ಆ್ಯಪ್ನಗರ

ಸರಕಾರಿ ವಾಹನ ಬಳಸಿಲ್ಲ... ಭತ್ಯೆ, ಭಂಗಲೆ ಪಡೆದಿಲ್ಲ

ವಿದಾಯ ಭಾಷಣದ ವೇಳೆ ಹಲವು ಬಾರಿ ಭಾವುಕರಾದ ಎಚ್‌ಡಿಕುಮಾರಸ್ವಾಮಿ ತಂದೆ-ತಾಯಿಯ ಪುಣ್ಯ ಹಾಗೂ ದೇವರ ಆಶೀರ್ವಾದಿಂದ ಇನ್ನೂ ಬದುಕಿದ್ದೇನೆ ಎಂದರು.

Vijaya Karnataka 24 Jul 2019, 5:00 am
Vijaya Karnataka Web i didnot use govt vehicle and bungalow says h d kumaraswamy
ಸರಕಾರಿ ವಾಹನ ಬಳಸಿಲ್ಲ... ಭತ್ಯೆ, ಭಂಗಲೆ ಪಡೆದಿಲ್ಲ

ಬೆಂಗಳೂರು : ವಿದಾಯ ಭಾಷಣದ ವೇಳೆ ಹಲವು ಬಾರಿ ಭಾವುಕರಾದ ಎಚ್‌.ಡಿ.ಕುಮಾರಸ್ವಾಮಿ ತಂದೆ-ತಾಯಿಯ ಪುಣ್ಯ ಹಾಗೂ ದೇವರ ಆಶೀರ್ವಾದಿಂದ ಇನ್ನೂ ಬದುಕಿದ್ದೇನೆ ಎಂದರು.

''ಲೋಡ್‌ ಶೆಡ್ಡಿಂಗ್‌ ಜಾರಿ ಬಗ್ಗೆ ಸುದ್ದಿ ಪ್ರಸಾರವಾದಾಗ ಬಹಳ ಆಘಾತವಾಗಿತ್ತು. ಅಂದು ಒಂದೂವರೆ ತಾಸು ಯಾತನೆಯಿಂದ ಕಾಲ ಕಳೆದಿದ್ದೇನೆ. ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದು ಸಾಕಷ್ಟು ನೋವುಂಡಿದ್ದೇನೆ. ಮುಖ್ಯಮಂತ್ರಿಯಾಗಿ ಸರಕಾರಿ ವಾಹನ ಬಳಸಿಲ್ಲ. ಭತ್ಯೆ, ಭಂಗಲೆ ಪಡೆದಿಲ್ಲ. ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ವೆಸ್ಟ್‌ ಎಂಡ್‌ ಹೋಟೆಲ್‌ ರೂಮ್‌ನಲ್ಲಿ ಕುಳಿತುಕೊಂಡು ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದೆ. ಆಗ ಗುಲಾಂ ನಬಿ ಆಜಾದ್‌ ಕರೆಮಾಡಿ ನಾಯಕತ್ವ ವಹಿಸಿಕೊಳ್ಳಿ ಎಂದರು. ಹಾಗಾಗಿ ಇದೊಂದು ಅದೃಷ್ಟದ ರೂಮ್‌ ಎಂದು ಉಳಿಸಿಕೊಂಡಿದ್ದೆ ,'' ಎಂದು ತಿಳಿಸಿದರು.

ಭಾಷಣಕ್ಕೆ ಅಂತ್ಯ ಹಾಡುವಾಗ ಅಜೆಂಡಾದಲ್ಲಿ ಇಲ್ಲದಿದ್ದರೂ ರಾಜ್ಯದ ಹಿತದೃಷ್ಟಿಯಿಂದ ಹಣಕಾಸು ವಿಧೇಯಕ ಪಾಸು ಮಾಡಿಕೊಡಬೇಕು ಎಂದು ಎಚ್‌ಡಿಕೆ ಮನವಿ ಮಾಡಿಕೊಂಡರು. ಆದರೆ, ಈ ಪ್ರಸ್ತಾವದ ಮಂಡನೆಯಾಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ