ಆ್ಯಪ್ನಗರ

ಜಿಎಸ್‌ಟಿ ಎಫೆಕ್ಟ್‌ : ಸರಕಾರಕ್ಕೆ ತಲೆ ನೋವಾದ ಗುತ್ತಿಗೆದಾರರ ಹಿಂಜರಿಕೆ

ಜಿಎಸ್‌ಟಿ ದರದಿಂದ ನಷ್ಟ ಭೀತಿಯಲ್ಲಿರುವ ಬಿಡ್ಡರ್‌ಗಳು ಯಾವುದೇ ಸರಕಾರಿ ಯೋಜನೆಗಳ ಗುತ್ತಿಗೆ ಪಡೆದುಕೊಳ್ಳಲು ಹಿಂಜರಿಯುತ್ತಿದ್ದಾರೆ.

Bangalore Mirror Bureau 9 Oct 2017, 4:35 pm
ಬೆಂಗಳೂರು: ಜಿಎಸ್‌ಟಿ ದರದಿಂದ ನಷ್ಟ ಭೀತಿಯಲ್ಲಿರುವ ಬಿಡ್ಡರ್‌ಗಳು ಯಾವುದೇ ಸರಕಾರಿ ಯೋಜನೆಗಳ ಗುತ್ತಿಗೆ ಪಡೆದುಕೊಳ್ಳಲು ಹಿಂಜರಿಯುತ್ತಿದ್ದಾರೆ.
Vijaya Karnataka Web gst leaves contractors broke
ಜಿಎಸ್‌ಟಿ ಎಫೆಕ್ಟ್‌ : ಸರಕಾರಕ್ಕೆ ತಲೆ ನೋವಾದ ಗುತ್ತಿಗೆದಾರರ ಹಿಂಜರಿಕೆ


ಜಿಎಸ್‌ಟಿ ದರವನ್ನು ಶೇ ಆರಕ್ಕೆ ಇಳಿಸುವಂತೆ ಒತ್ತಾಯಿಸುತ್ತಿರುವ ಬಿಡ್ಡರ್‌ಗಳು ಮತ್ತು ಗುತ್ತಿಗೆದಾರರು ಗುತ್ತಿಗೆ ಪಡೆಯಲು ಹಿಂದೆ ಸರಿಯುತ್ತಿದ್ದಾರೆ. ರಸ್ತೆ ದುರಸ್ತಿ ಮತ್ತು ನಿರ್ಮಾಣ, ಒಳ ಚರಂಡಿ ನಿರ್ವಹಣೆ ಹಾಗೂ ದುರಸ್ತಿ ಸೇರಿದಂತೆ ಅನೇಕ ಸಾರ್ವಜನಿಕ ಯೋಜನೆಗಳ ಕಾಮಗಾರಿ ರಾಜ್ಯ ಸರಕಾರಕ್ಕೆತಲೆ ನೋವಾಗಿ ಪರಿಣಮಿಸಿದೆ. ಮುಂದಿನ ಹೊಸ ತೆರಿಗೆ ದರ ಜಾರಿಯವರೆಗೆ ಸರಕಾರಿ ಗುತ್ತಿಗೆಗಳನ್ನು ಪಡೆಯಲು ಯಾರೂ ಆಸಕ್ತಿ ತೋರುತ್ತಿಲ್ಲ.

ಅಗೆಯುವ ಮತ್ತು ದುರಸ್ತಿಗೊಳಿಸುವ ಕಾಮಗಾರಿಗಳಲ್ಲಿ ಈಗಿನ ಜಿಎಸ್‌ಟಿ ದರದನ್ವಯ ಬಹಳಷ್ಟು ನಷ್ಟವಾಗುತ್ತದೆ. ಹೀಗಾಗಿ ಇವುಗಳಿಂದ ದೂರವುಳಿಯಲು ಗುತ್ತಿಗೆದಾರರು ಸಾಮೂಹಿಕವಾಗಿ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಜಿಎಸ್‌ಟಿ ದರವನ್ನು ಶೇ 12ರಿಂದ 6 ಕ್ಕೆ ಇಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಲು ತೀರ್ಮಾನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ