ಆ್ಯಪ್ನಗರ

HAL ಏರ್ಪೋರ್ಟ್‌ ನಾಗರಿಕರಿಗಿರಲಿ: ದೇವೇಗೌಡ

ದೇವನಹಳ್ಳಿ ಏರ್‌ಪೋರ್ಟ್‌ನಲ್ಲಿ ಕಾಮಾಗಾರಿ ನಡೆಯುತ್ತಿರುವುದರಿಂದ ಹೆಚ್‌ಎಎಲ್‌ ವಿಮಾನ ನಿಲ್ದಾಣ ತಾತ್ಕಾಲಿಕವಾಗಿ ಮಾತ್ರವಲ್ಲದೇ, ಎಂದಿಗೂ ನಾಗರಿಕ ಬಳಕೆಗೆ ಮುಕ್ತವಾಗಿರಲಿ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಶನಿವಾರ ಹೇಳಿದ್ದಾರೆ.

ವಿಕ ಸುದ್ದಿಲೋಕ 4 Mar 2017, 4:51 pm
ಬೆಂಗಳೂರು: ದೇವನಹಳ್ಳಿ ಏರ್‌ಪೋರ್ಟ್‌ನಲ್ಲಿ ಕಾಮಾಗಾರಿ ನಡೆಯುತ್ತಿರುವುದರಿಂದ ಹೆಚ್‌ಎಎಲ್‌ ವಿಮಾನ ನಿಲ್ದಾಣ ತಾತ್ಕಾಲಿಕವಾಗಿ ಮಾತ್ರವಲ್ಲದೇ, ಎಂದಿಗೂ ನಾಗರಿಕ ಬಳಕೆಗೆ ಮುಕ್ತವಾಗಿರಲಿ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಶನಿವಾರ ಹೇಳಿದ್ದಾರೆ.
Vijaya Karnataka Web hal airport must use for public h d devegowda
HAL ಏರ್ಪೋರ್ಟ್‌ ನಾಗರಿಕರಿಗಿರಲಿ: ದೇವೇಗೌಡ


ವಿಮಾನ ಹಾರಾಟ ಸ್ಥಗಿತಗೊಂಡು, ಜನಸಾಮಾನ್ಯರಿಗೆ ತೊಂದರೆ ಆಗಿದೆ. ಇಂಥ ಸಂದರ್ಭದಲ್ಲಿ ಹೆಚ್‌ಎಎಲ್‌ ವಿಮಾನ ನಿಲ್ದಾಣದ ಬಳಕೆ ಆಗಲಿ. ಈ ಬಗ್ಗೆ ವಿಮಾನಯಾನ ಸಚಿವರು ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬರ ಕೇಂದ್ರದ ನೆರವಿಲ್ಲ:

'ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಈ ಸಂಬಂಧ ಸಿಎಂ ಜತೆ ಮಾತನಾಡಿದ್ದೇನೆ. ಶಕ್ತಿ ಮೀರಿ ಬರ ನಿರ್ವಹಣೆಗೆ ಯತ್ನಿಸಲಾಗುತ್ತಿದೆ, ಆದರೆ ಕೇಂದ್ರದ ನೆರವು ಸರಿಯಾಗಿ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ,' ಎಂದು ದೇವೇಗೌಡರು ಹೇಳಿದ್ದಾರೆ.

'ಹಾಸನದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಿಎಂಗೆ ಮನವಿ ಮಾಡಿದ್ದೇನೆ. ಇಲ್ಲದಿದ್ದರೆ ನಿಮ್ಮ ಮನೆಯ ಮುಂದೆ ಅನಿವಾರ್ಯವಾಗಿ ಧರಣಿ ಕೂರಬೇಕಾಗುತ್ತದೆ ಎಂದೂ ಹೇಳಿದ್ದೇನೆ,'ಎಂದರು.

ಪ್ರಧಾನಿ ಬಳಿ ಮನವಿ ಮಾಡುವೆ:

ಶ್ರವಣ ಬೆಳಗೊಳದಲ್ಲಿ ನಡೆಯಲಿರುವ ಮಹಾ ಮಸ್ತಕಾಭಿಷೇಕಕ್ಕೆ 300 ಕೋಟಿ ಅನುದಾನದ ಬೇಡಿಕೆ ಇಟ್ಟಿದ್ದೇನೆ. ಕೇಂದ್ರ ಕೊಡದಿದ್ದರೆ ರಾಜ್ಯ ಸರ್ಕಾರದ ಮೇಲೆ ಹೊರೆಯಾಗುತ್ತದೆ. 18ರಂದು ಪ್ರಧಾನಮಂತ್ರಿ ರಾಜ್ಯಕ್ಕೆ ಬರುತ್ತಾರೆ. ಆಗ ನಾನೇ ಪ್ರಧಾನಿ ಬಳಿ ಮನವಿ ಮಾಡುತ್ತೇನೆ' ಎಂದು ದೇವೇಗೌಡರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ