ಆ್ಯಪ್ನಗರ

ನಾನಾದರೆ ರಾಜೀನಾಮೆ ನೀಡಲು ಹೇಳುತ್ತಿದ್ದೆ: ರಾಮಸ್ವಾಮಿ

ಆತ್ಮಸಾಕ್ಷಿ ನ್ಯಾಯಾಲಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜೀನಾಮೆ ಕೊಡುವುದೇ ಸೂಕ್ತವೆಂದು ನನ್ನನ್ನು ಕೇಳಿದ್ದರೆ ಸಲಹೆ ನೀಡುತ್ತಿದ್ದೆ ಎಂದು ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದ್ದಾರೆ.

Vijaya Karnataka 23 Jul 2019, 5:00 am
ಬೆಂಗಳೂರು : ಆತ್ಮಸಾಕ್ಷಿ ನ್ಯಾಯಾಲಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜೀನಾಮೆ ಕೊಡುವುದೇ ಸೂಕ್ತವೆಂದು ನನ್ನನ್ನು ಕೇಳಿದ್ದರೆ ಸಲಹೆ ನೀಡುತ್ತಿದ್ದೆ ಎಂದು ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದ್ದಾರೆ.
Vijaya Karnataka Web Sudhee_22_Assembly_Session_@_VS (130)


ವಿಶ್ವಾಸಮತ ನಿರ್ಣಯದ ಪರ ಮಾತನಾಡಿದ ಅವರು, ''ಕೃಷ್ಣ ಬೈರೇಗೌಡರು ಹಲವು ಕಾನೂನು ವಿಚಾರ ಪ್ರಸ್ತಾಪಿಸಿದ್ದಾರೆ. ನಾನಾದರೆ ರಾಜೀನಾಮೆ ಕೊಡಿ ಎನ್ನುತ್ತಿದ್ದೆ. ಆತ್ಮಸಾಕ್ಷಿಯೇ ಮುಖ್ಯ. ಅದಕ್ಕಿಂತ ದೊಡ್ಡ ನ್ಯಾಯಾಲಯ ಮತ್ತೊಂದಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಈ ಹಿಂದಿನ ಸಮ್ಮಿಶ್ರ ಸರಕಾರವಿದ್ದಾಗ ಕೊಟ್ಟ ಮಾತಿನಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವಂತೆಯೂ ಸಿಎಂ ಅವರಿಗೆ ಹೇಳಿದ್ದೆ,'' ಎಂದು ಮಾರ್ಮಿಕವಾಗಿ ನುಡಿದರು.

ಈಗಿನ ರಾಜಕೀಯ ಪ್ರಹಸನದಿಂದ ರಾಜ್ಯದ ಘನತೆ ಹಾಳಾಗುತ್ತಿದೆ ಎಂದ ಅವರು, ''ಜನಸೇವೆ ಮಾಡುವ ಕಾಳಜಿಯಿದ್ದರೆ ಪ್ರತಿಪಕ್ಷದಲ್ಲಿದ್ದರೂ ಸಾಕು. ಆಡಳಿತ ಪಕ್ಷದಲ್ಲಿದ್ದರೆ ಹಲವು ಬಂಧನವಿರುತ್ತದೆ. ಪ್ರತಿಪಕ್ಷವಾದರೆ ನಿರ್ಭೀತಿಯಿಂದ ಮಾತನಾಡಬಹುದು. ಬಿಎಂ ಕಾವಲ್‌ನ ಸರ್ವೆ ನಂ.137ರಲ್ಲಿ 310.18 ಎಕರೆ ಪ್ರದೇಶಕ್ಕೆ ಕೋಡೇಸ್‌ ಕುಟುಂಬದವರು ಬೇಲಿ ಹಾಕಿಕೊಂಡಿದ್ದಾರೆ. ಇದನ್ನು ವಶಕ್ಕೆ ತೆಗೆದುಕೊಳ್ಳುವ ಕ್ರಮವಾಗಿಲ್ಲ. ಯಾಕೆ ಯಾರೂ ಈ ಬಗ್ಗೆ ಚರ್ಚಿಸಿಲ್ಲ. ನಾವೆಲ್ಲ ಅವರ ಹಂಗನಲ್ಲಿದ್ದೇವಾ? ಅವರ ಎಂಜಲು ತಿಂದಿದ್ದೇವಾ? ಪ್ರತಿಪಕ್ಷದವರು ಇಂಥ ವಿಚಾರವನ್ನೇಕೆ ಎತ್ತಿಕೊಳ್ಳುವುದಿಲ್ಲ,'' ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ