ಆ್ಯಪ್ನಗರ

ಎಲ್ಲಿದ್ದಾನೆಂದು ಗೊತ್ತು ಎಂದ ಎಸ್‌ಐಟಿ ಚೀಫ್‌

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್‌ ಖಾನ್‌ ಶೀಘ್ರವೇ ಎಸ್‌ಐಟಿ ಬಲೆಗೆ ಬೀಳುವ ...

Vijaya Karnataka 25 Jun 2019, 5:00 am
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್‌ ಖಾನ್‌ ಶೀಘ್ರವೇ ಎಸ್‌ಐಟಿ ಬಲೆಗೆ ಬೀಳುವ ಸಾಧ್ಯತೆ ದಟ್ಟವಾಗಿದೆ.
Vijaya Karnataka Web Ravikanthe


''ಮನ್ಸೂರ್‌ ಎಲ್ಲಿದ್ದಾನೆ ಎನ್ನುವುದು ನಮಗೆ ಗೊತ್ತಿದೆ. ತನಿಖೆಯ ದೃಷ್ಟಿಯಿಂದ ಎಲ್ಲಿದ್ದಾನೆಂದು ಹೇಳಲಾಗದು. ಆತನ ಬಂಧನಕ್ಕೆ ಪ್ರಕ್ರಿಯೆ ಮುಂದುವರೆದಿದೆ,'' ಎಂದು ಎಸ್‌ಐಟಿ ಮುಖ್ಯಸ್ಥ ಡಿಐಜಿ ರವಿಕಾಂತೇಗೌಡ ತಿಳಿಸಿದ್ದಾರೆ.

ಮನ್ಸೂರ್‌ ಖಾನ್‌ನ ವೀಡಿಯೊ ಬಿಡುಗಡೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ''ಕಾನೂನಿಗೆ ಶರಣಾಗ್ತೀನಿ ಎಂದು ಆರೋಪಿ ಹೇಳಿದ್ದಾನೆ. ಆತನಿಗೆ ಮತ್ತು ಕುಟುಂಬಕ್ಕೆ ಪ್ರಾಣ ಭಯ ಇದೆ ಎಂದೂ ಹೇಳಿದ್ದಾನೆ. ಕಾನೂನಿಗೆ ತನ್ನನ್ನು ಒಪ್ಪಿಸಿಕೊಳ್ಳುವುದಾದರೆ ಆತನಿಗೆ ಮತ್ತು ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲಾಗುವುದು,'' ಎಂದರು.

ನಿರ್ದೇಶಕರ ವಿಚಾರಣೆ: ಐಎಂಎಯ 12 ನಿರ್ದೇಶಕರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಸಾಕಷ್ಟು ಮಾಹಿತಿ ಹೊರಬಿದ್ದಿವೆ. ಇನ್ನೂ ಕೆಲವರನ್ನು ಗುರುತಿಸಲಾಗಿದ್ದು ಬಂಧಿಸಲಾಗುವುದು ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

ಸದ್ಯ ಐಎಂಎಗೆ ಸೇರಿದ ಚರಾಸ್ಥಿ ಮತ್ತು ಸ್ಥಿರಾಸ್ಥಿಗಳು, ಚಿನ್ನ, ಬೆಳ್ಳಿ, ವಜ್ರಾಭರಣಗಳನ್ನು ಜಪ್ತಿ ಮಾಡಲಾಗಿದೆ. ಸೂಕ್ತ ಎನ್ನಿಸಿದ ಮತ್ತು ಮುಂದಿನ ಹಂತದ ತನಿಖೆಗೆ ಧಕ್ಕೆ ಆಗದ ಸಂಗತಿಗಳನ್ನು ಪ್ರತೀ ಎರಡು ದಿನಕ್ಕೊಮ್ಮೆ ಮಾಧ್ಯಮಗಳಿಗೆ ನೀಡಲಾಗುವುದು ಎಂದರು ತಿಳಿಸಿದರು.

ಯು-ಟ್ಯೂಬ್‌ ಅಪ್‌ಲೋಡ್‌ ಪರಿಶೀಲನೆ

ಇತ್ತೀಚೆಗೆ ಬಿಡುಗಡೆಯಾದ ವಿಡಿಯೊವನ್ನು ಭಾರತದಿಂದಲೇ ಅಪ್‌ಲೋಡ್‌ ಮಾಡಲಾಗಿದೆ. ವಿದೇಶದಲ್ಲಿದ್ದಾನೆ ಎನ್ನಲಾದ ಆತ ಭಾರತದಲ್ಲಿರುವ ಯಾರಿಗೋ ಕಳುಹಿಸಿ ಅವರು ಅಪ್‌ಲೋಡ್‌ ಮಾಡಿರಬಹುದು ಎಂಬ ಶಂಕೆಯೂ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಥವಾ ಅವನೇ ಭಾರತದಲ್ಲೂ ಇರಬಹುದು ಎಂಬ ಶಂಕೆಯೂ ಇದೆ.

ಹೇಳಿಕೆಗಳ ಪರಿಶೀಲನೆ

ವಿಡಿಯೊದಲ್ಲಿ ಮನ್ಸೂರ್‌ ಹೇಳಿರುವ ಎಲ್ಲಾ ಸಂಗತಿಗಳನ್ನೂ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ವಿಡಿಯೊದಲ್ಲಿ ಆತ ಹೇಳಿರುವ ಹೆಸರು, ವಿಚಾರಗಳು ಸತ್ಯವೂ ಇರಬಹುದೂ, ಸುಳ್ಳೂ ಇರಬಹುದು. ತನಿಖೆಯಿಂದ ಇದು ಸ್ಪಷ್ಟವಾಗಲಿದೆ. ಆರೋಪಿ ಹೇಳಿದ ಎಂದ ತಕ್ಷಣ ಅವರುಗಳಿಗೆಲ್ಲಾ ನೋಟಿಸ್‌ ನೀಡುವುದು ತನಿಖೆಯ ಕ್ರಮ ಅಲ್ಲ.
- ರವಿಕಾಂತೇ ಗೌಡ, ಎಸ್‌ಐಟಿ ಮುಖ್ಯಸ್ಥರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ