ಆ್ಯಪ್ನಗರ

ಕರಾವಳಿಯಲ್ಲಿ ಇನ್ನೂ ನಾಲ್ಕು ದಿನ ಭಾರಿ ಮಳೆ ಮುಂದುವರಿಕೆ - ಹವಾಮಾನ ಇಲಾಖೆ

ಬುಧವಾರದಿಂದ ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Vijaya Karnataka 15 Sep 2020, 11:26 pm
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ನೈಋುತ್ಯ ಮುಂಗಾರು ಸಕ್ರಿಯವಾಗಿದ್ದು, ದಕ್ಷಿಣ ಒಳನಾಡು ಪ್ರದೇಶದಲ್ಲಿ ಮಳೆಯ ತೀವ್ರತೆ ತುಸು ಕಡಿಮೆಯಾಗಿದೆ.
Vijaya Karnataka Web rain
ಸಾಂದರ್ಭಿಕ ಚಿತ್ರ


ಬುಧವಾರದಿಂದ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರಿ ಮಳೆ ಮುಂದುವರಿಯಲಿದೆ. ಮೊದಲೆರಡು ದಿನ ಯಲ್ಲೋ ಅಲರ್ಟ್‌, ನಂತರದ ಎರಡು ದಿನ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್‌, ಕಲಬುರಗಿ, ಯಾದಗಿರಿ ಹಾಗೂ ವಿಜಯಪುರದಲ್ಲಿಯೂ ಸಾಧಾರಣಾ ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಿಸಿದೆ.

ಭಾರಿ ಮಳೆಗೆ ನಲುಗಿದ ಕಲಬುರಗಿ, ಸೋಯಾ ಬೆಳೆ ನೀರುಪಾಲು, ಮನೆ ಕುಸಿದು ಐವರಿಗೆ ಗಾಯ

ಕಮಲಾಪುರದಲ್ಲಿ ಅತಿ ಹೆಚ್ಚು ಮಳೆ

ಮಂಗಳವಾರ ಕಲಬುರಗಿ ಜಿಲ್ಲೆ ಕಮಲಾಪುರದಲ್ಲಿಅತಿ ಹೆಚ್ಚು (140 ಮಿ.ಮೀ.) ಮಳೆಯಾಗಿದೆ. ಶಾಂತಪುರ (ಬೀದರ್‌ ಜಿಲ್ಲೆ) 120, ಹುಮನಾಬಾದ್‌ 100, ಔರಾದ್‌ 60, ಕಲಬುರಗಿ, ಆಗುಂಬೆ ತಲಾ 50, ಚಿಂಚೋಳಿ, ಸೇಡಂ, ಬೀದರ್‌ ತಲಾ 30, ಕಾರವಾರ, ಕದ್ರ, ಮಂಕಿ, ಕುಂದಾಪುರ, ಪಣಂಬೂರು, ವಿಜಯಪುರ, ಕಮ್ಮರಡಿ ತಲಾ 20 ಮಿ.ಮೀ.ನಷ್ಟು ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ