ಆ್ಯಪ್ನಗರ

350 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಟೆಂಡರ್‌: ಡಿಸಿಎಂ ಲಕ್ಷ್ಮಣ ಸವದಿ

ಹೊಸ ಬಸ್‌ಗಳ‌ ಖರೀದಿಗೆ ಖಾಸಗಿಯವರು ಹೂಡಿಕೆ ಮಾಡಲಿದ್ದು, ಸರಕಾರ ಸಬ್ಸಿಡಿ ನೀಡಲಿದೆ. ಈ ಸಂಬಂಧದ ಟೆಂಡರ್‌ ಪ್ರಕ್ರಿಯೆ ವಾರದೊಳಗೆ ಪೂರ್ಣಗೊಳ್ಳಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

Vijaya Karnataka 7 Jan 2021, 8:34 pm
ಬೆಂಗಳೂರು: ಹುಬ್ಬಳ್ಳಿ - ಧಾರವಾಡ ಹಾಗೂ ಬೆಂಗಳೂರಿನ ಸಂಚಾರಕ್ಕೆ 350 ಎಲೆಕ್ಟ್ರಿಕ್‌ ಬಸ್‌ ಖರೀದಿಸಲಾಗುವುದು ಎಂದು ಸಾರಿಗೆ ಇಲಾಖೆ ಹೊಂದಿರುವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
Vijaya Karnataka Web Laxman Savadi


ಪಿಜಿಯೊ ಸಂಸ್ಥೆ ಅಭಿವೃದ್ಧಿಪಡಿಸಿರುವ ಪರಿಸರ ಸ್ನೇಹಿ ಆಟೋ ರಿಕ್ಷಾವನ್ನು ಸ್ವತಃ ಚಾಲನೆ ಮಾಡಿ ಪರೀಕ್ಷಿಸಿದರು. ಬಳಿಕ ಈ ಆಟೋವನ್ನು ಬಳಕೆಗೆ ಮುಕ್ತಗೊಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಸವದಿ, "ಹೊಸ ಬಸ್‌ ಖರೀದಿಗೆ ಖಾಸಗಿಯವರು ಹೂಡಿಕೆ ಮಾಡಲಿದ್ದು, ಸರಕಾರ ಸಬ್ಸಿಡಿ ನೀಡಲಿದೆ. ಈ ಸಂಬಂಧದ ಟೆಂಡರ್‌ ಪ್ರಕ್ರಿಯೆ ವಾರದೊಳಗೆ ಪೂರ್ಣಗೊಳ್ಳಲಿದೆ. ಪ್ರಾಯೋಗಿಕವಾಗಿ ಈ ಬಸ್‌ಗಳನ್ನು ಕೊಂಡುಕೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸಲು ಹೊಸ ಬಸ್‌ ಖರೀದಿ ಅನಿವಾರ್ಯ," ಎಂದರು.

ಪ್ರೀಮಿಯಂ ಬಸ್‌ಗಳ ಬಾಡಿಗೆ ದರ ಇಳಿಕೆ ಮಾಡಿದ ಕೆಎಸ್‌ಆರ್‌ಟಿಸಿ

"ಬಸ್‌ ಕೊಳ್ಳುವಾಗ ಸಾಲ ಮಾಡುವುದೂ ಅನಿವಾರ್ಯ. ಪ್ರತಿ ಬಾರಿಯೂ ಈ ಉದ್ದೇಶಕ್ಕೆ ಸಾಲ ತೆಗೆದುಕೊಳ್ಳಲಾಗಿದೆ. ಹಳೆಯ ಬಸ್‌ಗಳನ್ನು ನಿಷ್ಕ್ರಿಯಗೊಳಿಸಿದ ಬಳಿಕ ಹೊಸ ಬಸ್‌ ಕೊಳ್ಳದಿದ್ದರೆ ಹೇಗೆ? ರೈತರು ಕೂಡ ಟ್ರ್ಯಾಕ್ಟರ್‌ ಕೊಳ್ಳುವಾಗ ಶೇ.25ರಷ್ಟು ಬಂಡವಾಳ ಹಾಕಿ ಶೇ.75ರಷ್ಟು ಸಾಲ ತೆಗೆದುಕೊಳ್ಳುತ್ತಾರೆ," ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಾರಿಗೆ ನಿಗಮಗಳ ನೌಕರರ ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚಿಸಲಾಗಿದೆ. ನಂತರ ಕ್ರಮ ಕೈಗೊಳ್ಳಲಾಗುವುದು. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಿದ ಬಳಿಕ ಸಿಎಂ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ