ಆ್ಯಪ್ನಗರ

ಮನ್ಸೂರ್‌ ಖಾನ್‌ ನ್ಯಾಯಾಂಗ ವಶಕ್ಕೆ

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಗಳಾದ ಮನ್ಸೂರ್‌ ಖಾನ್‌ ಮತ್ತು ನವೀದ್‌ ಅಹ್ಮೆದ್‌ನನ್ನು ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಂಗ ವಶಕ್ಕೆ ...

Vijaya Karnataka 25 Sep 2019, 5:00 am
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಗಳಾದ ಮನ್ಸೂರ್‌ ಖಾನ್‌ ಮತ್ತು ನವೀದ್‌ ಅಹ್ಮೆದ್‌ನನ್ನು ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
Vijaya Karnataka Web ima fraud cases
ಮನ್ಸೂರ್‌ ಖಾನ್‌ ನ್ಯಾಯಾಂಗ ವಶಕ್ಕೆ


14 ದಿನಗಳ ವಿಚಾರಣೆ ಅವಧಿ ಮುಗಿದ ಹಿನ್ನೆಲೆಯಲ್ಲಿ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿಕೊಂಡಿರುವ ಎರಡನೇ ಎಫ್‌ಐಆರ್‌ ಸಂಬಂಧಿಸಿದಂತೆ ಮನ್ಸೂರ್‌ ಖಾನ್‌ ಹಾಗೂ ಇತರ ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯಲ್ಲಿದಾಖಲಾಗಿದ್ದ ಪ್ರಕರಣ ಆಧರಿಸಿ ದಾಖಲಾಗಿರುವ ಮೊದಲನೇ ಪ್ರಕರಣದಲ್ಲಿ20 ಆರೋಪಿಗಳಿದ್ದಾರೆ. ಮತ್ತೊಂದು ಪ್ರಕರಣದಲ್ಲಿಬಿಡಿಎ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪಿ.ಡಿ ಕುಮಾರ್‌ 1ನೇ ಆರೋಪಿಯಾಗಿದ್ದು, ಮನ್ಸೂರ್‌ ಖಾನ್‌ 2ನೇ ಆರೋಪಿಯಾಗಿದ್ದಾನೆ.

ಹಿನ್ನೆಲೆ
ಖಾನ್‌ ಸೇರಿ ಇತರ ಆರೋಪಿಗಳ ವಿಚಾರಣೆ ವೇಳೆ, ಬಿಡಿಎ ಉತ್ತರ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಆಗಿರುವ ಪಿ.ಡಿ ಕುಮಾರ್‌ ಅವರು, ಐಎಂಎ ಮತ್ತು ಅದರ ಸಂಬಂಧಿಸಿದ ಕಂಪನಿಗಳಿಂದ 5 ಕೋಟಿ ರೂ. ಲಂಚ ಪಡೆದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಪಿ.ಡಿ ಕುಮಾರ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಜು.1ರಂದು ಅವರ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದರು. ಕುಮಾರ್‌ ಪಡೆದುಕೊಂಡ 5 ಕೋಟಿ ರೂ. ಪೈಕಿ 1 ಕೋಟಿ ರೂ.ಯನ್ನು ಐಎಂಎ ಕಂಪನಿಗೆ ಕುಮಾರ್‌ ಮರಳಿಸಿದ್ದರು. ಉಳಿದ 4 ಕೋಟಿ ರೂ.ಯಲ್ಲಿ20.51 ಲಕ್ಷ ರೂ.ಯನ್ನು ಗೋಪಾಲಕೃಷ್ಣ ಎಂಬುವರಿಗೆ ಡಿಡಿ ಮಾಡಲಾಗಿದ್ದು, 3.8 ಕೋಟಿ ರೂ.ಯನ್ನು ಸ್ವಂತಕ್ಕೆ ಬಳಸಿದ್ದರು.

ಬುಧವಾರ ಜಮೀರ್‌ ಅಹ್ಮದ್‌ ವಿಚಾರಣೆ ?

ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಮಾಜಿ ಸಚಿವ ಜಮೀರ್‌ ಅಹ್ಮದ್‌ ಅವರು ಕಾಲಾವಕಾಶ ಕೇಳಿದ್ದರು. ಬುಧವಾರಂದು ಜಮೀರ್‌ ಅವರು ಸಿಬಿಐ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ