ಆ್ಯಪ್ನಗರ

ಐಎಂಎ ಪ್ರಕರಣ ಸಿಬಿಐಗೆ ವಹಿಸಲ್ಲ

ಐಎಂಎ ಕಂಪನಿ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಎಂಬಿಪಾಟೀಲ್‌ ತಿಳಿಸಿದರು...

Vijaya Karnataka 18 Jun 2019, 5:00 am
ಮೈಸೂರು: ಐಎಂಎ ಕಂಪನಿ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು.
Vijaya Karnataka Web Bableshwar- MB Patil- Congress


ಮೈಸೂರಿನ ಕಾರಾಗೃಹ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಿಬಿಐಗೆ ನೀಡಿರುವ ಪ್ರಕರಣಗಳ ತನಿಖೆ ಏನಾಗಿವೆ ಅಂತ ನಮಗೆ ಗೊತ್ತಿದ್ದು, ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ. ಅಲ್ಲದೆ ಎಸ್‌ಐಟಿ ಈ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಲಿದೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ವಂಚನೆ ಪ್ರಕರಣದಲ್ಲಿರುವವರು ಸಚಿವರಾಗಿದ್ದರೂ ಸರಿ, ಶಾಸಕರಾಗಿದ್ದರೂ ಸರಿ ಅಥವಾ ಯಾರೇ ಪ್ರಭಾವಿಗಳಾಗಿದ್ದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು,'' ಎಂದು ಹೇಳಿದರು.

ಶೋಭಾಗೆ ತಿರುಗೇಟು: ಜಿಂದಾಲ್‌ಗೆ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ವಿರುದ್ದ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ''ಶೋಭಾ ಕರಂದ್ಲಾಜೆ ದೊಡ್ಡ ಮೇಧಾವಿಗಳು. ತಾಳ್ಮೆಯಿಂದ ನಡೆದುಕೊಳ್ಳಬೇಕು. ಹೆಣ್ಣು ಮಕ್ಕಳ ಬಾಯಲ್ಲಿ ಅಂತಹ ಪದ ಬರಬಾರದು. ಅವರ ಹಿನ್ನೆಲೆ, ಸಂಸ್ಕಾರ, ಸಂಸ್ಕೃತಿ ಜನರಿಗೆ ಗೊತ್ತಿದೆ. ಅದೇ ರೀತಿ ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿ ಬಗ್ಗೆಯೂ ಜನರಿಗೆ ಗೊತ್ತಿದೆ. ಅವರು ಹೆಣ್ಣು ಮಗಳು ಅಂತ ನಾನು ಯಾವ ಪದಗಳನ್ನು ಪ್ರಯೋಗಿಸುತ್ತಿಲ್ಲ. ನಾವು ಬಿಜಾಪುರದವರು, ನಮಗೆ ಬೇರೆ ಪದಗಳೆ ಗೊತ್ತು,'' ಎಂದು ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ