ಆ್ಯಪ್ನಗರ

ಐಸಿಐಸಿಐ ಬ್ಯಾಂಕ್‌ಗೆ ವಂಚನೆ : ಮಾಜಿ ಉದ್ಯೋಗಿಯ 10.20 ಕೋಟಿ ರೂ. ಆಸ್ತಿ ಜಪ್ತಿ

ಐಸಿಐಸಿಐ ಬ್ಯಾಂಕ್‌ ವಿಜಯಪುರ ಶಾಖೆಯ 70.44 ಕೋಟಿ ರೂ. ದುರುಪಯೋಗ ಪ್ರಕರಣದಲ್ಲಿ ಬ್ಯಾಂಕ್‌ನ ಮಾಜಿ ಉದ್ಯೋಗಿ ವಿಜಯಸಾರಥಿ ಎಂಬುವರಿಗೆ ಸೇರಿದ 10.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.

Vijaya Karnataka 30 Mar 2019, 5:00 am
ಬೆಂಗಳೂರು : ಐಸಿಐಸಿಐ ಬ್ಯಾಂಕ್‌ ವಿಜಯಪುರ ಶಾಖೆಯ 70.44 ಕೋಟಿ ರೂ. ದುರುಪಯೋಗ ಪ್ರಕರಣದಲ್ಲಿ ಬ್ಯಾಂಕ್‌ನ ಮಾಜಿ ಉದ್ಯೋಗಿ ವಿಜಯಸಾರಥಿ ಎಂಬುವರಿಗೆ ಸೇರಿದ 10.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.
Vijaya Karnataka Web icici bank ex employer property aquired
ಐಸಿಐಸಿಐ ಬ್ಯಾಂಕ್‌ಗೆ ವಂಚನೆ : ಮಾಜಿ ಉದ್ಯೋಗಿಯ 10.20 ಕೋಟಿ ರೂ. ಆಸ್ತಿ ಜಪ್ತಿ


2015ರಲ್ಲಿ ನಡೆದಿದ್ದ ಅಕ್ರಮದ ಕುರಿತು ಸ್ಥಳೀಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲಾಗಿತ್ತು. ಎಫ್‌ಐಆರ್‌ ಮತ್ತು ಆರೋಪಪಟ್ಟಿ ಆಧರಿಸಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಲೇವಾದೇವಿ ನಿಯಂತ್ರಣ ಕಾಯಿದೆ ಅಡಿ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಐಸಿಐಸಿಐ ಬ್ಯಾಂಕ್‌ನ ಉದ್ಯೋಗಿಗಳಾದ ವಿಜಯಸಾರಥಿ, ಸಚಿನ್‌ ಅಣ್ಣಪ್ಪ ಪಾಟೀಲ್‌ ಮತ್ತು ಇತರರು ಸೇರಿ ರದ್ದುಪಡಿಸಲಾದ ಮತ್ತು ಬಳಕೆ ಮಾಡದೆ ಇರುವ ಚೆಕ್‌ಗಳನ್ನು ಬಳಸಿ, ಬಿಡಿಸಿಸಿ ಬ್ಯಾಂಕ್‌ ಮತ್ತು ಸಿದ್ದೇಶ್ವರ ಕೋ ಆಪರೇಟಿವ್‌ ಸೇರಿದಂತೆ ಇನ್ನಿತರ ಬ್ಯಾಂಕ್‌ಗಳ ಹಣವನ್ನ ಐಸಿಐಸಿಐ ಖಾತೆಗೆ ಜಮಾ ಮಾಡುವ ಬದಲು ಅಕ್ರಮವಾಗಿ ನಕಲಿ ಫಿಕ್ಸೆಡ್‌ ಡೆಪಾಸಿಟ್‌ಗಳ ರಸೀದಿ ನೀಡಿ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ದ್ರೋಹ ಎಸಗಿದ್ದರು.

ಇದರಿಂದ ಐಸಿಐಸಿಐಗೆ 70.44 ಕೋಟಿ ರೂ. ನಷ್ಟವಾಗಿತ್ತು. ಇದು ಬ್ಯಾಂಕ್‌ನ ರಿಸ್ಕ್‌ ಕಂಟ್ರೋಲ್‌ ಯುನಿಟ್‌ ಗಮನಕ್ಕೆ ಬಂದಿರಲಿಲ್ಲ ಎಂದು ಇ.ಡಿ ತಿಳಿಸಿದೆ.

ಅಕ್ರಮದ ಮಾಸ್ಟರ್‌ ಮೈಂಡ್‌ ಆಗಿರುವ ವಿಜಯಸಾರಥಿ, ವಂಚನೆಯ ಹಣವನ್ನು ಸ್ಥಿರಾಸ್ತಿ ಮತ್ತು ಚರಾಸ್ತಿ ಮೇಲೆ ಹೂಡಿಕೆ ಮಾಡಿದ್ದರು. ಸಾಕಷ್ಟು ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಒಟ್ಟು ಎಂಟು ಸ್ಥಿರಾಸ್ತಿಯನ್ನು ರೇಣುಕಾ ಶೆಟ್ಟಿ, ಸಚಿನ್‌ ಪಾಟೀಲ್‌ ಮತ್ತು ಸುದೀಪ್‌ ಶೆಟ್ಟಿ ಎಂಬುವರ ಹೆಸರಿನಲ್ಲಿ ಬೆಂಗಳೂರು, ಉಡುಪಿ ಮತ್ತು ವಿಜಯಪುರದಲ್ಲಿ ಮಾಡಿಕೊಂಡಿದ್ದರು. ಜಪ್ತಿ ಮಾಡಲಾದ 10.20 ಕೋಟಿ ರೂ.ಯಲ್ಲಿ 4.88 ಕೋಟಿ ರೂ. ನಗದು ಕೂಡ ಸೇರಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ