ಆ್ಯಪ್ನಗರ

ನೈಸ್‌ ವಿರುದ್ಧ ಮತ್ತೆ ಗುಡುಗಿದ ದೇವೇಗೌಡರು

ಹಿಂದೆ ನೈಸ್‌ ವಿರುದ್ಧ ಸರಿಯಾದ ಚರ್ಚೆ ನಡೆಸಲು ವಿಧಾನಸಭೆಯಲ್ಲಿ ಅವಕಾಶವನ್ನೂ ಕೋರಲಾಗಿತ್ತು. ಯೋಜನೆಯಿಂದ ಅನ್ಯಾಯಕ್ಕೊಳಗಾದ ಜನರು ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡಿದ್ದಾರೆ.

Vijaya Karnataka 24 Nov 2018, 9:38 am
ಬೆಂಗಳೂರು: ಸದನ ಸಮಿತಿಯ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಿ ತಪ್ಪಿತಸ್ಥ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಮ್ಮಿಶ್ರ ಸರಕಾರವನ್ನು ಕೋರುವæ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ನೈಸ್‌ ಯೋಜನೆ ವಿರುದ್ಧ ಮತ್ತೆ ಗುಡುಗಿದ್ದಾರೆ.
Vijaya Karnataka Web hddevegowda


ನೈಸ್‌ ರಸ್ತೆ ಸಮೀಪದ ಹೊಸಕೆರೆಹಳ್ಳಿ ಮತ್ತು ಪ್ರಮೋದ್‌ ಬಡಾವಣೆಗೆ ಶುಕ್ರವಾರ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಂದ ದೂರು ಸ್ವೀಕರಿಸಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,''ನೈಸ್‌ ವಿರುದ್ಧ ಹೋರಾಟ ನಡೆಸಿ ಬಹಳ ದಿನಗಳಾಗಿತ್ತು. ನೈಸ್‌ ಅಕ್ರಮ ಇಡೀ ಜಗತ್ತಿಗೆ ಗೊತ್ತಿದೆ,'' ಎಂದರು.

''ಹಿಂದೆ ನೈಸ್‌ ವಿರುದ್ಧ ಸರಿಯಾದ ಚರ್ಚೆ ನಡೆಸಲು ವಿಧಾನಸಭೆಯಲ್ಲಿ ಅವಕಾಶವನ್ನೂ ಕೋರಲಾಗಿತ್ತು. ಯೋಜನೆಯಿಂದ ಅನ್ಯಾಯಕ್ಕೊಳಗಾದ ಜನರು ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಯಾರ ಯಾರ ಕಾಲದಲ್ಲಿ ಎಷ್ಟು ಅಕ್ರಮವಾಗಿದೆ ಎಂದು ತಿಳಿದಿದೆ,'' ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಮೋದ್‌ ಬಡಾವಣೆಯ ನೂರಾರು ನಿವಾಸಿಗಳು ನೈಸ್‌ ಸಂಸ್ಥೆಯಿಂದ ತಮಗೆ ಆಗುತ್ತಿರುವ ಕಿರುಕುಳ ಹಾಗೂ ಈ ಪ್ರದೇಶದಲ್ಲಿ ಯಾವುದೇ ಮೂಲಸೌಲಭ್ಯ ಇಲ್ಲ ಎಂಬ ಕುರಿತು ದೇವೇಗೌಡರಿಗೆ ಮನವಿ ಸಲ್ಲಿಸಿದರು.

''ಪ್ರಮೋದ್‌ ಬಡಾವಣೆಯಲ್ಲಿ 17 ಎಕರೆ ಹಾಗೂ ಹೊಸಕೆರೆಹಳ್ಳಿಯಲ್ಲಿ 50 ಎಕರೆ ಭೂಮಿಯನ್ನು ನೈಸ್‌ ರಸ್ತೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರ್ಯಾಯವಾಗಿ ಭೂಮಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಸದನ ಸಮಿತಿಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುವಂತೆ ಸರಕಾರದೊಂದಿಗೆ ಚರ್ಚಿಸುತ್ತೇನೆ,'' ಎಂದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ