ಆ್ಯಪ್ನಗರ

ಹಬ್ಬದ ಸಂಭ್ರಮ ಕಸಿದ ವರುಣ: ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ!

ರಾಜ್ಯದಲ್ಲಿ ದೀಪಾವಳಿ ದಿನದಿಂದಲೇ ಮತ್ತೆ ಆರಂಭವಾದ ಮಳೆ ಇನ್ನೂ ಎರಡು ದಿನಗಳ ಕಾಲ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡು ಒಳಗೊಂಡ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ, ಮೈಸೂರು ಹಾಗೂ ಚಾಮರಾಜನಗರದ ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಹಗರುದಿಂದ ಮಳೆಯಾಗಲಿದೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.

Vijaya Karnataka Web 16 Nov 2020, 10:35 am
ಬೆಂಗಳೂರು: ರಾಜ್ಯದಲ್ಲಿ ದೀಪಾವಳಿ ಹಬ್ಬದಿಂದಲೇ ಮತ್ತೆ ಮಳೆ ಸುರಿಯಲಾರಂಭಿಸಿದ್ದು, ಸೋಮವಾರದಿಂದ ಎರಡು ದಿನ ವರ್ಷಧಾರೆ ಮುಂದುವರಿಯಲಿದೆ.
Vijaya Karnataka Web rain
ಸಾಂದರ್ಭಿಕ ಚಿತ್ರ


ಮಲೆನಾಡು ಒಳಗೊಂಡ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಸೋಮವಾರ ಮೈಸೂರು ಹಾಗೂ ಚಾಮರಾಜನಗರದ ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಹಗರುದಿಂದ ಮಳೆಯಾಗಲಿದೆ. ಮಂಗಳವಾರ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

12 ಜಿಲ್ಲೆಗಳಲ್ಲಿ ಮಳೆ
ಭಾನುವಾರ ದೀಪಾವಳಿ ಹಬ್ಬದ ಸಡಗರದ ಮಧ್ಯೆಯೇ ದಕ್ಷಿಣ ಒಳನಾಡಿನ 12 ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಹೆಚ್ಚು ಮಳೆಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್‌.ಜಿ.ಹುಲ್ಕೂರು ಗ್ರಾಪಂನಲ್ಲಿ 41 ಮಿ.ಮೀ. ಹಾಗೂ ವೆಂಗಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ 39 ಮಿ.ಮೀ.ನಷ್ಟು ವರ್ಷಧಾರೆಯಾಗಿದೆ.

ಪಟಾಕಿ ಸದ್ದಡಗಿಸಿದ ವರುಣ
ದೀಪಾವಳಿ ಹಬ್ಬದ ದಿನವಾದ ಭಾನುವಾರ ರಾಜಧಾನಿಯಲ್ಲಿ ಮಳೆ ಸುರಿದ ಕಾರಣ ಪಟಾಕಿ ಸದ್ದು ಕ್ಷೀಣಿಸಿತು. ದಿನವಿಡೀ ಮೋಡ ಮುಸುಕಿದ ವಾತಾವರಣದಿಂದಾಗಿ ನಗರದಾದ್ಯಂತ ಹಬ್ಬದ ಮೂಡ್‌ ಕಾಣಲಿಲ್ಲ. ಮಧ್ಯಾಹ್ನ ಹಾಗೂ ಸಂಜೆ ನಗರದ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿಯಿತು. ಕಾಡುಗೋಡಿಯಲ್ಲಿ 20 ಮಿ.ಮೀ ಹಾಗೂ ಕುಶಾಲನಗರದಲ್ಲಿ 16 ಮಿ.ಮೀ ನಷ್ಟು ವರ್ಷಧಾರೆಯಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನವರು ಸಂಜೆ ತಮ್ಮ ಬಂಧುಗಳ ಮನೆಗಳಿಗೆ ತೆರಳುವ ಧಾವಂತದಲ್ಲಿದ್ದರು. ಇದೇ ಸಮಯದಲ್ಲಿ ಜೋರು ಮಳೆಯಾಗಿ ಜನರು ತೊಂದರೆಗೆ ಸಿಲುಕಿದರು. ಪ್ರಮುಖ ರಸ್ತೆಗಳೂ ಸೇರಿದಂತೆ ಹಲವು ಬಡಾವಣೆಗಳಲ್ಲಿ ವಾಹನ ದಟ್ಟಣೆ ಇತ್ತು. ಮಳೆಯಿಂದಾಗಿ ಸಂಚಾರ ನಿಧಾನಗತಿಗೆ ತಿರುಗಿತು. ಕೆಲವೆಡೆ ಮೇಲು/ಕೆಳ ಸೇತುವೆಗಳ ಬಳಿ ಮಳೆನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ