ಆ್ಯಪ್ನಗರ

ಕೊರೊನಾ: ಪ್ರಧಾನಮಂತ್ರಿ ನಿಧಿಗೆ ಎಚ್‌ಎಎಲ್‌ 26.25 ಕೋಟಿ ರೂ. ದೇಣಿಗೆ

ಇಡೀ ದೇಶ ಲಾಕ್‌ಡೌನ್‌ ಆಗಿರುವುದರಿಂದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ಸರಕಾರಕ್ಕೂ ಕಷ್ಟ ಆಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಜನರಿಂದಲೇ ದೇಣಿಗೆ ಸ್ವೀಕರಿಸಲು ಮುಂದಾಗಿದ್ದಾರೆ.

Vijaya Karnataka Web 30 Mar 2020, 5:15 pm
ಬೆಂಗಳೂರು: ವಿವಿದ ಸಂಶೋಧನೆಗಳ ಮೂಲಕ ಭಾರತೀಯ ಸೇನೆಗೆ ಅತ್ಯಾಧುನಿಕ ಸಾಧನಗಳನ್ನು ಒದಗಿಸುತ್ತಿರುವ ಹಿಂದೂಸ್ತಾನ್‌ ಏರೋನಾಟಿಕಲ್‌ ಸಂಸ್ಥೆ - ಎಚ್‌ಎಎಲ್‌ ಈಗ ಭಾರತ ಸಂಕಷ್ಟದಲ್ಲಿರುವ ಸಮಯದಲ್ಲಿ ಆರ್ಥಿಕ ನೆರವು ನೀಡಿ ಸಮಾಜಮುಖಿ ಕಾರ್ಯದಲ್ಲೂ ಕೈ ಜೋಡಿಸಿದೆ.
Vijaya Karnataka Web ಎಚ್‌ಎಎಲ್‌
ಎಚ್‌ಎಎಲ್‌


ಇಡೀ ದೇಶದಲ್ಲಿ ಕೊರೊನಾ ಭೀತಿ ಉಂಟಾಗಿರುವ ಇಂಥ ಸಂಕಷ್ಟ ಸಮಯದಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಎಚ್‌ಎಎಲ್‌ 26.25 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಿಸಿದೆ.

ಸಂಸ್ಥೆಯ ಪ್ರತಿಯೊಬ್ಬ ಉದ್ಯೋಗಿಯ ಒಂದು ದಿನ ವೇತನವಾಗಿ 6.25 ಕೋಟಿ ರೂ. ಹಾಗೂ ಸಂಸ್ಥೆಯ ಭಾಗವಾಗಿ 20 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ.

ಇಡೀ ದೇಶ ಲಾಕ್‌ಡೌನ್‌ ಆಗಿರುವುದರಿಂದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ಸರಕಾರಕ್ಕೂ ಕಷ್ಟ ಆಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಜನರಿಂದಲೇ ದೇಣಿಗೆ ಸ್ವೀಕರಿಸಲು ಮುಂದಾಗಿದ್ದಾರೆ.

PM-CARES Fund ಮೂಲಕ ಹಣ ಸಂಗ್ರಹ ಮಾಡಲಾಗುವುದು ಎಂದು ತಿಳಿಸುತ್ತಿದ್ದಂತೆಯೇ ಗಣ್ಯರು, ಉದ್ಯಮಿಗಳು, ಸಿನಿಮಾ ನಟ, ನಟಿಯರು ದೇಣಿಗೆ ನೀಡಲು ಮುಂದೆ ಬಂದಿದ್ದಾರೆ.

'ಈ ಸಮಯದಲ್ಲಿ ಜನರ ಪ್ರಾಣವೇ ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನೂ ನಾವು ಮಾಡಬೇಕು. ನರೇಂದ್ರ ಮೋದಿಯವರ PM-CARES Fundಗೆ ತಮ್ಮ ಕೈಲಾದ ದೇಣಿಗೆ ನೀಡೋಣ. ನಾವೆಲ್ಲ ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು' ಎಂದು ಇತ್ತೀಚೆಗೆ ಬಾಲಿವುಡ್‌ ನಟ ಅಕ್ಷಯ್ ಕುಮಾರ್‌ ಟ್ವೀಟ್‌ ಮಾಡಿದ್ದರು.

ದೇಶದಲ್ಲಿ ಕೊರೊನಾ ವೈರಸ್‌ ಹರಡಲು ಆರಂಭ ಆದಾಗಿನಿಂದ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಲೇ ಇದೆ. ಲಾಕ್‌ಡೌನ್‌ ಆದೇಶ ಇದ್ದರೂ ರಸ್ತೆಗಳಲ್ಲಿ ಜನರು ಗುಂಪು ಕಟ್ಟಿಕೊಂಡು ಓಡಾಡುತ್ತಿರುವುದನ್ನು ಖಂಡಿಸಿ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ. ಈಗ PM-CARES Fundಗೆ ಹಣ ನೀಡುವ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ. ಈಗಾಗಲೇ ಕೋಟ್ಯಂತರ ರೂಪಾಯಿ ಹಣ ಈ ನಿಧಿಗೆ ಸಂದಾಯವಾಗಿದೆ. ಇನ್ನು ಕೊರೊನಾ ವಿರುದ್ಧ ಹೋರಾಟ ಸಾಗಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ