ಆ್ಯಪ್ನಗರ

ಎತ್ತಿನಹೊಳೆ ಯೋಜನೆ ವಿಳಂಬ ಹಾಸನ ಜಿಲ್ಲಾ ಶಾಸಕರ ಬೇಸರ

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಡಿ ಭೂಸ್ವಾಧೀನಕ್ಕೆ ಪರಿಹಾರ ವಿತರಣೆಯಾಗದೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಸೋಮವಾರ ಆಡಳಿತ ಪಕ್ಷ ದ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸಿದರು.

Vijaya Karnataka 18 Dec 2018, 5:00 am
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಡಿ ಭೂಸ್ವಾಧೀನಕ್ಕೆ ಪರಿಹಾರ ವಿತರಣೆಯಾಗದೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಸೋಮವಾರ ಆಡಳಿತ ಪಕ್ಷ ದ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web hassan district mlas are bored of delay in ettinahole project
ಎತ್ತಿನಹೊಳೆ ಯೋಜನೆ ವಿಳಂಬ ಹಾಸನ ಜಿಲ್ಲಾ ಶಾಸಕರ ಬೇಸರ


ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ, ಕೆ.ಎಸ್‌.ಲಿಂಗೇಶ್‌, ಸಿ.ಎನ್‌.ಬಾಲಕೃಷ್ಣ ಮತ್ತಿತರ ಸದಸ್ಯರು ವಿಷಯ ಪ್ರಸ್ತಾಪಿಸಿ,''ಯೋಜನೆಗಾಗಿ ಸಕಲೇಶಪುರ, ಬೇಲೂರು ಮತ್ತು ಅರಸೀಕೆರೆ ತಾಲೂಕುಗಳಲ್ಲಿ ರೈತರಿಗೆ ಪರಿಹಾರ ವಿತರಣೆ ಆಗಿಲ್ಲ. ಹೀಗಾಗಿ, ಕೆಲಸ ಮಾಡಲು ಸಾಧ್ಯವಾಗದೆ ಯೋಜನೆ ಕಾಮಗಾರಿ ಕುಂಠಿತವಾಗಿದೆ,'' ಎಂದು ಬೇಸರ ವ್ಯಕ್ತಪಡಿಸಿದರು.

''ಕುಡಿಯುವ ನೀರಿನ ಯೋಜನೆಯಾದ ಕಾರಣ ಬಹಳಷ್ಟು ರೈತರು ಭೂಮಿ ಬಿಟ್ಟುಕೊಟ್ಟಿದ್ದರೂ, ಕೆಲವರು ಪರಿಹಾರ ವಿತರಣೆಯಾಗುವ ವರೆಗೆ ಕಾಮಗಾರಿ ನಡೆಸದಂತೆ ಅಡ್ಡಿಪಡಿಸುತ್ತಿದ್ದಾರೆ. ನೂತನ ಭೂಸ್ವಾಧೀನ ಕಾಯಿದೆಯಂತೆ ಸಾಮಾಜಿಕ ಪರಿಣಾಮಗಳ ಅಧ್ಯಯನದ ನೆಪದಲ್ಲಿ ಪರಿಹಾರ ವಿತರಣೆ ಆಗುತ್ತಿಲ್ಲ. ಈ ವಿಳಂಬದಿಂದ ಗುತ್ತಿಗೆದಾರರಿಗೆ ಅನುಕೂಲವಾಗುತ್ತಿದ್ದು, ಯೋಜನಾ ವೆಚ್ಚ ಏರಿಕೆಯಾಗಲಿದೆ. ಸರಕಾರ ತಕ್ಷ ಣ ಗಮನಹರಿಸಿ ಯೋಜನೆ ಕಾಮಗಾರಿ ತ್ವರಿತಗೊಳಿಸಲು ಗಮನಹರಿಸಬೇಕು'' ಎಂದು ಆಗ್ರಹಿಸಿದರು.

ಮಂಗನ ಕಾಯಿಲೆ ತಡೆಗೆ ತಕ್ಷ ಣ ಕ್ರಮದ ಭರವಸೆ

ಮಲೆನಾಡು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ಉಲ್ಭಣಿಸದಂತೆ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಗೆ ಸೋಮವಾರ ಭರವಸೆ ನೀಡಿದರು.

ಶೂನ್ಯವೇಳೆಯಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ಈ ಸಂಬಂಧ ವಿಷಯ ಪ್ರಸ್ತಾಪಿಸಿ, ''ಮಂಗನ ಕಾಯಿಲೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿವರ್ಷ ಸಾವು ಸಂಭವಿಸುತ್ತಿದ್ದು, ಈಗ ಮತ್ತೆ ಕಾಣಿಸಿಕೊಂಡಿದೆ. ಆದರೆ, ಈ ವಿಚಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರ ಗಮನಕ್ಕೇ ಬಂದಿಲ್ಲ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಪುಣೆಯಿಂದ ಲಸಿಕೆ ತರಿಸಬೇಕಿದ್ದು, ಸರಕಾರ ತುರ್ತು ಗಮನ ಹರಿಸಬೇಕು,'' ಎಂದು ಆಗ್ರಹಿಸಿದರು.

ಈ ಒತ್ತಾಯಕ್ಕೆ ಧ್ವನಿಗೂಡಿಸಿದ ಅರಗ ಜ್ಞಾನೇಂದ್ರ ''ಪೇಟೆಗಳಿಂದ ಮಂಗಗಳನ್ನು ಹಿಡಿದು ಕಾಡಿಗೆ ಬಿಡುವ ಕಾರಣ ಅವು ನಮ್ಮ ಹಳ್ಳಿಗಳಿಗೆ ಲಗ್ಗೆ ಹಾಕುತ್ತಿವೆ. ಮಂಗನ ಕಾಯಿಲೆ ತಡೆಗೆ ಸರಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು'' ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ