ಆ್ಯಪ್ನಗರ

ನಿಖಿಲ್‌ ಮದುವೆಗೆ ಎಷ್ಟು ವಾಹನ ಪಾಸ್‌ ನೀಡಲಾಗಿತ್ತು? ವರದಿ ಕೇಳಿದ ಹೈಕೋರ್ಟ್‌

​ನಿಖಿಲ್‌ ಮದುವೆಗೆ ಎಷ್ಟು ವಾಹನ ಪಾಸ್‌ ನೀಡಲಾಗಿದೆ? ವಾಹನ ಪಾಸ್‌ಗಳ ದುರ್ಬಳಕೆ ಸಂಬಂಧ ಹಲವು ದೂರು ಬಂದಿವೆ. ಅವುಗಳ ಸಂಬಂಧ ಯಾವ ಕ್ರಮ ಜರುಗಿಸಲಾಗಿದೆ? ಎಂಬ ಬಗ್ಗೆ ಮೇ 5ರಂದು ಲಿಖಿತವಾಗಿ ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Vijaya Karnataka 29 Apr 2020, 9:08 pm

ಬೆಂಗಳೂರು: ಲಾಕ್‌ಡೌನ್‌ ನಡುವೆಯೇ ರಾಮನಗರ ಜಿಲ್ಲೆಯ ಬಿಡದಿ ಬಳಿ ನಡೆದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್‌ ವಿವಾಹ ಸಮಾರಂಭಕ್ಕೆ ಎಷ್ಟು ವಾಹನ ಪಾಸ್‌ ನೀಡಲಾಗಿತ್ತು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
Vijaya Karnataka Web Nikhil Kumaraswamy


ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಮತ್ತು ಲಾಕ್‌‍ಡೌನ್‌ನಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಲ್ಲಿಕೆಯಾಗಿರುವ ಹಲವು ಪಿಐಎಲ್‌ ವಿಚಾರಣೆ ನಡೆಸುತ್ತಿರುವ ಸಿಜೆ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠವು ಈ ಸೂಚನೆ ನೀಡಿದೆ.

ನಿಖಿಲ್‌ ಮದುವೆಗೆ ಎಷ್ಟು ವಾಹನ ಪಾಸ್‌ ನೀಡಲಾಗಿದೆ? ವಾಹನ ಪಾಸ್‌ಗಳ ದುರ್ಬಳಕೆ ಸಂಬಂಧ ಹಲವು ದೂರು ಬಂದಿವೆ. ಅವುಗಳ ಸಂಬಂಧ ಯಾವ ಕ್ರಮ ಜರುಗಿಸಲಾಗಿದೆ? ಎಂಬ ಬಗ್ಗೆ ಮೇ 5ರಂದು ಲಿಖಿತವಾಗಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ನಿಖಿಲ್ ಮದುವೆಗೆ ಮೀಸಲಿಟ್ಟಿದ್ದ 5.5 ಕೋಟಿ ರೂ. ಹಣದಲ್ಲಿ ಈಗ ಕ್ಷೇತ್ರದ ಜನರಿಗೆ ದಿನಸಿ..!

ಅರ್ಜಿದಾರರ ಪರ ವಕೀಲ ಜಿ.ಆರ್‌.ಮೋಹನ್‌, "ಲಾಕ್‌ಡೌನ್‌ ಸಂಬಂಧ ಕೇಂದ್ರ ಸರಕಾರ ಮಾ. 24 ಮತ್ತು ಏ. 15ರಂದು ಹೊರಡಿಸಿದ ಮಾರ್ಗಸೂಚಿಗಳನ್ವಯ ಮದುವೆ ಸಮಾರಂಭ ನಡೆಸುವಂತಿಲ್ಲ. ಏ. 17 ರಂದು ನಿಖಿಲ್‌ ಮದುವೆ ನಡೆದಿದ್ದು, ಸರಕಾರ ಸಾಕಷ್ಟು ವಾಹನ ಪಾಸ್‌ಗಳನ್ನು ನೀಡಿ ತಾನೇ ನಿಯಮಗಳನ್ನು ಉಲ್ಲಂಘಿಸಿದೆ,’’ ಎಂದು ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ