ಆ್ಯಪ್ನಗರ

ರೋಷನ್‌ ಬೇಗ್‌ಗೆ ಆಸೆಗೆ ಮುಳುವಾಗಿದ್ದು ಸಂಘ ಪರಿ­ವಾರ­ದೊಂದಿಗಿನ ಸೈದ್ಧಾಂತಿಕ ಸಂಘರ್ಷ

ಅನರ್ಹ ಶಾಸಕ ರೋಷನ್‌ ಬೇಗ್‌ಗೆ ಬಿಜೆಪಿ ಟಿಕೆಟ್‌ ಕೈ ತಪ್ಪಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಂಘ ಪರಿ­ವಾರ­ದೊಂದಿಗೆ ಈ ಹಿಂದೆ ನಡೆಸಿದ ಸೈದ್ಧಾಂತಿಕ ಸಂಘರ್ಷವೇ ಇದಕ್ಕೆ ಕಾರಣ ಎಂದು ಗುಲ್ಲೆಬ್ಬಿದೆ.

Vijaya Karnataka Web 15 Nov 2019, 8:52 am
ಬೆಂಗಳೂರು: ಅನರ್ಹ ಶಾಸಕ ರೋಷನ್‌ ಬೇಗ್‌ಗೆ ಬಿಜೆಪಿ ಟಿಕೆಟ್‌ ಕೈ ತಪ್ಪಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಂಘ ಪರಿ­ವಾರ­ದೊಂದಿಗೆ ಈ ಹಿಂದೆ ನಡೆಸಿದ ಸೈದ್ಧಾಂತಿಕ ಸಂಘರ್ಷವೇ ಪಕ್ಷ ಸೇರ್ಪಡೆಗೆ ಅಡ್ಡಿಯಾಗಿ ಪರಿಣಮಿಸಿರುವ ಸಾಧ್ಯತೆ ಇದೆ.
Vijaya Karnataka Web Roshan Baig


ಬಿಜೆಪಿ ಸೇರಿದ ಅನರ್ಹರು: ರೋಷನ್ ಬೇಗ್ ಬಿಟ್ಟು ಮಿಕ್ಕವರೆಲ್ಲರನ್ನೂ ಬರಮಾಡಿಕೊಂಡ ಯಡಿಯೂರಪ್ಪ

ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಗೆಲುವು ಸಾಧಿಸಿರುವ ರೋಷನ್‌ ಬೇಗ್‌ ಜತೆಗೆ ಬಿಜೆಪಿ ಮೊದಲಿನಿಂದಲೂ ತಾತ್ವಿಕ ಹೋರಾಟ ನಡೆಸುತ್ತಲೇ ಇದೆ. ಕೆಲ ವರ್ಷಗಳ ಹಿಂದೆ ಈ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಸಂಘ-ಪರಿವಾರದ ಕಾರ್ಯಕರ್ತ ರುದ್ರೇಶ್‌ ಕೊಲೆ ಪ್ರಕರಣದಲ್ಲಿ ಬೇಗ್‌ ಕೈವಾಡವಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಅದೇ ರೀತಿ ಐಎಂಎ ಪ್ರಕರಣದಲ್ಲೂ ರೋಷನ್‌ ಬೇಗ್‌ ಪಾತ್ರವಿದೆ ಎಂದು ಆರೋಪಿಸಲಾಗಿತ್ತು.

'ಕೈ'ಕೊಟ್ಟು 'ನಿರಾಶ್ರಿತ'ರಾದ ರೋಷನ್ ಬೇಗ್! 'ಬೇಡ' ಎನ್ನಲು ಬಿಜೆಪಿ ಕೊಟ್ಟ ಕಾರಣವೇನು ಗೊತ್ತಾ?

ಹೀಗಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಸಾರ್ವಜನಿಕವಾಗಿ ಮುಜುಗರ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಿಂದೇಟು ಹಾಕಲಾಗಿದೆ. ಬೇಗ್‌ ವಿಚಾರದಲ್ಲಿ ಸಂಘ ಪರಿವಾರದ ಹಿರಿಯ ನಾಯಕರು ಪಟ್ಟು ಸಡಿಲಿಸಿಲ್ಲ. ಜತೆಗೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಿರ್ಮಲ್‌ ಕುಮಾರ್‌ ಸುರಾನಾ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಅವರಿಗೆ ಪಕ್ಷದ ಬಾಗಿಲು ಬಂದ್‌ ಮಾಡ­ಲಾಗಿದ್ದು,ರೋಷನ್ ಬೇಗ್ ಪಕ್ಷೇತರವಾಗಿ ಚುನಾವಣೆ ಎದುರಿಸಲು ಸಿದ್ದತೆ ನಡೆಸುತ್ತಿದ್ದಾರೆ.

ಕೈ ತಪ್ಪಿದ ಬಿಜೆಪಿ ಟಿಕೆಟ್; ಪಕ್ಷೇತರವಾಗಿ ಸ್ಪರ್ಧೆಗೆ ರೋಷನ್ ಬೇಗ್ ಸಿದ್ದತೆ?

ಬಿಜೆಪಿಗೆ ಸೇರ್ಪಡೆಯಾ­ಗುವ ಅನರ್ಹ ಶಾಸಕರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಸುದ್ದಿ ತಿಳಿಯುತ್ತಿದ್ದಂತೆ ಬುಧವಾರ ರಾತ್ರಿಯೇ ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿ ತಮ್ಮ ನೇತೃತ್ವದ ಸರಕಾರ ರಚನೆಗೆ ತಾನು ಶಾಸಕ ಸ್ಥಾನ ತ್ಯಜಿಸಿದ ತ್ಯಾಗವೂ ಕಾರಣವಾಗಿದೆ. ಹೀಗಾಗಿ ಪಕ್ಷಕ್ಕೆ ಸೇರಿಸಿಕೊಂಡು ತಮಗೆ ಇಲ್ಲವೇ ಪುತ್ರನಿಗೆ ಟಿಕೆಟ್‌ ಕೊಡಬೇಕೆಂದು ಪಟ್ಟು ಹಿಡಿದಿ­­ದ್ದರು.

ಕಾಂಗ್ರೆಸ್‌ನಲ್ಲಿ ಮುಗಿಯದ ಮುನಿಸು; ಅಭ್ಯರ್ಥಿ ಆಯ್ಕೆ ಸಭೆಗೆ ಹಿರಿಯರು ಚಕ್ಕರ್‌

ಆದರೆ ಈ ಬಗ್ಗೆ ಯಾವುದೇ ಭರವಸೆ ನೀಡಿದ ಯಡಿಯೂ­ರಪ್ಪ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ನಂತರ ತಿಳಿಸುವುದಾಗಿ ಹೇಳಿದ್ದರು. ಆದರೆ ಗುರುವಾರ ಮಧ್ಯಾಹ್ನ ಬಿಡುಗಡೆ­ಯಾದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದು ಕೇಳಿ ಆಘಾತ­ಕೊಳ್ಳಗಾದರು. ತಕ್ಷಣವೇ ತಮ್ಮ ಬೆಂಬಲಿ­ಗರು, ಹಿತೈಷಿಗಳ ಸಭೆ ನಡೆಸಿ ಪಕ್ಷೇ­ತರ­ರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ