ಆ್ಯಪ್ನಗರ

371ಜೆ ಪ್ರಾತಿನಿಧ್ಯ ನೀಡಿರುವುದು ಪಾಯಿಖಾನೆ ಕ್ಲೀನ್‌ ಮಾಡುವುದಕ್ಕಲ್ಲ: ಕಾರಜೋಳ

ಹೈದರಾಬಾದ್‌ ಕರ್ನಾಟಕಕ್ಕೆ 371ಜೆ ಪ್ರಾತಿನಿಧ್ಯ ನೀಡಿರುವುದು ಆ ಭಾಗದ ಜನರಿಗೆ ಪಾಯಿಖಾನೆ ಕ್ಲೀನ್‌ ಮಾಡುವ ಕೆಲಸ ಕೊಡುವುದಕ್ಕಲ್ಲ ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅಸಮಾಧಾನ ...

Vijaya Karnataka 5 Jul 2018, 9:16 am
ಬೆಂಗಳೂರು: ಹೈದರಾಬಾದ್‌ ಕರ್ನಾಟಕಕ್ಕೆ 371ಜೆ ಪ್ರಾತಿನಿಧ್ಯ ನೀಡಿರುವುದು ಆ ಭಾಗದ ಜನರಿಗೆ ಪಾಯಿಖಾನೆ ಕ್ಲೀನ್‌ ಮಾಡುವ ಕೆಲಸ ಕೊಡುವುದಕ್ಕಲ್ಲ ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web Karjol


ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು,''ವಿಧಾನಸೌಧ ಹಾಗೂ ಸಚಿವಾಲಯದಲ್ಲಿ ಇತ್ತೀಚೆಗೆ ನಡೆದ ನೇಮಕ ಸಂದರ್ಭದಲ್ಲಿ 371 ಜೆ ಅನ್ವಯ ಹೈದರಾಬಾದ್‌ ಕರ್ನಾಟಕ ಭಾಗದ ಜನರಿಗೆ ಪ್ರಾತಿನಿಧ್ಯ ನೀಡಿಲ್ಲ. ಈ ಬಗ್ಗೆ ಸರಕಾರ ಸೂಕ್ತ ದಾಖಲೆ ನೀಡಬೇಕು. ಆ ಭಾಗದ ಜನರಿಗೆ ಕೇವಲ ಕಸ ಗುಡಿಸುವುದು, ಪಾಯಿಖಾನೆ ಕ್ಲೀನ್‌ ಮಾಡುವುದಕ್ಕೆ ಮಾತ್ರ ಪ್ರಾತಿನಿಧ್ಯ ನೀಡಿದರೆ 371 ಜೆ ಉದ್ದೇಶ ಸಾಧನೆಯಾಗುವುದಿಲ್ಲ,'' ಎಂದು ಬೇಸರ ವ್ಯಕ್ತಪಡಿಸಿದರು.

ದುಡ್ಡು ಎಮ್ಮೆ, ಕೋಳಿಗೆ ಕೊಡಬೇಡಿ

ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ, ಪಂಗಡದ ವಿಶೇಷ ಘಟಕ ಯೋಜನೆ ಅನ್ವಯ ದಲಿತರಿಗೆ ಕುರಿ, ಕೋಳಿ, ಎಮ್ಮೆ ಖರೀದಿಗೆ ಹಣ ನೀಡುವುದನ್ನು ಮೊದಲು ನಿಲ್ಲಿಸಬೇಕು. ದಶಕಗಳಿಂದ ಈ ಸೌಲಭ್ಯ ನೀಡುತ್ತಾ ಬಂದರೂ ದಲಿತರ ಪರಿಸ್ಥಿತಿ ಸುಧಾರಿಸಲ್ಲ. ಇದರ ಬದಲು ಶಿಕ್ಷಣಕ್ಕೆ ಆದ್ಯತೆ ನೀಡಿ. ಜತೆಗೆ ದಲಿತರಿಗೆ ಭೂಮಿ ಖರೀದಿಗೆ ನಿಗದಿ ಮಾಡಿರುವ 15 ಲಕ್ಷ ರೂ. ಅನುದಾನವನ್ನು 20 ಲಕ್ಷ ರೂ.ಗೆ ಹೆಚ್ಚಳ ಮಾಡಿ,'' ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ