ಆ್ಯಪ್ನಗರ

ಆಯುಧ ಪೂಜೆಗೆ ಸಿಹಿ-ಕಹಿ: ಕೈಗಾರಿಕಾ ಉತ್ಪಾದನೆ ಕುಸಿತ, ಆನ್‌ಲೈನ್‌ನಲ್ಲಿ ಭರ್ಜರಿ ವ್ಯಾಪಾರ

ಬೆಂಗಳೂರು ಸೇರಿದಂತೆ ರಾಜ್ಯದ ಕೈಗಾರಿಕೆ ಪ್ರದೇಶಗಳಲ್ಲಿ, ನಾನಾ ಉದ್ಯಮಗಳಲ್ಲಿಪ್ರತಿ ವರ್ಷ ಕಂಡುಬರುವ ಉತ್ಸಾಹ ಈ ಬಾರಿ ಇಲ್ಲ. ಹಲವಾರು ಸಂಸ್ಥೆಗಳು ಈ ಬಾರಿ ಕಾರ್ಮಿಕರಿಗೆ ಬೋನಸ್‌ ನೀಡಿಲ್ಲ.

Vijaya Karnataka 7 Oct 2019, 6:19 am
ಬೆಂಗಳೂರು: ಸಾಮಾನ್ಯವಾಗಿ ನವರಾತ್ರಿಯ ಒಂಬತ್ತನೇ ದಿನ ಆಯುಧ ಪೂಜೆ ವೇಳೆ ಲಕಲಕಿಸುವ ಉದ್ಯಮಗಳು ಈ ಬಾರಿ ಸಿಹಿ-ಕಹಿಯ ಮಿಶ್ರ ಭಾವವನ್ನು ಅನುಭವಿಸುತ್ತಿವೆ. ಬಹುತೇಕ ಕೈಗಾರಿಕೆಗಳು ಆರ್ಥಿಕ ಹಿಂಜರಿತದ ಪರಿಣಾಮವಾಗಿ ಸಂಭ್ರಮವನ್ನು ಆಚರಿಸುವ ಸ್ಥಿತಿಯಲ್ಲಿಲ್ಲ. ಆದರೆ ಇದೇ ಹೊತ್ತಿಗೆ ರಿಟೇಲ್‌ ಮತ್ತು ಆನ್‌ಲೈನ್‌ ಮಾರ್ಕೆಟಿಂಗ್‌ ವಲಯದಲ್ಲಿ ಭರ್ಜರಿ ವ್ಯಾಪಾರ ಕಂಡುಬಂದಿದೆ.
Vijaya Karnataka Web dasara


ಬೆಂಗಳೂರು ಸೇರಿದಂತೆ ರಾಜ್ಯದ ಕೈಗಾರಿಕೆ ಪ್ರದೇಶಗಳಲ್ಲಿ, ನಾನಾ ಉದ್ಯಮಗಳಲ್ಲಿಪ್ರತಿ ವರ್ಷ ಕಂಡುಬರುವ ಉತ್ಸಾಹ ಈ ಬಾರಿ ಇಲ್ಲ. ಹಲವಾರು ಸಂಸ್ಥೆಗಳು ಈ ಬಾರಿ ಕಾರ್ಮಿಕರಿಗೆ ಬೋನಸ್‌ ನೀಡಿಲ್ಲ. ಹೊಸಬಟ್ಟೆ, ಸಿಹಿತಿಂಡಿಗಳ ಪೊಟ್ಟಣವಿಲ್ಲ. ಕೆಲವು ಕಡೆ ಆಯುಧ ಪೂಜೆಯನ್ನೇ ರದ್ದು ಮಾಡಲಾಗಿದೆ.

ಉತ್ಪಾದನೆ ಕುಸಿತದ ಪರಿಣಾಮವಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಬಹುಕೇತ ಕಡೆ ಗುತ್ತಿಗೆ ನೌಕರರನ್ನು ತೆಗೆದುಹಾಕಲಾಗಿದೆ. ಹೆಚ್ಚಿನ ಕಾರ್ಖಾನೆಗಳಲ್ಲಿಮೂರು ಪಾಳಿ ಒಂದಕ್ಕಿಳಿದಿದೆ. ತಿಂಗಳ ಅಂತ್ಯದಲ್ಲಿ ವೇತನರಹಿತ ಸುದೀರ್ಘ ರಜೆಗಳನ್ನು ನೀಡಿ, ಉತ್ಪಾದನೆಯನ್ನು ನಿಲ್ಲಿಸಲಾಗುತ್ತಿದೆ. ಇದು ದೊಡ್ಡ ಕೈಗಾರಿಕೆಗಳಿಂದ ಹಿಡಿದು ಸಣ್ಣ ಉದ್ಯಮಗಳವರೆಗೂ ವ್ಯಾಪಿಸಿದೆ.

ಹೀಗಿದೆ ರಾಜ್ಯದ ಕೈಗಾರಿಕೆಗಳ ಸ್ಥಿತಿ

- ಪೀಣ್ಯ ಕೈಗಾರಿಕೆ ಪ್ರದೇಶ 10 ಸಾವಿರ ಕೈಗಾರಿಕೆಗಳ ಪೈಕಿ 2000ಕ್ಕೆ ಬೀಗ.

- ಹಲವಾರು ಉದ್ಯಮಗಳಲ್ಲಿಶೇ. 40ರಷ್ಟು ಉದ್ಯೋಗಿಗಳಿಗೆ ಕೊಕ್‌

- ಶಿವಮೊಗ್ಗದಲ್ಲಿವಾಹನ ಬಿಡಿಭಾಗ ತಯಾರಿಸುವ ಫೌಂಡ್ರಿಗಳಿಗೆ ಬೀಗ

- ದ.ಕ.ದಲ್ಲಿ ಆಹಾರ ಉದ್ಯಮ ಬಿಟ್ಟರೆ ಉಳಿದೆಲ್ಲವೂ ಸಂಕಷ್ಟದಲ್ಲಿ

- ಕೊಪ್ಪಳ ಜಿಲ್ಲೆಯಲ್ಲಿಸ್ಪೀಲ್‌ ಫ್ಯಾಕ್ಟರಿಗಳಿಗೆ ಹೊಡೆತ, ಹಲವು ಬಂದ್‌

- ಬೆಳಗಾವಿಯ ಹೆಚ್ಚಿನ ಉದ್ಯಮಗಳಲ್ಲಿಒಂದೇ ಶಿಫ್ಟ್‌, ವಾರಕ್ಕೆರಡು ರಜೆ

- ದಾವಣಗೆರೆಯಲ್ಲಿಸಿದ್ಧ ಉಡುಪುಗಳ ಉತ್ಪಾದನೆ ಶೇ.50 ಕುಸಿತ

- ವಿಜಯಪುರದಲ್ಲಿದ್ದ 20 ಕಾಟನ್‌ ಜಿನ್ನಿಂಗ್‌ ಮಿಲ್‌ಗಳಲ್ಲಿ10 ಬಂದ್‌

ಆಟೊಮೊಬೈಲ್‌ ಕ್ಷೇತ್ರ ಕುಸಿತಗೊಂಡಿದ್ದರಿಂದ ಉದ್ಯೋಗ ಕಡಿತ ಆಗುತ್ತಿದೆ. ಇದು ಆದಷ್ಟು ಬೇಗ ಸರಿ ದಾರಿಗೆ ಬರಲಿದ್ದು, ಈ ನಿಟ್ಟಿನಲ್ಲಿಸರಕಾರ ಕೂಡ ಸೂಕ್ತ ಕ್ರಮ ಕೈಗೊಳ್ಳಲಿದೆ.
-ಜಗದೀಶ ಶೆಟ್ಟರ್‌, ಕೈಗಾರಿಕೆ ಸಚಿವ
**************************

ಭರ್ಜರಿ ಆನ್‌ಲೈನ್‌ ವಹಿವಾಟು

ಹಬ್ಬದ ಸಂದರ್ಭದಲ್ಲಿಭರ್ಜರಿ ವಹಿವಾಟು ನಡೆದಿದೆ ಎಂದು ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಕಂಪನಿಗಳು ಹೇಳಿಕೊಂಡಿವೆ. ಈ ಬಾರಿ 2ನೇ ಹಂತದ ನಗರಗಳಲ್ಲಿ ಹೆಚ್ಚಿನ ವ್ಯವಹಾರ ನಡೆದಿದ್ದು, 50% ಹೊಸ ಗ್ರಾಹಕರು ಸೃಷ್ಟಿಯಾಗಿದ್ದಾರೆ ಎಂದಿವೆ.

ಉತ್ಪಾದನೆರಹಿತ ದಿನ ಘೋಷಣೆ

ಜರ್ಮನಿ ಮೂಲದ ಬಾಷ್‌ ಕಂಪನಿಯಿಂದ ಅಕ್ಟೋಬರ್‌ನಲ್ಲಿ10 ದಿನ ಉತ್ಪಾದನೆ ಸ್ಥಗಿತ

ಅಶೋಕ್‌ ಲೇಲ್ಯಾಂಡ್‌ ಕಂಪನಿಯ ಘಟಕಗಳಲ್ಲಿ3 ತಿಂಗಳಿಂದ ಅನುತ್ಪಾದಕ ದಿನ ಆಚರಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ