ಆ್ಯಪ್ನಗರ

ಐಎಂಎ ಠೇವಣಿ ವಂಚನೆ ಪ್ರಕರಣ: 'ದೋಸ್ತಿ' ಕಿವಿ ಹಿಂಡಿದ ಎಚ್‌.ಕೆ ಪಾಟೀಲ್

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸರಕಾರ ಈಗ ಕೈಗೊಳ್ಳುತ್ತಿರುವ ಕ್ರಮಗಳು ಸಾಲದು. 100 ದಿನಗಳಲ್ಲಿ ಠೇವಣಿದಾರರ ಹಣ ಮರಳಿಸಲು ಅಗತ್ಯ ಕ್ರಮವಿಡಬೇಕು. ಅನಿಯಂತ್ರಿತ ಠೇವಣಿಗಳ ನಿಯಂತ್ರಣ ಸುಗ್ರೀವಾಜ್ಞೆ 2019ರ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Vijaya Karnataka Web 16 Jun 2019, 10:34 am
ಬೆಂಗಳೂರು: ಐಎಂಎ ಠೇವಣಿ ವಂಚನೆ ಪ್ರಕರಣದಲ್ಲಿ ತನಿಖೆ, ಶಿಕ್ಷೆಯಷ್ಠೇ ಅಲ್ಲ ನೊಂದವರ ಬದುಕನ್ನು ಪುನಃ ಕಟ್ಟಿಕೊಡುವ ಸಾಮಾಜಿಕ ಹೊಣೆಗಾರಿಕೆಯನ್ನು ನಮ್ಮ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ, ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಎಚ್‌.ಕೆ ಪಾಟೀಲ್‌ ಆಗ್ರಹಿಸಿದ್ದಾರೆ.
Vijaya Karnataka Web HK Patil


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸರಕಾರ ಈಗ ಕೈಗೊಳ್ಳುತ್ತಿರುವ ಕ್ರಮಗಳು ಸಾಲದು. 100 ದಿನಗಳಲ್ಲಿ ಠೇವಣಿದಾರರ ಹಣ ಮರಳಿಸಲು ಅಗತ್ಯ ಕ್ರಮವಿಡಬೇಕು. ಅನಿಯಂತ್ರಿತ ಠೇವಣಿಗಳ ನಿಯಂತ್ರಣ ಸುಗ್ರೀವಾಜ್ಞೆ 2019ರ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


ಶಿವಾಜಿನಗರದ ಐ ಮಾನಿಟರಿ ಅಡ್ವೈಸರೀಸ್ (ಐಎಂಎ) ಜ್ಯುವೆಲ್ಲರಿ ಸಂಸ್ಥೆ ಮಾಲೀಕ ಮನ್ಸೂರ್ ಖಾನ್‌ ಸಾವಿರಾರು ಜನರಿಂದ ಠೇವಣಿ ಸಂಗ್ರಹಿಸಿ ಕೋಟ್ಯಂತರ ರೂ ವಂಚಿಸಿ ಪರಾರಿಯಾದ ಹಿನ್ನೆಲೆಯಲ್ಲಿ ಪಾಟೀಲ್ ಈ ಟ್ವೀಟ್ ಮೂಲಕ ಮೈತ್ರಿ ಸರಕಾರದ ಕಿವಿ ಹಿಂಡಿದ್ದಾರೆ.

ಐಎಂಎ ಜ್ಯುವೆಲ್ಸ್‌ನಿಂದ ವಂಚನೆಗೊಳಗಾದ ಸಾವಿರಾರು ಮಂದಿ ಪ್ರತಿದಿನ ದೂರುಗಳನ್ನು ದಾಖಲಿಸುತ್ತಿದ್ದರೂ ರಾಜ್ಯ ಸರಕಾರ ವಂಚಿತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಖಚಿತ ಹಾಗೂ ನಿರ್ದಿಷ್ಟ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಪ್ರತಿಪಕ್ಷ ಬಿಜೆಪಿ ಈ ವಿಚಾರವನ್ನು ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದು, ಗೃಹಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದೆ.

ಐಎಂಎ ಪ್ರಕರಣದಲ್ಲಿ ಈ ವರೆಗೆ 15 ಸಾವಿರ ಕೋಟಿಗೂ ಅಧಿಕ ರೂ ವಂಚನೆಯಾಗಿದ್ದು, ರಾಜ್ಯಾದ್ಯಂತ 35 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ