ಆ್ಯಪ್ನಗರ

ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ 'ಶಬರಿಮಲೆ ಪ್ರಸಾದ'

ಅಯ್ಯಪ್ಪ ಸ್ವಾಮಿ ಭಕ್ತರು ಮನೆಯಲ್ಲೇ ಕುಳಿತುಕೊಂಡು ಶಬರಿಮಲೆಯ ಪ್ರಸಾದವನ್ನು ಆನ್ ಲೈನ್ ಮೂಲಕ ಬುಕ್ ಮಾಡಬಹುದು. ಆರ್ಡರ್ ಮಾಡುವ ಭಕ್ತರ ಮನೆಗೆ ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದದ ಕಿಟ್ ತಲುಪಿಸಲಾಗುತ್ತದೆ.

Vijaya Karnataka Web 29 Nov 2020, 11:05 am
ಬೆಂಗಳೂರು: ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ ಇದೆ. ಶಬರಿಮಲೆಯ ಬಹು ಬೇಡಿಕೆಯ ಹಾಗೂ ಹೆಚ್ಚು ರುಚಿಕರವಾದ ಅರವಣ (ಪಾಯಸ) ಪ್ರಸಾದ ಮನೆ ಬಾಗಿಲಿಗೇ ಬರಲಿದೆ!
Vijaya Karnataka Web ಶಬರಿ ಮಲೆ
ಸಾಂದರ್ಭಿಕ ಚಿತ್ರ


ಈ ಸಂಬಂಧ ಭಾರತೀಯ ಅಂಚೆ ಇಲಾಖೆಯು ತಿರುವಾಂಕೂರು ದೇವಸ್ಥಾನ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸ್ಪೀಡ್‌ ಪೋಸ್ಟ್‌ ಮೂಲಕ ರಾಜ್ಯಾದ್ಯಂತ ಮನೆ ಬಾಗಿಲಿಗೆ ಅಯ್ಯಪ್ಪಸ್ವಾಮಿ ಪ್ರಸಾದ ತಲುಪಿಸುವ ಕಾರ್ಯ ಕೈಗೊಂಡಿದೆ.

ಭಕ್ತರು ಅಂಚೆ ಕಚೇರಿಗೆ ತೆರಳಿ ಪ್ರತಿ ಪ್ಯಾಕೇಟ್‌ ಪ್ರಸಾದಕ್ಕೆ 450 ರೂ. ನಂತೆ ಇ-ಪಾವತಿ ಮೂಲಕ ಕೌಂಟರ್‌ನಲ್ಲಿ ಹಣ ಪಾವತಿಸಬಹುದು. ಒಂದು ರಸೀದಿ ಅಡಿ ಹತ್ತು ಪ್ಯಾಕೆಟ್‌ ಪ್ರಸಾದವನ್ನು ಬುಕ್‌ ಮಾಡಬಹುದಾಗಿದೆ. ಭಕ್ತರು ಮಾಡುವ ಪ್ರಸಾದ ಬುಕ್ಕಿಂಗ್‌ಗೆ ಯಾವುದೇ ಗರಿಷ್ಠ ಮಿತಿಯಿಲ್ಲ. ಅಂದರೆ ಭಕ್ತರು ಬೇರೆ ಬೇರೆ ರಸೀದಿಗಳನ್ನು ಪಡೆದು ಎಷ್ಟು ಬೇಕಾದರೂ ಪ್ಯಾಕೆಟ್‌ಗಳನ್ನು ಬುಕ್‌ ಮಾಡಬಹುದು ಎಂದು ಬೆಂಗಳೂರಿನ ಜಿಪಿಒ ಚೀಫ್‌ ಪೋಸ್ಟ್‌ ಮಾಸ್ಟರ್‌ ಕೆ. ರಾಧಾಕೃಷ್ಣ ತಿಳಿಸಿದರು. ಈ ಯೋಜನೆಯಡಿ ನಿತ್ಯ ನೂರಾರು ಭಕ್ತರು ಪ್ರಸಾದವನ್ನು ಬುಕ್‌ ಮಾಡುತ್ತಿದ್ದಾರೆ.
ಕೇರಳ: ಶಬರಿಮಲೆ ದೇವಾಲಯ ಒಪನ್‌ ಆದ ಬಳಿಕ 39 ಕೊರೊನಾ ಪ್ರಕರಣ ದಾಖಲು, ಎಚ್ಚರಿಕೆ ವಹಿಸುವಂತೆ ಸೂಚನೆ!

ಯಾವ್ಯಾವ ಪ್ರಸಾದ ಪಾರ್ಸೆಲ್‌ ಬರುತ್ತದೆ?

ಅರವಣ, ತುಪ್ಪ, ಅರಿಶಿನ-ಕುಂಕುಮ, ವಿಭೂತಿ ಮತ್ತು ಅರ್ಚನೆಯ ಪ್ರಸಾದವನ್ನು ಒಳಗೊಂಡ ಕಿಟ್‌ ಇದಾಗಿದೆ.

ಹಣ ಎಷ್ಟು?
450 ರೂ
ಶಬರಿಮಲೆಯಲ್ಲಿ ಶಾಕಿಂಗ್ ರೂಲ್ಸ್..! ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ಕೇರಳದಲ್ಲಿ ಕೋವಿಡ್‌ ಸೆಸ್..‌!

ಹೇಗೆ ಬರುತ್ತೆ?
ಈ ಪ್ರಸಾದವನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ಪ್ಯಾಕ್‌ ಮಾಡಿ, ಭಕ್ತರಿಗೆ ಸ್ಪೀಡ್‌ ಪೋಸ್ಟ್‌ ಮೂಲಕ ಕಳುಹಿಸಲಾಗುವುದು. ಬುಕ್‌ ಮಾಡಿದ ಒಂದು ವಾರದೊಳಗೆ ಮನೆ ಬಾಗಿಲಿಗೆ ಬರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ