ಆ್ಯಪ್ನಗರ

ಅಕ್ರಮ ಮಾಸ್ಕ್ ಮಾರಾಟ: 6958 ಮಳಿಗೆಗಳಿಗೆ ದಂಡ, 13.37 ಲಕ್ಷ ರೂ.ಸಂಗ್ರಹ

ಕೋವಿಡ್‌-19 ಹಿನ್ನೆಲೆ ಅಕ್ರಮವಾಗಿ ಅಧಿಕ ದರಕ್ಕೆ ಮಾಸ್ಕ್ ಮಾರಾಟ ಮಾಡುತ್ತಿದ್ದ ರಾಜ್ಯದ ಹತ್ತು ವಲಯಗಳಲ್ಲಿ 6,958 ಕಡೆ ದಾಳಿ ನಡೆಸಿ 335 ಪ್ರಕರಣಗಳನ್ನು ದಾಖಲಿಸಿ, ಒಟ್ಟು 13.37 ಲಕ್ಷ ರೂ. ದಂಡವನ್ನು ರಾಜ್ಯ ಸರ್ಕಾರ ಸಂಗ್ರಹಿಸಿದೆ.​​

Vijaya Karnataka Web 3 Jul 2020, 7:41 am
ಬೆಂಗಳೂರು: 2020ರ ಮಾರ್ಚ್ ನಿಂದ ಮೇವರೆಗೆ ಅಕ್ರಮ ಮಾಸ್ಕ್‌ ದಾಸ್ತಾನು ಮತ್ತು ಮಾರಾಟದ ವಿರುದ್ಧ ರಾಜ್ಯದ ಹತ್ತು ವಲಯಗಳಲ್ಲಿ 6,958 ಕಡೆ ದಾಳಿ ನಡೆಸಿ 335 ಪ್ರಕರಣಗಳನ್ನು ದಾಖಲಿಸಿ, ಒಟ್ಟು 13.37 ಲಕ್ಷ ರೂ. ದಂಡ ಸಂಗ್ರಹ ಮಾಡಲಾಗಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸರಕಾರ ಹೇಳಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ಅಕ್ರಮ ಮಾಸ್ಕ್‌ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಡಾ. ರಾಜೀವ್‌ ಆರ್‌. ಗೋತೆ ಸಲ್ಲಿಸಿರುವ ಅರ್ಜಿಯ ಮನವಿ ಆಲಿಸುತ್ತಿರುವ ಸಿಜೆ ಎ.ಎಸ್‌. ಓಕ್‌ ನೇತೃತ್ವದ ನ್ಯಾಯಪೀಠದ ಮುಂದೆ ಸರಕಾರಿ ವಕೀಲರು ಈ ವಿಷಯ ತಿಳಿಸಿದ್ದಾರೆ. ಮಾಸ್ಕ್‌ಗಳಿಗೆ ಸಂಬಂಧಿಸಿದಂತೆ ಬಿಡಿಬಿಡಿಯಾಗಿ ಮಾರಾಟ ಮಾಡುವುದನ್ನು ಕಾನೂನು ಮಾಪನಶಾಸ್ತ್ರತ್ರ(ಪ್ಯಾಕೇಜಿಂಗ್‌) ನಿಯಮ 2011ರಡಿ ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ, ಮಾಸ್ಕ್‌, ಸ್ಯಾನಿಟೈಸರ್‌ಗಳಿಗೆ ಅಧಿಕ ದರ ವಿಧಿಸುವುದನ್ನು ನಿಯಂತ್ರಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರ ವಿವರಿಸಿದೆ.

.''ಎನ್‌-95 ಮಾಸ್ಕ್‌ ಮತ್ತು ಪಿಪಿಇ ಕಿಟ್‌ಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಮಾಡಿರುವ ಆರೋಪಗಳು ನಿಜವಲ್ಲ, ಕೇಂದ್ರ ಸರಕಾರ 2020ರ ಮಾರ್ಚ್ 21ರಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಮೂರು ಪದರಗಳ ಮಾಸ್ಕ್‌ಗೆ ಗರಿಷ್ಠ 10 ರೂ. ಮತ್ತು ಎರಡು ಪದರದ ಮಾಸ್ಕ್‌ಗೆ ಗರಿಷ್ಠ 8 ರೂ. ವಿಧಿಸುವಂತೆ ಸೂಚಿಸಿತ್ತು ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ