ಆ್ಯಪ್ನಗರ

ಗೋಶಾಲೆ ಅಸಮರ್ಪಕ ಮಾಹಿತಿ: ಕಾರ್ಯದರ್ಶಿ ಹಾಜರಿಗೆ ಆದೇಶ

ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೆರೆದಿರುವ ಗೋಶಾಲೆ ಹಾಗೂ ಜಾನುವಾರು ಶಿಬಿರಗಳ ಬಗ್ಗೆ ಸರಕಾರ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಪಶು ಸಂಗೋಪನಾ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನಿರ್ದೇಶನ ನೀಡಿದೆ.

Vijaya Karnataka 6 Jul 2019, 5:00 am
ಬೆಂಗಳೂರು : ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೆರೆದಿರುವ ಗೋಶಾಲೆ ಹಾಗೂ ಜಾನುವಾರು ಶಿಬಿರಗಳ ಬಗ್ಗೆ ಸರಕಾರ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಪಶು ಸಂಗೋಪನಾ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನಿರ್ದೇಶನ ನೀಡಿದೆ.
Vijaya Karnataka Web goshala information court order
ಗೋಶಾಲೆ ಅಸಮರ್ಪಕ ಮಾಹಿತಿ: ಕಾರ್ಯದರ್ಶಿ ಹಾಜರಿಗೆ ಆದೇಶ


ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಿಜೆ ಎ.ಎಸ್‌.ಓಕ್‌ ಹಾಗೂ ನ್ಯಾ.ಎಚ್‌.ಟಿ. ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಸರಕಾರಿ ವಕೀಲರು ರಾಜ್ಯದಲ್ಲಿ ತೆರೆಯಲಾಗಿರುವ ಗೋ ಶಾಲೆಗಳು, ಜಾನುವಾರು ಶಿಬಿರಗಳು ಮತ್ತು ಅಲ್ಲಿರುವ ಮೇವು ದಾಸ್ತಾನು ಕುರಿತು ಪ್ರಮಾಣಪತ್ರ ಸಲ್ಲಿಸಿದರು. ಆ ಪ್ರಮಾಣಪತ್ರದ ಬಗ್ಗೆ ನ್ಯಾಯಪೀಠ ಅಸಮಧಾನ ವ್ಯಕ್ತಪಡಿಸಿ, ಕಳೆದ ಬಾರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪರಿಹಾರ ನಿಧಿ ಎಷ್ಟಿದೆ, ಕಾಯಿದೆ ಅನುಸಾರ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರ ನೀಡುವಂತೆ ಕೇಳಲಾಗಿತ್ತು ಆ ಬಗ್ಗೆ ಯಾವ ವಿವರವೂ ಇಲ್ಲ ಎಂದು ಕೇಳಿತು.ಅಲ್ಲದೆ, ಪ್ರತಿ ದಿನ ಜಾನುವಾರಿಗೆ 5 ಕೆ.ಜಿ. ಮೇವು ನೀಡುವುದು ಸಾಕಾಗುವುದಿಲ್ಲ ಮತ್ತು ಒಂದು ಜಾನುವಾರಿಗೆ ಮೇವು ಒದಗಿಸಲು ದಿನಕ್ಕೆ 70 ರೂ. ನೆರವು ನೀಡುತ್ತಿರುವುದೂ ಕೂಡ ಅತಿ ಕಡಿಮೆ ಮೊತ್ತವಾಗಿದೆ ಎಂದು ನ್ಯಾಯಪೀಠ ಹೇಳಿತು.

ಈ ಬಗ್ಗೆ ಸಮಗ್ರವಾದ ಮಾಹಿತಿ ನೀಡಲು ಜು.12ರಂದು ನಡೆಯಲಿರುವ ಮುಂದಿನ ವಿಚಾರಣೆ ವೇಳೆ ಇಬ್ಬರು ಅಧಿಕಾರಿಗಳು ಖುದ್ದು ಹಾಜರಾಗಬೇಕೆಂದು ನಿರ್ದೇಶಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ