ಆ್ಯಪ್ನಗರ

ಇಂದಿನಿಂದ ಇಂದ್ರಧನುಷ್‌ ಅಭಿಯಾನ

ಗ್ರಾಮ ಸ್ವರಾಜ್ಯ ಅಭಿಯಾನದಡಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜೂ.20, 22 ಮತ್ತು 23 ಹಾಗು ಜು.18, 20 ಮತ್ತು 21ರವರೆಗೆ 'ಇಂದ್ರಧನುಷ್‌' ಅಭಿಯಾನ ಹಮ್ಮಿಕೊಂಡಿದೆ.

Vijaya Karnataka 20 Jun 2018, 7:49 am
ಬೆಂಗಳೂರು : ಗ್ರಾಮ ಸ್ವರಾಜ್ಯ ಅಭಿಯಾನದಡಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜೂ.20, 22 ಮತ್ತು 23 ಹಾಗು ಜು.18, 20 ಮತ್ತು 21ರವರೆಗೆ 'ಇಂದ್ರಧನುಷ್‌' ಅಭಿಯಾನ ಹಮ್ಮಿಕೊಂಡಿದೆ.
Vijaya Karnataka Web indra danush


''ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ,ರಾಜ್ಯಾದ ಎಲ್ಲಾ ಸರಕಾರಿ ಆಸ್ಪತ್ರೆಗಳು ಮತ್ತು ಉಪಕೇಂದ್ರಗಳಲ್ಲಿ 'ಇಂದ್ರಧನುಷ್‌' ಅಭಿಯಾನದಡಿ ಉಚಿತವಾಗಿ ಲಸಿಕೆ ಹಾಕಲಾಗುವುದು. ಗರ್ಭಿಣಿಯರಿಗೆ - ಟಿಟಿ ಲಿಸಿಕೆ (ಧನುರ್ವಾಯು), ಎರಡು ವರ್ಷದ ಒಳಗಿನ ಮಕ್ಕಳಿಗೆ ಬಿಸಿಜಿ, ಪೋಲಿಯೊ, ದಢಾರ ಮತ್ತು ರುಬೆಲ್ಲಾ ಪ್ರತ್ಯೇಕ ಲಸಿಕೆ ಹಾಗೂ ಡಿಪಿಟಿ, ಹೆಪಟೈಟಿಸ್‌-ಬಿ ಇನ್ಫ್ಲುಯೆಂಜಾ-ಬಿ ಸೇರಿರುವ ಪೆಂಟಾವೆಲೆಂಟ್‌ ಹಾಗೂ 5 ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ ಬೂಸ್ಟರ್‌ ಹಾಕಲಾಗುವುದು,'' ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ವಿವರಗಳಿಗೆ ಸಮೀಪದ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಹಾಗೂ 247 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ. ವೈಬ್‌ಸೈಟ್‌ www.karhfw.gov.in ಗೆ ಭೇಡಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ