ಆ್ಯಪ್ನಗರ

ಇನ್ನು ಮೊಬೈಲ್‌ನಲ್ಲೂ ಎಚ್‌ಡಿಕೆ ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಈಗ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಪ್ರತಿ ದಿನ ಅವರ ಸುದ್ದಿಯನ್ನು ಮೊಬೈಲ್ ಮೂಲಕ ಪಡೆಯಬಹುದಾಗಿದೆ.

Vijaya Karnataka Web 9 Dec 2017, 11:52 am
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಈಗ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಪ್ರತಿ ದಿನ ಅವರ ಸುದ್ದಿಯನ್ನು ಮೊಬೈಲ್ ಮೂಲಕ ಪಡೆಯಬಹುದಾಗಿದೆ.
Vijaya Karnataka Web hdk news in mobile
ಇನ್ನು ಮೊಬೈಲ್‌ನಲ್ಲೂ ಎಚ್‌ಡಿಕೆ ಸುದ್ದಿ


ಈ ಯೋಜನೆಗೆ ಅವರ ತಾಂತ್ರಿಕ ಸಲಹೆಗಾರರು ಯೋಜನೆ ಸಿದ್ಧಪಡಿಸಿದ್ದಾರೆ. 'ನಮ್ಮ ಹೆಚ್ ಡಿ ಕೆ' ಜಾಲತಾಣ ಈಗಾಗಲೇ ಫೇಸ್ ಬುಕ್ , ಟ್ವಿಟರ್, ಯು ಟ್ಯೂಬ್, ಸೌಂಡ್ ಕ್ಲೌಡ್‌ನಲ್ಲಿ ಜನಪ್ರಿಯವಾಗಿದ್ದು ಮುಂದುವರಿಕೆಯಾಗಿ ಮೊಬೈಲ್ ಸೇವೆ ಆರಂಭಿಸಲಿದೆ.

ಮೊಬೈಲ್ ನ ಸಂಖ್ಯೆ 94838 6999 ಗೆ ಒಂದು ಮಿಸ್ ಕಾಲ್ ಕೊಟ್ಟರೆ ಸಾಕು ಆ ಸಂಖ್ಯೆ 'ನಮ್ಮ ಹೆಚ್ ಡಿ ಕೆ' ಸಾಮಾಜಿಕ ಜಾಲತಾಣದಲ್ಲಿ ನೋಂದಾಯಿಸಲ್ಪಡುತ್ತದೆ. ಪ್ರತಿ ದಿನ ಮೂರು ಬಾರಿ ಹೆಚ್ ಡಿ ಕುಮಾರಸ್ವಾಮಿ ಅವರ ಸಭೆ ಸಮಾರಂಭ, ಭಾಷಣ, ಪತ್ರಿಕಾ ಗೋಷ್ಠಿ ಎಲ್ಲವೂ ಆ ನಂಬರ್ ನ ಮಾಲೀಕರಿಗೆ ಸಿಗುತ್ತದೆ. ಆಡಿಯೋ, ವಿಡಿಯೋಗಳನ್ನೂ ಕಳುಹಿಸಲಾಗುತ್ತದೆ. ಪ್ರತೀ ದಿನ ಬೆಳಗ್ಗೆ ಹೆಚ್ ಡಿ ಕೆ ಅವರ ಕಾರ್ಯಕ್ರಮದ ವಿವರ ನೀಡುವ ಮೂಲಕ ಆರಂಭವಾಗುವ ಈ ಸುದ್ದಿ ಸೇವೆ ದಿನದ ಅಂತ್ಯಕ್ಕೆ ರೌಂಡ್ ಅಪ್ ನೀಡುವ ಮೂಲಕ ಮುಕ್ತಾಯವಾಗುತ್ತದೆ. ಮಿಸ್ಡ್‌ ಕಾಲ್ ಗಳನ್ನೂ ನೋಂದಾಯಿಸುವ ಸೇವೆ ಈ ಭಾನುವಾರದಿಂದ ಆರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ