ಆ್ಯಪ್ನಗರ

ಧರ್ಮರಾಯನಂತೆ ನಾನೂ ಮೋಸಹೋದೆ: ಎಚ್‌ಡಿ ದೇವೇಗೌಡ

ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮೋಸವಾಗುತ್ತದೆ ಎಂದು ಗೊತ್ತಿದ್ದರೂ ಧರ್ಮರಾಯನಂತೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತೆ ಎಂದಿದ್ದಾರೆ.

Vijaya Karnataka Web 24 Aug 2019, 3:52 pm
ಹಾಸನ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಪತನಗೊಳ್ಳಲು ದೇವೇಗೌಡರ ಕುಟುಂಬವೇ ಕಾರಣ ಎಂದುಮಾಜಿ ಸಿಎಂ ಸಿದ್ದರಾಮಯ್ಯ ನೇರ ಆರೋಪ ಹೊರಿಸಿದ ನಂತರ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಧರ್ಮರಾಯನಂತೆ ನಾನೂ ಮೋಸಹೋದೆ ಎಂದಿದ್ದಾರೆ.
Vijaya Karnataka Web hd devegowda said as like dharmaraya he also betrayed in last lok sabha election
ಧರ್ಮರಾಯನಂತೆ ನಾನೂ ಮೋಸಹೋದೆ: ಎಚ್‌ಡಿ ದೇವೇಗೌಡ


ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಚ್‌ಡಿ ದೇವೇಗೌಡ, ಧರ್ಮರಾಯ ಎಲ್ಲರನ್ನು ಕರೆದುಕೊಂಡು ಬರುತ್ತಾನೆ. ಕಾಲಕಳೆಯಲು ಅವಕಾಶ ಇದೆ ಎಂದು ಹೇಳಿ ಜೂಜಿನಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ದ್ರೌಪದಿ ಶಾಪ ಕೊಟ್ಟಾಗ ಇಂದ್ರಪ್ರಸ್ಥ ತಲುಪುವುದೇ ಇಲ್ಲ. ಒಂದೇ ಆಟ ಎಂದು ಹೇಳಿ ಕೊನೆಯ ಆಟ ಆಡುತ್ತಾನೆ. ಧರ್ಮರಾಯ ಹೇಳುತ್ತಾನೆ.ಹಸ್ತಿನಾಪುರದ ರಾಜನಿಗೆ ಹೇಳುತ್ತಾನೆ. ಅದೇ ಮೋಸಗಾರನ ಜೊತೆಯಲ್ಲಿಯೇ ಆಡುತ್ತೇನೆ ಎಂದು. ಅದೇ ರೀತಿ ನಾನು ಕೂಡ ಮೋಸ‌ ಆಗುವುದು ಗೊತ್ತಿದ್ದರೂ ಸಹ ಚುನಾವಣೆಗೆ ನಿಂತು‌ ಸೋತೆ ಎಂದರು.

ಕಳೆದ 15 ದಿನದಿಂದ ಪಕ್ಷದ‌ ಕಚೇರಿಯಲ್ಲಿ ಇದ್ದೇನೆ. ಪ್ರತಿ ಜಿಲ್ಲೆಯ ಪಕ್ಷ ತಳಮಟ್ಟದಿಂದ ಕಟ್ಟಲು ಪದಾಧಿಕಾರಿಗಳು ಮಾಡುವ‌ ಕೆಲಸ ಗುರುತಿಸುತಿದ್ದೇನೆ. ಶ್ರೀಮಾನ್ ವಿಶ್ವನಾಥ್ ಬಿಟ್ಟು ಹೋದ‌ಮೇಲೆ ನಮ್ಮ ಕುಮಾರಸ್ವಾಮಿ ಪಕ್ಷ ನಿಷ್ಡೆಯಿಂದ ಇದ್ದಾರೆ. ಆರು ಭಾರಿ ಶಾಸಕರಾಗಿದ್ದಾರೆ. ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೇವೆ. ಪ್ರಸ್ತುತ ಬಿಜೆಪಿ ಸರಕಾರ ಮೂರು ವರ್ಷ ಎಂಟು ತಿಂಗಳು ನಡೆಯಬಹುದು. ನಮ್ಮ ತಕರಾರು ಇಲ್ಲ. ಒಳ್ಳೆಯ ಕೆಲಸ‌ಮಾಡಿದ್ರೆ ಸಂತೋಷ ಪಡುತ್ತೇವೆ. ಜನರ ಸಮಸ್ಯೆಗಳಿಗೆ ಹೋರಾಡುತ್ತೇವೆ. ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಕೇಂದ್ರದಿಂದ ಸಾಕಷ್ಟು ಹಣ ಬಿಡುಗಡೆ ಮಾಡಿಸಲು ಯಡಿಯೂರಪ್ಪ ಶಕ್ತರು ಎನ್ನು ಭರವಸೆ ಇದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ