ವಿಜಯ್ ಕೋಟ್ಯಾನ್ ಮಂಗಳೂರು
ಮಂಗಳೂರು: ಕೇವಲ ಐದು ನಿಮಿಷದಲ್ಲಿ ಸಾಲ ನೀಡುವ ಆನ್ಲೈನ್ ಲೋನ್ ಆ್ಯಪ್ಗಳು ದಿನೇದಿನೇ ಜನರ ಪಾಲಿಗೆ ಉರುಳಾಗುತ್ತಿವೆ. ಲೋನ್ ಆ್ಯಪ್ಗಳು ನಾನಾ ಆಮಿಷಗಳ ಮೂಲಕ ಜನರನ್ನು ಸೆಳೆಯುತ್ತವೆ. ಜತೆಗೆ ತುರ್ತು ಸಾಲಗಳನ್ನೂ ನೀಡುತ್ತಿವೆ. ಆದರೆ, ಬಳಿಕ ಅತಿಯಾದ ಬಡ್ಡಿ ವಿಧಿಸುವುದು, ಬೆದರಿಕೆ ಒಡ್ಡುವುದು ಮತ್ತು ಅಪಮಾನ ಮಾಡುವ ಮೂಲಕ ವಸೂಲಿಗೆ ಮುಂದಾಗುತ್ತಿವೆ. ಈ ಚಕ್ರವ್ಯೂಹಕ್ಕೆ ಸಿಲುಕಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿನ ಸರಣಿ ಮುಂದುವರಿದಿರುವುದು ಆತಂಕ ಮೂಡಿಸಿದೆ. ಅದೆಷ್ಟೋ ಮಂದಿ ಸಾಲದ ಬಲೆಯಿಂದ ಹೊರ ಬರಲಾಗದೆ ಚಡಪಡಿಸುತ್ತಿದ್ದು, ಕೆಲವರು ಮರ್ಯಾದೆಗೆ ಅಂಜಿ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ವರ್ಷದ ಹಿಂದೆ ತೆಲಂಗಾಣ ರಾಜ್ಯದಲ್ಲಿ ಹಲವರ ಸಾವಿಗೆ ಕಾರಣವಾದ ಈ ಆ್ಯಪ್ಗಳು ಈಗ ರಾಜ್ಯದಲ್ಲಿ ಹಲವು ಜೀವ ಬಲಿ ಪಡೆದಿವೆ. ರಾಜ್ಯದ ಕರಾವಳಿಯಲ್ಲಿ ಕೇವಲ 11 ದಿನದ ಅಂತರದಲ್ಲಿ ಇಬ್ಬರು ಯುವಕರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಿ.31ರಂದು ಉಡುಪಿ ಕುಂದಾಪುರದ ಹೆಮ್ಮಾಡಿಯಲ್ಲಿ ವಿಘ್ನೇಶ್ ಎಂಬ ಯುವಕ ಬಲಿಯಾದರೆ, ಜ.10ರಂದು ಪಕ್ಷಿಕೆರೆ ಕಿನ್ನಿಗೋಳಿಯ ಸುಶಾಂತ್ ಎಂಬಾತ ಶರಣಾಗಿದ್ದಾನೆ. ಇಬ್ಬರೂ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಆನ್ಲೈನ್ ಸಾಲದಿಂದ ಹೊರಬರಲಾಗದೆ ಸಾವಿಗೆ ಮೊರೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಕೆಲವು ಪ್ರಕರಣಗಳು ನಡೆದಿರುವ ಮಾಹಿತಿ ಇದೆ.
ಸಾಲದ ಸುಳಿಗೆ ಎಳೆಯುವುದು ಹೇಗೆ?
ಗೂಗಲ್ನಲ್ಲಿ ಆನ್ಲೈನ್ನ ಹಲವು ಆ್ಯಪ್ಗಳು ಪಾಪ್ ಅಪ್ ಆಗುತ್ತಿರುತ್ತವೆ. ಕಷ್ಟ ಕಾಲದಲ್ಲಿ ಸಿಕ್ಕ ಆಸರೆ ಎಂಬಂತೆ ಜನ ಇದರ ಮೊರೆ ಹೋಗುತ್ತಾರೆ. ಆ್ಯಪ್ಗಳನ್ನು ಡೌನ್ಲೋಡ್ ಮಾಡಿ ಅವರು ಕೇಳುವ ಸಾಲಗಾರನ ದಾಖಲೆಗಳನ್ನು ಸಲ್ಲಿಸಿದ ಕೆಲವೇ ಕ್ಷಣದಲ್ಲಿ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
ಯಾಕೆ ಮೊರೆ ಹೋಗುತ್ತಾರೆ?
ಸಾಮಾನ್ಯವಾಗಿ ಸಾಲ ಬೇಕಾದಾಗ ಬ್ಯಾಂಕ್ಗಳು ನಾನಾ ದಾಖಲೆಗಳನ್ನು ಕೇಳುವ ಕಾರಣ ಕೆಲವು ಸುಲಭದಲ್ಲಿ ಸಿಗುವ ಆನ್ಲೈನ್ ಸಾಲಕ್ಕೆ ಮೊರೆ ಹೋಗುತ್ತಾರೆ. 4 ದಿನದಿಂದ ಒಂದು ತಿಂಗಳ ಅವಧಿಗೆ ಆ ಸಾಲಗಳನ್ನು ನೀಡಲಾಗುತ್ತಿದೆ. ಸಾಲಕ್ಕೆ ಆನ್ಲೈನ್ ಅರ್ಜಿ ಸಲ್ಲಿಸುವಾಗ ಆಧಾರ್, ಪಾನ್, ಬ್ಯಾಂಕ್ ಖಾತೆ, ಉದ್ಯೋಗ, ವೇತನ ವಿವರ ಜತೆಗೆ ಸಾಲಗಾರನ ಭಾವಚಿತ್ರಗಳನ್ನು ಪಡೆಯಲಾಗುತ್ತದೆ.
ನಾಲ್ಕು ವಿಧದಲ್ಲಿ ಟಾರ್ಚರ್
1. ನಿಗದಿತ ಕಂತಿನಂತೆ ಪಾವತಿ ಮಾಡದಿದ್ದರೆ ಪ್ರಾರಂಭಿಕ ಹಂತದಲ್ಲಿ ಮೊಬೈಲ್ ಕರೆ ಮಾಡಿ ಸಾಲ ಕಟ್ಟಲು ಒತ್ತಡ ಹಾಕಲಾಗುತ್ತದೆ.
2.ಎರಡನೇ ಹಂತದಲ್ಲಿ ಗೂಂಡಾಗಳಿಂದ ಕರೆ ಮಾಡಿ ಬೆದರಿಕೆ ಹಾಕಲಾಗುತ್ತದೆ.
3. ಸಾಲಗಾರನ ಹತ್ತಿರ ಸಂಬಂಧಿ, ಗೆಳೆಯರ ಮಾಹಿತಿ ಪಡೆದು ಅವರಿಗೆ ಕರೆ, ಸಂದೇಶ ಕಳುಹಿಸಿ ಹಣ ಕಟ್ಟಲು ಒತ್ತಡ ಹಾಕುತ್ತಾರೆ.
4. ನಾಲ್ಕನೇ ಅಸ್ತ್ರವಾಗಿ ಸಾಲಗಾರನ ಫೊಟೋದ ಮೇಲೆ 'ವಂಚಕ' ಸಂದೇಶ ಹಾಕಿ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕುತ್ತಾರೆ.
ವಾರಕ್ಕೆ ಶೇ.30ಕ್ಕೂ ಬಡ್ಡಿ
ಆನ್ಲೈನ್ ಸಾಲಕ್ಕೆ ವಾರಕ್ಕೆ ಶೇ.30ರಷ್ಟು ಬಡ್ಡಿ ವಿಧಿಸಲಾಗುತ್ತದೆ. 5 ಸಾವಿರ ರೂ. ಸಾಲಕ್ಕೆ ಅರ್ಜಿ ಹಾಕಿದರೆ ಒಂದು ವಾರದಲ್ಲಿ ಹೆಚ್ಚುವರಿ 1500 ರೂ.ಗೂ ಅಧಿಕ ಬಡ್ಡಿ ಕಟ್ಟಬೇಕು.
300ಕ್ಕೂ ಅಧಿಕ ಆ್ಯಪ್ಗಳು
ಹರಿರಾಂ ಶಂಕರ್, ಡಿಸಿಪಿ, ಮಂಗಳೂರು ನಗರ
ಮಂಗಳೂರು: ಕೇವಲ ಐದು ನಿಮಿಷದಲ್ಲಿ ಸಾಲ ನೀಡುವ ಆನ್ಲೈನ್ ಲೋನ್ ಆ್ಯಪ್ಗಳು ದಿನೇದಿನೇ ಜನರ ಪಾಲಿಗೆ ಉರುಳಾಗುತ್ತಿವೆ. ಲೋನ್ ಆ್ಯಪ್ಗಳು ನಾನಾ ಆಮಿಷಗಳ ಮೂಲಕ ಜನರನ್ನು ಸೆಳೆಯುತ್ತವೆ. ಜತೆಗೆ ತುರ್ತು ಸಾಲಗಳನ್ನೂ ನೀಡುತ್ತಿವೆ. ಆದರೆ, ಬಳಿಕ ಅತಿಯಾದ ಬಡ್ಡಿ ವಿಧಿಸುವುದು, ಬೆದರಿಕೆ ಒಡ್ಡುವುದು ಮತ್ತು ಅಪಮಾನ ಮಾಡುವ ಮೂಲಕ ವಸೂಲಿಗೆ ಮುಂದಾಗುತ್ತಿವೆ. ಈ ಚಕ್ರವ್ಯೂಹಕ್ಕೆ ಸಿಲುಕಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿನ ಸರಣಿ ಮುಂದುವರಿದಿರುವುದು ಆತಂಕ ಮೂಡಿಸಿದೆ.
ಡಿ.31ರಂದು ಉಡುಪಿ ಕುಂದಾಪುರದ ಹೆಮ್ಮಾಡಿಯಲ್ಲಿ ವಿಘ್ನೇಶ್ ಎಂಬ ಯುವಕ ಬಲಿಯಾದರೆ, ಜ.10ರಂದು ಪಕ್ಷಿಕೆರೆ ಕಿನ್ನಿಗೋಳಿಯ ಸುಶಾಂತ್ ಎಂಬಾತ ಶರಣಾಗಿದ್ದಾನೆ. ಇಬ್ಬರೂ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಆನ್ಲೈನ್ ಸಾಲದಿಂದ ಹೊರಬರಲಾಗದೆ ಸಾವಿಗೆ ಮೊರೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಕೆಲವು ಪ್ರಕರಣಗಳು ನಡೆದಿರುವ ಮಾಹಿತಿ ಇದೆ.
ಸಾಲದ ಸುಳಿಗೆ ಎಳೆಯುವುದು ಹೇಗೆ?
ಗೂಗಲ್ನಲ್ಲಿ ಆನ್ಲೈನ್ನ ಹಲವು ಆ್ಯಪ್ಗಳು ಪಾಪ್ ಅಪ್ ಆಗುತ್ತಿರುತ್ತವೆ. ಕಷ್ಟ ಕಾಲದಲ್ಲಿ ಸಿಕ್ಕ ಆಸರೆ ಎಂಬಂತೆ ಜನ ಇದರ ಮೊರೆ ಹೋಗುತ್ತಾರೆ. ಆ್ಯಪ್ಗಳನ್ನು ಡೌನ್ಲೋಡ್ ಮಾಡಿ ಅವರು ಕೇಳುವ ಸಾಲಗಾರನ ದಾಖಲೆಗಳನ್ನು ಸಲ್ಲಿಸಿದ ಕೆಲವೇ ಕ್ಷಣದಲ್ಲಿ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
ಯಾಕೆ ಮೊರೆ ಹೋಗುತ್ತಾರೆ?
ಸಾಮಾನ್ಯವಾಗಿ ಸಾಲ ಬೇಕಾದಾಗ ಬ್ಯಾಂಕ್ಗಳು ನಾನಾ ದಾಖಲೆಗಳನ್ನು ಕೇಳುವ ಕಾರಣ ಕೆಲವು ಸುಲಭದಲ್ಲಿ ಸಿಗುವ ಆನ್ಲೈನ್ ಸಾಲಕ್ಕೆ ಮೊರೆ ಹೋಗುತ್ತಾರೆ. 4 ದಿನದಿಂದ ಒಂದು ತಿಂಗಳ ಅವಧಿಗೆ ಆ ಸಾಲಗಳನ್ನು ನೀಡಲಾಗುತ್ತಿದೆ. ಸಾಲಕ್ಕೆ ಆನ್ಲೈನ್ ಅರ್ಜಿ ಸಲ್ಲಿಸುವಾಗ ಆಧಾರ್, ಪಾನ್, ಬ್ಯಾಂಕ್ ಖಾತೆ, ಉದ್ಯೋಗ, ವೇತನ ವಿವರ ಜತೆಗೆ ಸಾಲಗಾರನ ಭಾವಚಿತ್ರಗಳನ್ನು ಪಡೆಯಲಾಗುತ್ತದೆ.
ನಾಲ್ಕು ವಿಧದಲ್ಲಿ ಟಾರ್ಚರ್
1. ನಿಗದಿತ ಕಂತಿನಂತೆ ಪಾವತಿ ಮಾಡದಿದ್ದರೆ ಪ್ರಾರಂಭಿಕ ಹಂತದಲ್ಲಿ ಮೊಬೈಲ್ ಕರೆ ಮಾಡಿ ಸಾಲ ಕಟ್ಟಲು ಒತ್ತಡ ಹಾಕಲಾಗುತ್ತದೆ.
2.ಎರಡನೇ ಹಂತದಲ್ಲಿ ಗೂಂಡಾಗಳಿಂದ ಕರೆ ಮಾಡಿ ಬೆದರಿಕೆ ಹಾಕಲಾಗುತ್ತದೆ.
3. ಸಾಲಗಾರನ ಹತ್ತಿರ ಸಂಬಂಧಿ, ಗೆಳೆಯರ ಮಾಹಿತಿ ಪಡೆದು ಅವರಿಗೆ ಕರೆ, ಸಂದೇಶ ಕಳುಹಿಸಿ ಹಣ ಕಟ್ಟಲು ಒತ್ತಡ ಹಾಕುತ್ತಾರೆ.
4. ನಾಲ್ಕನೇ ಅಸ್ತ್ರವಾಗಿ ಸಾಲಗಾರನ ಫೊಟೋದ ಮೇಲೆ 'ವಂಚಕ' ಸಂದೇಶ ಹಾಕಿ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕುತ್ತಾರೆ.
ವಾರಕ್ಕೆ ಶೇ.30ಕ್ಕೂ ಬಡ್ಡಿ
ಆನ್ಲೈನ್ ಸಾಲಕ್ಕೆ ವಾರಕ್ಕೆ ಶೇ.30ರಷ್ಟು ಬಡ್ಡಿ ವಿಧಿಸಲಾಗುತ್ತದೆ. 5 ಸಾವಿರ ರೂ. ಸಾಲಕ್ಕೆ ಅರ್ಜಿ ಹಾಕಿದರೆ ಒಂದು ವಾರದಲ್ಲಿ ಹೆಚ್ಚುವರಿ 1500 ರೂ.ಗೂ ಅಧಿಕ ಬಡ್ಡಿ ಕಟ್ಟಬೇಕು.
300ಕ್ಕೂ ಅಧಿಕ ಆ್ಯಪ್ಗಳು
- ಭಾರತದಲ್ಲಿ 300ಕ್ಕೂ ಅಧಿಕ ಆನ್ಲೈನ್ ಸಾಲ ಕೊಡುವ ಆ್ಯಪ್ಗಳು ಸಕ್ರಿಯವಾಗಿವೆ.
- ಆರಂಭದಲ್ಲಿ ಚೀನಾ ಮೂಲದ ಆ್ಯಪ್ಗಳು ಈ ರೀತಿ ಜೀವ ಹಿಂಡುತ್ತಿದ್ದವು. ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಬೆದರಿಕೆ ಒಡ್ಡುವ ತಂಡಗಳು ಕಾರ್ಯಾಚರಿಸುತ್ತಿದ್ದವು. ಒಂದು ಹಂತದಲ್ಲಿ ಅವುಗಳನ್ನು ಮಟ್ಟ ಹಾಕಲಾಗಿದ್ದರೂ ಮತ್ತೆ ತಲೆ ಎತ್ತಿವೆ.
- ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆದ ಇಂತಹ ಆನ್ಲೈನ್ ಸಾಲ ನೀಡುವ ಮೈಕ್ರೋ ಫೈನಾನ್ಸ್ ಆ್ಯಪ್ಗಳು ಸಕ್ರಿಯ
- ಆನ್ಲೈನ್ ಸಾಲದ ಈ ಕಂಪನಿಗಳಿಗೆ ಆರ್ಬಿಐಯಡಿ ನೋಂದಣಿಯಾಗಿರುವುದಿಲ್ಲ.
- ಆನ್ಲೈನ್ ಸಾಲ ಪಡೆಯಲು 25-45 ವರ್ಷದ ತಿಂಗಳ ವೇತನ ಪಡೆಯುವ ಯುವಕರೇ ಟಾರ್ಗೆಟ್
ಹರಿರಾಂ ಶಂಕರ್, ಡಿಸಿಪಿ, ಮಂಗಳೂರು ನಗರ