಮಷ್ಟು ಲೋಕಾನುಭವನ ಇರುವುದಿಲ್ಲ. ಕೇವಲ ಓದಿ ಐಪಿಎಸ್ ಪರೀಕ್ಷೆ ಪಾಸ್ ಮಾಡಿರುತ್ತಾರೆ. ಪ್ರಾಯೋಗಿಕ ಜ್ಞಾನ ಕಡಿಮೆ ಎನ್ನುವುದೇ ಇದಕ್ಕೆ ಪ್ರಮುಖ ಕಾರಣ. ಈ ಭಾವನೆ ಬದಲಾಯಿಸುವುದೇ ಒಂದು ಸವಾಲಿನ ಕೆಲಸವಾಗಿದೆ,’’ ಎಂದು ಹೇಳಿದರು.

ಮಹಿಳೆ ರಾಜಕೀಯ ಇನ್ನೂ ಕಷ್ಟ
‘ರಾಜಕಾರಣ ಮತ್ತು ಮಹಿಳಾ ಪ್ರಾತಿನಿಧ್ಯ’ ಕುರಿತು ಡಾ.ಕವಿತಾ ರೈ ಮಾತನಾಡಿ, ‘‘ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಇರುವ ರಾಜಕೀಯ ಪ್ರಾತಿನಿಧ್ಯ, ವಿಧಾನಸಭೆ, ಲೋಕಸಭೆಯಲ್ಲಿ ಇಲ್ಲದಾಗಿದೆ. ಭವಿಷ್ಯದ ದಿನಗಳಲ್ಲಿ ಪುರುಷರ ಪಟ್ಟುಗಳನ್ನು ಎದುರಿಸಿ ರಾಜಕೀಯದಲ್ಲಿ ಮುನ್ನಡೆಯದಿದ್ದರೇ ಮಹಿಳೆಯರ ರಾಜಕೀಯ ಪ್ರವೇಶ ಇನ್ನೂ ಕಷ್ಟವಾಗಿದೆ’’ ಎಂದರು. ಮಹಿಳಾ ಆತ್ಮಕಥನಗಳು ಕುರಿತು ಶಶಿಕಲಾ ವಸದ ಮಾತನಾಡಿದರು.

ಪದೇ ಪದೇ ನಮ್ಮನ್ನು ಅಗೌರವಿಸದೇ ನಮನ್ನು ಗೌರವಿಸಿ, ಅರ್ಥ ಮಾಡಿಕೊಂಡು ನಮ್ಮ ಧ್ವನಿಯನ್ನು ಕೇಳಿಸಿಕೊಳ್ಳುವ ಕೆಲಸ ಮಾಡಿದರೆ ಸಮಾಜದಲ್ಲಿ ಲಿಂಗ ಸಮಾನತೆ ತಾನಾಗಿಯೇ ಬರಲಿದೆ.
-ಶಶಿಕಲಾ ವಸ್ತ್ರದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ