ಆ್ಯಪ್ನಗರ

ಗ್ರಾಪಂ ಜಾಹೀರಾತು ಬೈಲಾ ಕೊಡುವಂತೆ ಕೇಳಿದ ಹೈಕೋರ್ಟ್‌

'ಕ್ಲೀನ್‌ ಬೆಂಗಳೂರು'ಎಂಬ ಘೋಷಣೆಯೊಂದಿಗೆ ಬೆಂಗಳೂರು ಮಹಾನಗರದ ಎಲ್ಲ ಬಗೆಯ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸಲು ಕಾರಣವಾದ ಹೈಕೋರ್ಟ್‌, ಇದೀಗ ...

Vijaya Karnataka 1 Sep 2018, 5:00 am
ಬೆಂಗಳೂರು: 'ಕ್ಲೀನ್‌ ಬೆಂಗಳೂರು'ಎಂಬ ಘೋಷಣೆಯೊಂದಿಗೆ ಬೆಂಗಳೂರು ಮಹಾನಗರದ ಎಲ್ಲ ಬಗೆಯ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸಲು ಕಾರಣವಾದ ಹೈಕೋರ್ಟ್‌, ಇದೀಗ ರಾಜ್ಯದ ಇತರೆ ಭಾಗದಲ್ಲೂ ವಿಶೇಷವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಫ್ಲೆಕ್ಸ್‌, ಬ್ಯಾನರ್‌ ಸಂಸ್ಕೃತಿಗೆ ಕಡಿವಾಣ ಹಾಕಲು ಮುಂದಾಗಿದೆ.
Vijaya Karnataka Web court


ಆ ಕುರಿತಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ನ ಸಿಜೆ ದಿನೇಶ್‌ ಮಹೇಶ್ವರಿ ನೇತೃತ್ವದ ನ್ಯಾಯಪೀಠ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜಾಹೀರಾತುಗಳ ನಿಷೇಧ ಕುರಿತಂತೆ ಇರುವ ಉಪನಿಯಮಗಳ ಪ್ರತಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.

ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ''2013ರಲ್ಲಿಯೇ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಜಾಹೀರಾತು ನಿಯಮಗಳನ್ನು ಪ್ರಕಟಿಸಿದೆ. ಆದರೆ ಅವುಗಳು ಜಾರಿಯಾಗಿಲ್ಲ. ಈಗಲೇ ಸರಕಾರ ಆ ನಿಯಮ ಜಾರಿಗಾಗಿ ಹೊಸ ಸುತ್ತೋಲೆ ಹೊರಡಿಸಲು ಸಿದ್ಧ ''ಎಂದರು.

ಆದರೆ ನ್ಯಾಯಪೀಠ, ''ಮೊದಲು ಬೈಲಾ ಸಲ್ಲಿಸಿ. ಅದನ್ನು ಪರಿಶೀಲಿಸೋಣ, ಅಗತ್ಯಬಿದ್ದರೆ ತಿದ್ದುಪಡಿ ಮಾಡುವುದು, ಇಲ್ಲವೇ ಹೊಸ ಅಂಶಗಳನ್ನು ಸೇರಿಸುವುದು ಮತ್ತಿತರರ ವಿಷಯಗಳ ಬಗ್ಗೆ ಪರಿಶೀಲಿಸಿ ಮುಂದೆ ನ್ಯಾಯಾಲಯವೇ ನಿರ್ಧಾರ ಕೈಗೊಳ್ಳಲಿದೆ,''ಎಂದು ಹೇಳಿತು.

ನ್ಯಾಯಾಲಯದ ಅದೇಶದಂತೆ ಎ.ಜಿ. ಬೆಂಗಳೂರು ಮಹಾನಗರದ ಸುತ್ತಮುತ್ತಲ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಹಾದುಹೋಗುವ ರಸ್ತೆಗಳಿರುವ 328 ಗ್ರಾಮ ಪಂಚಾಯಿತಿಗಳ ವಿವರಗಳನ್ನು ನ್ಯಾಯಾಲಯಗಳಿಗೆ ಒದಗಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ