ಆ್ಯಪ್ನಗರ

ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಎಚ್‌ಎಎಲ್‌ನಿಂದ ಮೇಲ್ದರ್ಜೆಗೆ ಏರಿಸಲಾದ 'ಮಿರಾಜ್‌ 2000' ತರಬೇತಿ ಜೆಟ್‌ ವಿಮಾನ ದುರಂತದ ಕಹಿ ನೆನಪು ಹಸಿಯಾಗಿರುವಾಗಲೇ ಎಚ್‌ಎಎಲ್‌ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) 'ರುದ್ರ ಎಂ.ಕೆ 4' ಕಗ್ಗಲೀಪುರ ಸಮೀಪದ ತಟಗುಪ್ಪದ ಹೊಲವೊಂದರಲ್ಲಿ ಮಂಗಳವಾರ ತುರ್ತು ಭೂಸ್ಪರ್ಶ ಮಾಡಿದೆ.

Vijaya Karnataka 6 Feb 2019, 5:00 am
ಬೆಂಗಳೂರು/ಬನ್ನೇರುಘಟ್ಟ : ಎಚ್‌ಎಎಲ್‌ನಿಂದ ಮೇಲ್ದರ್ಜೆಗೆ ಏರಿಸಲಾದ 'ಮಿರಾಜ್‌ 2000' ತರಬೇತಿ ಜೆಟ್‌ ವಿಮಾನ ದುರಂತದ ಕಹಿ ನೆನಪು ಹಸಿಯಾಗಿರುವಾಗಲೇ ಎಚ್‌ಎಎಲ್‌ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) 'ರುದ್ರ ಎಂ.ಕೆ 4' ಕಗ್ಗಲೀಪುರ ಸಮೀಪದ ತಟಗುಪ್ಪದ ಹೊಲವೊಂದರಲ್ಲಿ ಮಂಗಳವಾರ ತುರ್ತು ಭೂಸ್ಪರ್ಶ ಮಾಡಿದೆ.
Vijaya Karnataka Web helicopter 1


ಸೇನೆಗೆ ಹಸ್ತಾಂತರಗೊಳ್ಳಬೇಕಾಗಿದ್ದ ಈ ಹೆಲಿಕಾಪ್ಟರ್‌, ಅಂತಿಮ ಹಂತದ ಪರೀಕ್ಷಾರ್ಥ ಹಾರಾಟ ನಡೆಸುತ್ತಿತ್ತು. ಪೈಲಟ್‌ಗಳಾದ ರಮೇಶ್‌ ಹಾಗೂ ಮತ್ತೊಬ್ಬರು ಇದ್ದರು.

ಮಂಗಳವಾರ ಮಧ್ಯಾಹ್ನ ಎಚ್‌ಎಎಲ್‌ ಏರ್‌ಪೋರ್ಟ್‌ನಿಂದ ರುದ್ರ, ಟೇಕಾಫ್‌ ಆಗಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ತಾಂತ್ರಿಕ ಸಮಸ್ಯೆ ಇರುವುದನ್ನು ಗಮನಿಸಿದ ಪೈಲಟ್‌ಗಳು, ಮುಂಜಾಗೃತ ಕ್ರಮವಾಗಿ ಹೆಲಿಕಾಪ್ಟರ್‌ ಅನ್ನು ಹೊಲದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದರು.

ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿರುವ ಮಾಹಿತಿ ಪಡೆದು ಎಚ್‌ಎಎಲ್‌ನಿಂದ ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ತಜ್ಞರ ತಂಡ ಸ್ಥಳಕ್ಕೆ ಆಗಮಿಸಿತು. ಸಂಜೆವರೆಗೂ ಪರಿಶೀಲನೆ ನಡೆಸಲಾಗಿದ್ದೂ, ಸ್ಥಳದಿಂದ ಹೆಲಿಕಾಪ್ಟರ್‌ ಹೊರಟಿರಲಿಲ್ಲ.

ಆಕಸ್ಮಿಕವಾಗಿ ಹೆಲಿಕಾಪ್ಟರ್‌ ಭೂಸ್ಪರ್ಶ ಮಾಡಿರುವ ವಿಚಾರ ತಿಳಿದು ಸುತ್ತಲಿನ ಗ್ರಾಮಸ್ಥರು, ಹೊಲದ ಮಾಲೀಕರು ಸ್ಥಳಕ್ಕೆ ಆಗಮಿಸಿ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕೆಲವರು ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡುತ್ತಿದ್ದಾಗಲೇ ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸಿಕೊಂಡು ಜಾಲತಾಣಗಳಿಗೆ ಶೇರ್‌ ಮಾಡಿದ್ದಾರೆ.

ದಾಳಿ ಹೆಲಿಕಾಪ್ಟರ್‌

ತುರ್ತು ಭೂಸ್ಪರ್ಶವಾಗಿರುವ ರುದ್ರ ಹೆಲಿಕಾಪ್ಟರ್‌ ಅನ್ನು ಶಸ್ತ್ರಾಸ್ತ್ರ ಸಹಿತ ಲಘು ದಾಳಿ ಹೆಲಿಕಾಪ್ಟರ್‌ ಆಗಿ ಬಳಕೆ ಮಾಡಲಾಗುತ್ತದೆ. 2013ರಿಂದ ಭಾರತೀಯ ಸೇನೆ ಮತ್ತು ವಾಯುಸೇನೆಗೆ ಈ ಹೆಲಿಕಾಪ್ಟರ್‌ಗಳು ಸೇರ್ಪಡೆಯಾಗುತ್ತಿವೆ ಎಂದು ತಿಳಿದು ಬಂದಿದೆ.

ಪ್ರತಿಕ್ರಿಯೆ ಇಲ್ಲ

ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶದ ಕುರಿತು ಮಾಧ್ಯಮಗಳಿಗೆ ಎಚ್‌ಎಎಲ್‌, ವಾಯುಸೇನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ