ಆ್ಯಪ್ನಗರ

ಸಾವರ್ಕರ್ ಅವರನ್ನು ಹೊಗಳಿದ್ದ ಇಂದಿರಾ: ಕಾಂಗ್ರೆಸ್‌ಗೆ ನೆನಪಿಸಿದ ಬಿಜೆಪಿ

''ಗೂಬೆ ಕೂರಿಸುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮ. ಸಿದ್ಧಗಂಗಾ ಸ್ವಾಮೀಜಿಗೆ ಭಾರತರತ್ನ ಬರಬೇಕೆಂಬ ಆಶಯ ನಮಗೂ ಇದೆ. ಇದನ್ನು ಸಾವರ್ಕರ್‌ಗೆ ತಳುಕು ಹಾಕಿ ದಿಕ್ಕು ತಪ್ಪಿಸುವುದು ಸರಿಯಲ್ಲ. ಸಿದ್ದರಾಮಯ್ಯನವರು ಗೊಂದಲ ಸೃಷ್ಟಿ ಮಾಡುವುದನ್ನು ಬಿಡಲಿ,'' ...

Vijaya Karnataka 21 Oct 2019, 7:11 am
ಬೆಂಗಳೂರು: ವೀರ ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ವಿಚಾರಕ್ಕೆ ರಾಜಕಾರಣಿಗಳು ನಡೆಸುತ್ತಿರುವ ವಾಗ್ವಾದ ಮುಂದುವರಿಯುತ್ತಲೇ ಇದ್ದು, ಸಿದ್ದರಾಮಯ್ಯ ಜತೆ ಬಿಜೆಪಿ ಮುಖಂಡರು ನಡೆಸುತ್ತಿದ್ದ ಜಟಾಪಟಿಯ ಅಖಾಡಕ್ಕೆ ಈಗ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರೂ ಇಳಿದಿದ್ದಾರೆ.
Vijaya Karnataka Web dvs


ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ''ಗೂಬೆ ಕೂರಿಸುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮ. ಸಿದ್ಧಗಂಗಾ ಸ್ವಾಮೀಜಿಗೆ ಭಾರತರತ್ನ ಬರಬೇಕೆಂಬ ಆಶಯ ನಮಗೂ ಇದೆ. ಇದನ್ನು ಸಾವರ್ಕರ್‌ಗೆ ತಳುಕು ಹಾಕಿ ದಿಕ್ಕು ತಪ್ಪಿಸುವುದು ಸರಿಯಲ್ಲ. ಸಿದ್ದರಾಮಯ್ಯನವರು ಗೊಂದಲ ಸೃಷ್ಟಿ ಮಾಡುವುದನ್ನು ಬಿಡಲಿ,'' ಎಂದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯರನ್ನು ಹಡಗಿನಲ್ಲಿ ಅಂಡಮಾನ್‌ಗೆ ಕಳುಹಿಸಿಕೊಡಬೇಕು- ಸದಾನಂದಗೌಡ

ಸೆಕೆಂಡ್‌ ಹ್ಯಾಂಡ್‌ ವಾಹನ ಮಾರಾಟಗಾರ
: ಸಿದ್ದರಾಮಯ್ಯ ಬಗ್ಗೆ ಟೀಕಿಸಿದ ಸಿ.ಟಿ.ರವಿ ವಿರುದ್ಧ ಹೇಳಿಕೆ ನೀಡಿರುವ ಪರಿಷತ್‌ ಸದಸ್ಯ ಐವನ್‌ ಡಿಸೋಜಾ, ''ಕುಡಿದು ಅಪಘಾತ ನಡೆಸಿ ಅಮಾಯಕರ ಸಾವಿಗೆ ಕಾರಣರಾದ ರವಿ ಅವರಿಂದ ಸಿದ್ದರಾಮಯ್ಯ ಪಾಠ ಕಲಿಯಬೇಕಿಲ್ಲ. ಸೆಕೆಂಡ್‌ ಹ್ಯಾಂಡ್‌ ವಾಹನ ಮಾರಾಟ ಏಜೆಂಟ್‌ ಆಗಿದ್ದ ಸಿ.ಟಿ. ರವಿಗೆ ಕೋಟ್ಯಂತರ ರೂ. ಆಸ್ತಿ ಬಂದದ್ದಾದರೂ ಎಲ್ಲಿಂದ ಎಂಬ ಬಗ್ಗೆ ತನಿಖೆಯಾಗಲಿ,'' ಎಂದು ಆಗ್ರಹಿಸಿದ್ದಾರೆ.

''ಸ್ವಾತಂತ್ರ್ಯ ದೊರೆತು 72 ವರ್ಷ ವಾದರೂ ಸಾವರ್ಕರ್‌ ಮೇಲೆ ಪ್ರೀತಿ, ಪ್ರೇಮ ಇರಲಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ನೆನಪಾಗಿದ್ದಾರೆ. ಸಾವರ್ಕರ್‌ಗೆ ಭಾರತರತ್ನ ನೀಡಬೇಕೋ ಬೇಡವೊ ಎಂಬ ಬಗ್ಗೆ ಚರ್ಚೆಗೆ ಕಾಂಗ್ರೆಸ್‌ ಸಿದ್ಧ. ಸಾವರ್ಕರ್‌ ಬದಲು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಳಿದ್ದರಲ್ಲಿ ತಪ್ಪೇನಿದೆ,'' ಎಂದು ಪ್ರಶ್ನಿಸಿದ್ದಾರೆ.

ಮಾತು ವಾಪಸಿಗೆ ಆಗ್ರಹ: ''ರಾಜಕೀಯವಾಗಿ ಅನುಭವಿಯಾಗಿರುವ ಸಿದ್ದರಾಮಯ್ಯ ಸಾವರ್ಕರ್‌ ಬಗ್ಗೆ ಲಘು ವಾಗಿ ಮಾತನಾಡಿರುವುದು ಸರಿಯಲ್ಲ. ಕೂಡಲೇ ಹೇಳಿಕೆ ವಾಪಸ್‌ ಪಡೆಯುವಂತೆ,'' ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿ ದ್ದಾರೆ. ''ಸಾವರ್ಕರ್‌ ಬಗ್ಗೆ ಇಂದಿರಾ ಗಾಂಧಿ ಪ್ರಶಂಸೆಯ ಮಾತುಗಳನ್ನಾಡಿರುವ ದಾಖಲೆಗಳು ಇವೆ. ಸಿದ್ದರಾಮಯ್ಯ ರಾಜಕೀಯದ ಹಿರಿಯಾಳು. ಸಾವರ್ಕರ್‌ನ್ನು ಟೀಕಿಸದೇ ಆಡಿರುವ ಮಾ ತನ್ನು ಹಿಂಪಡೆದರೆ ಅವರ ಗೌರವ ಹೆಚ್ಚುತ್ತದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ