ಆ್ಯಪ್ನಗರ

ಅನುದಾನಕ್ಕಾಗಿ ಮೋದಿಗೆ ಪತ್ರ ಬರೆದಿದ್ದೆ‌, ಆದ್ರೆ ಉತ್ತರ ಬಂದಿಲ್ಲ: ದೇವೇಗೌಡ ಆಕ್ರೋಶ

“ನೆರೆ ಅನುದಾನಕ್ಕಾಗಿ ನಾನು ಪ್ರಧಾನಿಗೆ ಪತ್ರ ಬರೆದಿದ್ದೆ‌. ಆದರೆ ಉತ್ತರ ಬಂದಿಲ್ಲ. ಪಾಪ ಬಿಜೆಪಿಯವರು ಕಾಶ್ಮೀರ, ಇನ್ನಿತರ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ಕಾಗದ ನೋಡೋಕೆ ಅವರಿಗೆ ಸಮಯವಿಲ್ಲ ಅನ್ನಿಸುತ್ತದೆ,” - ಎಚ್‌.ಡಿ. ದೇವೇಗೌಡ.

Vijaya Karnataka Web 18 Sep 2019, 5:48 pm
ಬೆಂಗಳೂರು: ನೆರೆ ಪರಿಹಾರದ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web HD Deve Gowda


“ನೆರೆ ಅನುದಾನಕ್ಕಾಗಿ ನಾನು ಪ್ರಧಾನಿಗೆ ಪತ್ರ ಬರೆದಿದ್ದೆ‌. ಆದರೆ ಉತ್ತರ ಬಂದಿಲ್ಲ. ಪಾಪ ಬಿಜೆಪಿಯವರು ಕಾಶ್ಮೀರ, ಇನ್ನಿತರ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ಕಾಗದ ನೋಡೋಕೆ ಅವರಿಗೆ ಸಮಯವಿಲ್ಲ ಅನ್ನಿಸುತ್ತದೆ,” ಎಂದು ದೇವೇಗೌಡರು ಕಿಡಿಕಾರಿದರು.

ನೆರೆ ಪರಿಹಾರಕ್ಕಾಗಿ, "ನಮ್ಮ ಪಕ್ಷದ ನಿಯೋಗದಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ. ಅದರ ಮೇಲೂ ಅನುದಾನ ಬಾರದೆ ಹೋದರೆ ಹೋರಾಟ ಮಾಡುತ್ತೇವೆ. ಯಾವ ರೀತಿ ಹೋರಾಟ ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ. ಆದರೆ ನಾವು ಹೋರಾಟದಲ್ಲಿ ಮಾತ್ರ ಹಿಂದೆ ಬೀಳುವುದಿಲ್ಲ," ಎಂಬುದಾಗಿ ದೇವೇಗೌಡರು ಎಚ್ಚರಿಕೆ ನೀಡಿದರು.

ಹೋರಾಟದ ವಿಚಾರದಲ್ಲಿ ಯಾವುದೇ ದಾಕ್ಷಿಣ್ಯ ನನಗೆ ಇಲ್ಲ. ನಾನು ಹೋರಾಟ ಮಾಡೋದನ್ನು ಯಾರಿಂದಲೂ ಕಲಿಯಬೇಕಿಲ್ಲ. ಎರಡು ಸರಕಾರದ ವಿರುದ್ಧ ಹೋರಾಟ ಮಾಡಿದವನು ನಾನು. ನೈಸ್ ವಿರುದ್ದ ಹೋರಾಟ ಮಾಡಿದ್ದೆ. ಹೋರಾಟವೇ ನನ್ನ ಜೀವನದ ಮಜಲು. ಎಂಬುದಾಗಿ ಅವರು ಹೇಳಿದರು.

ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ಅವ್ರು ಪ್ರತಿಭಟನೆ ಮಾಡಲಿ. ಅವ್ರು ಪ್ರತಿಭಟನೆ ಮಾಡಿದ್ರೆ ಸಂತೋಷ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ