ಆ್ಯಪ್ನಗರ

ಮುಸ್ಲಿಂ ರಾಜಕಾರಣಿಗಳು, ಅಧಿಕಾರಿಗಳಿಗೆ ಲಂಚ ಕೊಟ್ಟು ಸಾಕಾಗಿದೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ಐಎಂಎ ಜ್ಯುವೆಲ್ಸ್‌ ಮಾಲೀಕ

​ನನ್ನ ಬಳಿ 500 ಕೋಟಿ ರೂ. ಮೌಲ್ಯದ ಆಸ್ತಿ ಇದೆ. 30 ಸಾವಿರ ಕ್ಯಾರೆಟ್‌ ವಜ್ರಗಳಿವೆ, ಚಿನ್ನ ಇದೆ. ಇದನ್ನೆಲ್ಲಾ ತಮ್ಮ ಕಸ್ಟಡಿಗೆ ಪಡೆದು ಅದರಿಂದ ಹೂಡಿಕೆದಾರರಿಗೆ ಹಣ ವಾಪಸ್ ನೀಡಿ ಎಂದು ಕಮಿಷನರ್‌ಗೆ ಮನವಿ ಮಾಡಲಾಗಿದೆ.

Vijaya Karnataka Web 10 Jun 2019, 8:57 pm
ಬೆಂಗಳೂರು: ನೀವು ಈ ಆಡಿಯೋ ಕೇಳೋ ಹೊತ್ತಿಗೆ ನಾನು ಈ ಲೋಕದಲ್ಲಿ ಇರೋದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ....
Vijaya Karnataka Web ಮೊಹಮದ್‌ ಮನ್ಸೂರ್‌ ಖಾನ್
ಮೊಹಮದ್‌ ಮನ್ಸೂರ್‌ ಖಾನ್


ಇದು ಐಎಂಎ ಜ್ಯುವೆಲ್ಸ್‌ ಮಾಲೀಕ ಮೊಹಮದ್‌ ಮನ್ಸೂರ್ ಖಾನ್‌ ಮಾಡಿದ್ದಾರೆ ಎನ್ನಲಾದ ಆಡಿಯೋ ಟೇಪ್‌ನಲ್ಲಿರುವ ಮಾಹಿತಿ.

ಈ ಆಡಿಯೋ ಟೇಪ್‌ ಅನ್ನು ಪೊಲೀಸ್‌ ಕಮಿಷನರ್‌ ಕಚೇರಿಗೆ ಕಳುಹಿಸಲಾಗಿದೆ. ಮೊಹಮದ್‌ ಮನ್ಸೂರ್ ಖಾನ್‌ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಾರೆ. ಇದರಿಂದ ಸಾವಿರಾರು ಗ್ರಾಹಕರು ತಮ್ಮ ಹಣ ಪಡೆಯಲು ಮಳಿಗೆಯ ಮುಂದೆ ಜಮಾಯಿಸಿದ್ದಾರೆ.

10 ರಿಂದ 12 ವರ್ಷದಲ್ಲಿ ಐಎಂಎ ಜ್ಯುವೆಲ್ಸ್‌ ಅನ್ನು ಈ ಮಟ್ಟಿಗೆ ತರಲು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಆದರೆ ನನ್ನ ಬಳಿ ಇರುವ ಹಣವನ್ನು ಹಲವಾರು ಮಂದಿ ಪಡೆದುಕೊಂಡಿದ್ದಾರೆ ಎಂದು ಆಡಿಯೋ ಟೇಪ್‌ನಲ್ಲಿ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರದ ಮುಸ್ಲಿಂ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಲಂಚ ಕೊಟ್ಟು ಕೊಟ್ಟು ಸಾಕಾಗಿದೆ. ನನ್ನಿಂದ ಹಣ ಪಡೆಯಲು ಸುಳ್ಳು ಆರೋಪಗಳನ್ನು ಹರಿಯಬಿಡಲಾಗುತ್ತಿದೆ ಎಂದು ಟೇಪ್‌ನಲ್ಲಿ ಆರೋಪಿಸಲಾಗಿದೆ.

ನನ್ನ ಬಳಿ ಇರೋ ಆಸ್ತಿ ಮಾರಿ ಹೂಡಿಕೆದಾರರಿಗೆ ಹಣ ವಾಪಸ್ ಮಾಡಿ ಎಂದು ಮನವಿ ಮಾಡಿದ್ದಾರೆ.

ಪಿಎಂಒ ಕಚೇರಿಗೂ ಮತ್ತು ಆರ್‌ಬಿಐಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬಿಡಿಎ ಕುಮಾರ್‌ ಎಂಬುವರ ಬಳಿ ನನ್ನ 5 ಕೋಟಿ ರೂ. ಇದೆ ಎಂದೂ ಖಾನ್‌ ಮಾಹಿತಿ ನೀಡಿದ್ದಾರೆ.

ನನ್ನ ಬಳಿ 500 ಕೋಟಿ ರೂ. ಮೌಲ್ಯದ ಆಸ್ತಿ ಇದೆ. 30 ಸಾವಿರ ಕ್ಯಾರೆಟ್‌ ವಜ್ರಗಳಿವೆ, ಚಿನ್ನ ಇದೆ. ಇದನ್ನೆಲ್ಲಾ ತಮ್ಮ ಕಸ್ಟಡಿಗೆ ಪಡೆದು ಅದರಿಂದ ಹೂಡಿಕೆದಾರರಿಗೆ ಹಣ ವಾಪಸ್ ನೀಡಿ ಎಂದು ಕಮಿಷನರ್‌ಗೆ ಮನವಿ ಮಾಡಲಾಗಿದೆ.

ಈ ಆಡಿಯೋ ಟೇಪ್‌ ಎಲ್ಲಿ ಮಾಡಲಾಗಿದೆ. ಮೊಹಮದ್‌ ಮನ್ಸೂರ್‌ ಖಾನ್‌ ಎಲ್ಲಿದ್ದಾರೆ ಎಂಬುದು ನಿಗೂಢವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ