ಆ್ಯಪ್ನಗರ

ಕೊರೊನಾ ಸಂಬಂಧಿತ ವಿಷಯ ಮರೆಮಾಚುವ ಅವಶ್ಯಕತೆ ಇಲ್ಲ: ಡಾ ಕೆ ಸುಧಾಕರ್

ಸೆಪ್ಟೆಂಬರ್ 19 ರಂದು ಕೋಲಾರದ ಆರ್.ಎಲ್.ಜೆ ಆಸ್ಪತ್ರೆಯಲ್ಲಿ 3 ಸಾವು ಸಂಭವಿಸಿತ್ತು. ಆಸ್ಪತ್ರೆಯು ಮರಣದ ಕಾರಣದ ಬಗ್ಗೆ ನಿಗದಿತ ನಮೂನೆಗಳಲ್ಲಿ ಮಾಹಿತಿ ನೀಡಲು ವಿಳಂಬವಾದ ಕಾರಣ ಅದನ್ನು ಸೆ. 24 ರಂದು ವರದಿ ಮಾಡಲಾಗಿತ್ತು. ಸೆ.20ರಂದು ಸಂಭವಿಸಿದ 1 ಸಾವನ್ನು ಇದೇ ಕಾರಣಕ್ಕಾಗಿ ಸೆ. 25ರಂದು ವರದಿ ಮಾಡಲಾಗಿದೆ

Vijaya Karnataka Web 30 Sep 2020, 9:45 pm
ಬೆಂಗಳೂರು: ಕೊರೊನಾ ಸಂಬಂಧಿತ ಎಲ್ಲಾ ಅಂಕಿ-ಅಂಶಗಳನ್ನು ಪಾರದರ್ಶಕವಾಗಿ ಪ್ರಕಟಿಸುವಲ್ಲಿ ನಮ್ಮ ಸರಕಾರ ಇಡೀ ದೇಶದಲ್ಲೇ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.‌ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.
Vijaya Karnataka Web ಸುಧಾಕರ್‌
ಸುಧಾಕರ್‌



ಕೋಲಾರದಲ್ಲಿ ಕೊರೊನಾದಿಂದ ಸಾವಿನ್ನಪ್ಪಿದವರ ಬಗ್ಗೆ ನಿಖರ ಅಂಕಿ‌-ಅಂಶ ನೀಡಿಲ್ಲವೆಂದು ಸಿದ್ದರಾಮಯ್ಯ ಆರೋಪದ ಟ್ವೀಟ್‌ಗೆ, ಟ್ವೀಟ್ ಮೂಲಕವೇ ಸಚಿವರು ಉತ್ತರ ನೀಡಿದ್ದಾರೆ.


ಸೆಪ್ಟೆಂಬರ್ 19 ರಂದು ಕೋಲಾರದ ಆರ್.ಎಲ್.ಜೆ ಆಸ್ಪತ್ರೆಯಲ್ಲಿ 3 ಸಾವು ಸಂಭವಿಸಿತ್ತು. ಆಸ್ಪತ್ರೆಯು ಮರಣದ ಕಾರಣದ ಬಗ್ಗೆ ನಿಗದಿತ ನಮೂನೆಗಳಲ್ಲಿ ಮಾಹಿತಿ ನೀಡಲು ವಿಳಂಬವಾದ ಕಾರಣ ಅದನ್ನು ಸೆ. 24 ರಂದು ವರದಿ ಮಾಡಲಾಗಿತ್ತು. ಸೆ.20ರಂದು ಸಂಭವಿಸಿದ 1 ಸಾವನ್ನು ಇದೇ ಕಾರಣಕ್ಕಾಗಿ ಸೆ. 25ರಂದು ವರದಿ ಮಾಡಲಾಗಿದೆ ಎಂದರು.


ಕೊರೊನಾ ಸಂಬಂಧ ನಿಖರ ಮಾಹಿತಿ ನೀಡುವಲ್ಲಿ ಹಾಗೂ ನಿರ್ವಹಣೆಯಲ್ಲಿ ಇಡೀ ದೇಶದಲ್ಲೇ ನಮ್ಮ ಸರಕಾರ ಅತ್ಯಂತ ದಕ್ಷತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಧ್ಯಮ ವರದಿಯಿಂದ ಬಹಿರಂಗವಾಗಿದೆ. ಅಷ್ಟಕ್ಕೂ ಕೊರೊನಾ ಸಂಬಂಧ ಯಾವುದೇ ವಿಷಯವನ್ನೂ ಮರೆಮಾಚುವ ಉದ್ದೇಶವೂ ಇಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲ ಎಂದು ಸಚಿವ ಡಾ ಕೆ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ