ಆ್ಯಪ್ನಗರ

ಕ್ರೈಸ್ತರಿಗೆ ಟಿಕೆಟ್‌ ನೀಡದಿದ್ದರೆ ನೋಟಾ ಒತ್ತುತ್ತೇವೆ : ಎಚ್ಚರಿಕೆ

ಲೋಕಸಭೆ ಚುನಾವಣೆಯಲ್ಲಿ ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡದಿದ್ದರೆ ನೋಟಾ ಒತ್ತುವ ಮೂಲಕ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ. ಬಹಿಷ್ಕರಿಸುತ್ತೇವೆ

Vijaya Karnataka 28 Mar 2019, 5:00 am
ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡದಿದ್ದರೆ ನೋಟಾ ಒತ್ತುವ ಮೂಲಕ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.
Vijaya Karnataka Web if didnt give mp ticket christians will vote to nota
ಕ್ರೈಸ್ತರಿಗೆ ಟಿಕೆಟ್‌ ನೀಡದಿದ್ದರೆ ನೋಟಾ ಒತ್ತುತ್ತೇವೆ : ಎಚ್ಚರಿಕೆ


''ಯಾವ ರಾಜಕೀಯ ಪಕ್ಷಗಳೂ ನಮ್ಮ ಸಮುದಾಯದಿಂದ ಒಬ್ಬರಿಗೂ ಅವಕಾಶ ನೀಡಿಲ್ಲ. ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚು ಕ್ರೈಸ್ತ ಸಮುದಾಯದವರು ಇದ್ದಾರೆ. ನಮ್ಮ ಸಮುದಾಯದ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಚುನಾವಣೆಯಲ್ಲಿ ಬೆಂಗಳೂರು, ಮಂಗಳೂರು, ಕಾರವಾರ, ಬೀದರ್‌ಗಳಲ್ಲಿಯಾದರೂ ಸ್ಪಧಿರ್ಧಿಸಲು ಅವಕಾಶ ನೀಡಬೇಕು ಇಲ್ಲದಿದ್ದರೆ ನೋಟಾ ಒತ್ತುತ್ತೇವೆ,'' ಎಂದು ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಎಚ್ಚರಿಸಿದರು.

ಚುನಾವಣಾಧಿಕಾರಿಗೆ ಕೃತಜ್ಞತೆ

ಏಪ್ರಿಲ್‌ ತಿಂಗಳು ಕ್ರೈಸ್ತ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ತಿಂಗಳಾಗಿದ್ದು ಪ್ರಾರ್ಥನೆ ಪೂಜಾ ವಿಧಿಗಳನ್ನು ಆಚರಿಸಲು ಕ್ರೈಸ್ತ ಸಂಸ್ಥೆಗಳಿಂದ ಮತಗಟ್ಟೆಗಳನ್ನು ಸ್ಥಳಾಂತರಿಸುವಂತೆ ಕೋರಿದ್ದ ಮನವಿಯನ್ನು ಈಡೇರಿಸಿದ ಚುನವಣಾ ಅಧಿಕಾರಿ ಸಂಜೀವ್‌ಕುಮಾರ್‌ ಅವರಿಗೆ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಿದೆ.

''ಏಪ್ರಿಲ್‌ 17ರಿಂದ ಐದು ದಿನಗಳ ಕಾಲ ಕ್ರೈಸ್ತರಿಗೆ ಪವಿತ್ರವಾದ ಹಬ್ಬವಾಗಿರುವುದರಿಂದ ಕ್ರೈಸ್ತ ಸಂಸ್ಥಗಳಿಂದ ಮತಗಟ್ಟೆಯನ್ನು ಸ್ಥಳಾಂತರಿಸುವಂತೆ ಮತ್ತು ಕ್ರೈಸ್ತ ಧರ್ಮ ಅಧಿಕಾರಿಯನ್ನು ಮತ್ತು ನೌಕರರನ್ನು ಚುನಾವಣಾ ಕರ್ತವ್ಯದಿಂದ ಸದರಿ ದಿನಾಂಕಗಳಂದು ಕೈಬಿಡುವ ಬಗ್ಗೆ ಚುನಾವಣಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಚುನಾವಣಾ ಆಯೋಗ ನಮ್ಮ ಸಮುದಾಯದ ಮನವಿಯನ್ನು ಪರಿಗಣಿಸಿದೆ,'' ಎಂದು ಹ್ಯಾರಿ ಡಿಸೋಜ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ