ಆ್ಯಪ್ನಗರ

ಬೈ ಎಲೆಕ್ಷನ್ ಮೇಲೂ 'ಮಹಾ' ರಂಪಾಟದ ಎಫೆಕ್ಟ್! ಬಿಜೆಪಿಗೆ ಬಿಸಿ ಮುಟ್ಟಿಸಲು ಕೈ-ತೆನೆ ಸನ್ನದ್ಧ!

ಮಹಾರಾಷ್ಟ್ರ ರಾಜಕೀಯ ವಿದ್ಯಮಾನಗಳ ಬಗ್ಗೆ ಬಿಜೆಪಿ ಮುಖಂಡರ ದೃಷ್ಟಿ ನೆಟ್ಟಿರುವುದೂ ಗಮನಕ್ಕೆ ಬರುವಂತಿತ್ತು. ಪ್ರತಿಪಕ್ಷಗಳು ಈ ವಿಷಯವನ್ನು ದೊಡ್ಡದು ಮಾಡಿದರೆ ಪ್ರತಿದಾಳಿ ನಡೆಸುವುದಕ್ಕೂ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

Vijaya Karnataka Web 26 Nov 2019, 8:47 pm
ಬೆಂಗಳೂರು: ಮಹಾರಾಷ್ಟ್ರ ರಾಜಕಾರಣದ ಪ್ರಹಸನ, ರಾಜ್ಯದಲ್ಲೂ ಬೈ ಎಲೆಕ್ಷನ್‌ ಅಖಾಡದಲ್ಲಿ ರಂಗು ತರಲಿದೆ. ಪ್ರತಿಪಕ್ಷಗಳ ಕೈಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಇದರಿಂದ ಬಿಜೆಪಿಗೆ ಇರಿಸುಮುರಿಸು ಉಂಟಾಗುವುದೂ ನಿಶ್ಚಿತ ಎಂದೇ ವಿಶ್ಲೇಷಿಸಲಾಗ್ತಿದೆ.
Vijaya Karnataka Web impact of maharashtra political development in karnataka assempby by election
ಬೈ ಎಲೆಕ್ಷನ್ ಮೇಲೂ 'ಮಹಾ' ರಂಪಾಟದ ಎಫೆಕ್ಟ್! ಬಿಜೆಪಿಗೆ ಬಿಸಿ ಮುಟ್ಟಿಸಲು ಕೈ-ತೆನೆ ಸನ್ನದ್ಧ!


ಸರಕಾರ ರಚಿಸಲು ಅಗತ್ಯ ಸಂಖ್ಯಾಬಲವಿಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನವೀಸ್‌ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌-ಎನ್‌ಸಿಪಿ-ಶಿವಸೇನೆ ಮೈತ್ರಿಕೂಟ ಕಾನೂನು ಹೋರಾಟ ನಡೆಸಿದ್ದರಿಂದ ಫಡ್ನವೀಸ್‌ ಅಧಿಕಾರ ಅಂತ್ಯಗೊಂಡಿದೆ. ರಾಜ್ಯದಲ್ಲೂ2018ರ ವಿಧಾನಸಭೆ ಚುನಾವಣೆ ಬಳಿಕ ಸಿಎಂ ಪದವಿಗೇರಿದ್ದ ಬಿ.ಎಸ್‌.ಯಡಿಯೂರಪ್ಪ ಇದೇ ಪರಿಸ್ಥಿತಿ ಎದುರಿಸಿದ್ದರು. ಆಗಲೂ ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ಅಪಚಾರ ಆಗುತ್ತಿರುವುದಾಗಿ ಕಾಂಗ್ರೆಸ್‌ ಆರೋಪಿಸಿತ್ತು.

ಈಗಲೂ ಮಹಾರಾಷ್ಟ್ರದ ವಿದ್ಯಮಾನದಿಂದ ರಾಜ್ಯದ ಪ್ರತಿಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರಯೋಗಿಸಲು ಪ್ರಬಲ ಅಸ್ತ್ರವೇ ದೊರಕಿದಂತಾಗಿದೆ. ಮಹಾರಾಷ್ಟ್ರದಲ್ಲಿ ಫಡ್ನವೀಸ್‌ ಪ್ರಮಾಣವಚನ ಸ್ವೀಕರಿಸಿದಾಗಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದರು.

ಬಿಜೆಪಿಗೆ ಯಾಮಾರಿಸಿದ್ರಾ ಅಜಿತ್ ಪವಾರ್? 'ಸೀನಿಯರ್ ಪವಾರ್' ಎದುರು ನಡೆಯಲಿಲ್ಲ 'ಚಾಣಕ್ಯ' ಪವರ್!

ಬಿಜೆಪಿಯಲ್ಲೂ ಚರ್ಚೆ

ಮಹಾರಾಷ್ಟ್ರದಲ್ಲಿ ಸರಕಾರ ಉಳಿಸಿಕೊಳ್ಳಲು ಸಾಧ್ಯವಾಗದೆ ಇರುವ ಬಗ್ಗೆ ರಾಜ್ಯ ಬಿಜೆಪಿ ವಲಯದಲ್ಲೂ ಚರ್ಚೆಯಾಗುತ್ತಿದೆ. ಮಹಾರಾಷ್ಟ್ರ ಪ್ರಕರಣದ ತೀರ್ಪು ಬರುವಾಗ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲೇ ಇದ್ದರು. ಮಹಾರಾಷ್ಟ್ರ ರಾಜಕೀಯ ವಿದ್ಯಮಾನಗಳ ಬಗ್ಗೆ ಬಿಜೆಪಿ ಮುಖಂಡರ ದೃಷ್ಟಿ ನೆಟ್ಟಿರುವುದೂ ಗಮನಕ್ಕೆ ಬರುವಂತಿತ್ತು. ಪ್ರತಿಪಕ್ಷಗಳು ಈ ವಿಷಯವನ್ನು ದೊಡ್ಡದು ಮಾಡಿದರೆ ಪ್ರತಿದಾಳಿ ನಡೆಸುವುದಕ್ಕೂ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

'ಮಹಾ' ಬೃಹನ್ನಾಟಕಕ್ಕೆ ಬೊಂಬಾಟ್ ಟ್ವಿಸ್ಟ್! ಬಾಲಿವುಡ್‌ನ ಎಲ್ಲಾ ಟ್ರಿಕ್ಸ್‌ ಮೀರಿಸಿದ ಪಾಲಿ'ಟ್ರಿಕ್ಸ್'..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ