ಆ್ಯಪ್ನಗರ

ತೆರಿಗೆ ವಂಚನೆ: ವಿಶ್ವಾಸ್‌ ಉದಯ್‌ ಸಿಂಗ್‌ಗೆ ನಾಲ್ಕು ವರ್ಷ ಜೈಲು

ಆದಾಯ ತೆರಿಗೆ ಕಾಯಿದೆ ಉಲ್ಲಂಘಿಸಿ 13 ಕೋಟಿ ರು. ತೆರಿಗೆ ವಂಚಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡ ಸಂತೋಷ್‌ ಲಾಡ್‌ ಸಂಬಂಧಿ ಉದ್ಯಮಿ ವಿಶ್ವಾಸ್‌ ಉದಯ್‌ಸಿಂಗ್‌ ಲಾಡ್‌ ಎಂಬುವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

Vijaya Karnataka 6 Jun 2018, 9:18 am
ಬೆಂಗಳೂರು: ಆದಾಯ ತೆರಿಗೆ ಕಾಯಿದೆ ಉಲ್ಲಂಘಿಸಿ 13 ಕೋಟಿ ರು. ತೆರಿಗೆ ವಂಚಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡ ಸಂತೋಷ್‌ ಲಾಡ್‌ ಸಂಬಂಧಿ ಉದ್ಯಮಿ ವಿಶ್ವಾಸ್‌ ಉದಯ್‌ಸಿಂಗ್‌ ಲಾಡ್‌ ಎಂಬುವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
Vijaya Karnataka Web IT tax


ತೆರಿಗೆ ವಂಚನೆ ಪ್ರಕರಣದಲ್ಲಿ 2012-13ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಶ್ವಾಸ್‌ ನಿವಾಸ ಮತ್ತು ಅವರ ಕಂಪನಿಗೆ ಸೇರಿದ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು. ನೋಟಿಸ್‌ ನೀಡಿದರೂ ದಾಖಲೆ ಒದಗಿಸಿರಲಿಲ್ಲ. ಆದಾಯ ತೆರಿಗೆ ಕಾಯಿದೆ ಸೆಕ್ಷನ್‌ 276ಸಿ(1) ಮತ್ತು 277ರ ಅಡಿಯಲ್ಲಿ ಮೂರು ಪ್ರಕರಣ ದಾಖಲಿಸಿಕೊಂಡ ಐಟಿ ಇಲಾಖೆ ಅಧಿಕಾರಿಗಳು, ಬೆಂಗಳೂರಿನ ಆರ್ಥಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ವೇಳೆ ಐಟಿ ರಿಟರ್ನ್‌ ಸಲ್ಲಿಕೆಗಾಗಿ ಸುಳ್ಳು ದಾಖಲೆ ಸೃಷ್ಟಿಸಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಐಟಿ ಕಾಯ್ದೆ 276 ಸಿ(1), 277ರ ಪ್ರಕಾರ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ಎರಡು ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ತೆರಿಗೆ ವಂಚನೆಗೆ ಗರಿಷ್ಠ ಶಿಕ್ಷೆ

ಆದಾಯ ತೆರಿಗೆ ವಂಚನೆ ಪ್ರಕರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ತೆರಿಗೆ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆ ಆಗಿರುವುದು ಇದೇ ಮೊದಲು ಎಂದು ಐಟಿ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಹಾಗೂ ತನಿಖಾ ವಿಭಾಗದ ನಿರ್ದೇಶಕ ಬಿ.ಆರ್‌ ಬಾಲಕೃಷ್ಣನ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ