ಆ್ಯಪ್ನಗರ

ಐಎಂಎ ಸಂತ್ರಸ್ತರ ಹಿತ ಕಾಯಿರಿ

ಜಿಂದಾಲ್‌ಗೆ ಭೂಮಿ ನೀಡುವ ಸಂಪುಟದ ನಿರ್ಣಯದ ವಿರುದ್ಧ ಚಾಟಿ ಬೀಸಿದ್ದ ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಇದೀಗ ಐಎಂಎ ವಂಚನೆ ಪ್ರಕರಣದ ಸಂತ್ರಸ್ತರ ನೆರವಿಗೆ ಧಾವಿಸಲು ಗಂಭೀರ ಕ್ರಮ ಕೈಗೊಳ್ಳುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ಜತೆಗೆ ಪ್ರಕರಣ ಸಂಬಂಧ ಸರಕಾರ ಈವರೆಗೆ ಕೈಗೊಂಡ ಕ್ರಮ ಸಾಲದು ಎಂದು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka 17 Jun 2019, 5:00 am
ಬೆಂಗಳೂರು : ಜಿಂದಾಲ್‌ಗೆ ಭೂಮಿ ನೀಡುವ ಸಂಪುಟದ ನಿರ್ಣಯದ ವಿರುದ್ಧ ಚಾಟಿ ಬೀಸಿದ್ದ ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಇದೀಗ ಐಎಂಎ ವಂಚನೆ ಪ್ರಕರಣದ ಸಂತ್ರಸ್ತರ ನೆರವಿಗೆ ಧಾವಿಸಲು ಗಂಭೀರ ಕ್ರಮ ಕೈಗೊಳ್ಳುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ಜತೆಗೆ ಪ್ರಕರಣ ಸಂಬಂಧ ಸರಕಾರ ಈವರೆಗೆ ಕೈಗೊಂಡ ಕ್ರಮ ಸಾಲದು ಎಂದು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web h k patil wrote a letter to cm regarding ima issue
ಐಎಂಎ ಸಂತ್ರಸ್ತರ ಹಿತ ಕಾಯಿರಿ


'''ಐಎಂಎ ಠೇವಣಿ ವಂಚನೆ ಪ್ರಕರಣದಲ್ಲಿ ತನಿಖೆ, ಶಿಕ್ಷೆಯಷ್ಟೇ ಅಲ್ಲ. ನೊಂದವರ ಬದುಕನ್ನು ಪುನಃ ಕಟ್ಟಿಕೊಡುವ ಸಾಮಾಜಿಕ ಹೊಣೆಯನ್ನು ನಮ್ಮ ಸಮ್ಮಿಶ್ರ ಸರಕಾರ ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಬೇಕು. 100 ದಿನಗಳಲ್ಲಿ ಠೇವಣಿದಾರರ ಹಣ ಮರಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು,'' ಎಂದು ಟ್ವೀಟ್‌ ಮೂಲಕ ಒತ್ತಾಯಿಸಿದ್ದಾರೆ. ಸಿಎಂ ಅವರಿಗೆ ಬರೆದಿರುವ 4 ಪುಟಗಳ ಪತ್ರವನ್ನೂ ಅವರು ಹಂಚಿಕೊಂಡಿದ್ದಾರೆ.

ಹತ್ತು ಅಂಶದ ಸಲಹೆ

ಠೇವಣಿ ಸಂಗ್ರಹಿಸಿ ಜನರಿಗೆ ಮೋಸ ಮಾಡುವ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ. ಈ ನಿಟ್ಟಿನಲ್ಲಿ ಅನಿಯಂತ್ರಿತ ಠೇವಣಿ ನಿಷೇಧಿಸಲು ಸುಗ್ರೀವಾಜ್ಞೆ ಹೊರಡಿಸಬೇಕು. ವಂಚನೆಯಿಂದ ಗಳಿಸಿದ ಆಸ್ತಿ ಮತ್ತು ಬೇನಾಮಿ ಹೆಸರಿನಲ್ಲಿ ಮಾಡಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಇಂಥ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ಸುಗ್ರೀವಾಜ್ಞೆಯಡಿ ಅವಕಾಶ ಕಲ್ಪಿಸಬೇಕು. ಇಂತಹ ಪ್ರಕರಣಗಳನ್ನು ಬಗೆಹರಿಸಿ ತೊಂದರೆಗೆ ಒಳಗಾದವರಿಗೆ ನ್ಯಾಯ ದೊರಕಿಸಲಾಗಿದೆಯೇ ಎಂಬ ಬಗ್ಗೆ ಸ್ವತಃ ಸಿಎಂ ಮೇಲುಸ್ತುವಾರಿ ನೋಡಿಕೊಳ್ಳಬೇಕು ಎಂಬುದು ಸೇರಿ ಸರಕಾರಕ್ಕೆ 10 ಅಂಶಗಳ ಸಲಹೆಯನ್ನು ಪಾಟೀಲ್‌ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ