ಆ್ಯಪ್ನಗರ

ಮಾಹಿತಿ ಆಯುಕ್ತರ ನೇಮಕ ತಡೆಗೆ ಆಯೋಗಕ್ಕೆ ದೂರು

ರಾಜ್ಯ ಮಾಹಿತಿ ಆಯೋಗಕ್ಕೆ ಮುಖ್ಯ ಮಾಹಿತಿ ಆಯುಕ್ತರು ಹಾಗೂ ಇಬ್ಬರು ಮಾಹಿತಿ ಆಯುಕ್ತರ ನೇಮಕ ಸಂಬಂಧ ಸರಕಾರದ ಶಿಫಾರಸನ್ನು ತಡೆ ಹಿಡಿಯುವಂತೆ ಆರ್‌ಟಿಐ ಕಾರ್ಯಕರ್ತರ ರಾಜ್ಯ ಸಮಿತಿಯು ಚುನಾವಣೆ ಆಯೋಗಕ್ಕೆ ದೂರು ದಾಖಲಿಸಿದೆ.

Vijaya Karnataka 20 Mar 2019, 5:00 am
ಬೆಂಗಳೂರು : ರಾಜ್ಯ ಮಾಹಿತಿ ಆಯೋಗಕ್ಕೆ ಮುಖ್ಯ ಮಾಹಿತಿ ಆಯುಕ್ತರು ಹಾಗೂ ಇಬ್ಬರು ಮಾಹಿತಿ ಆಯುಕ್ತರ ನೇಮಕ ಸಂಬಂಧ ಸರಕಾರದ ಶಿಫಾರಸನ್ನು ತಡೆ ಹಿಡಿಯುವಂತೆ ಆರ್‌ಟಿಐ ಕಾರ್ಯಕರ್ತರ ರಾಜ್ಯ ಸಮಿತಿಯು ಚುನಾವಣೆ ಆಯೋಗಕ್ಕೆ ದೂರು ದಾಖಲಿಸಿದೆ.
Vijaya Karnataka Web information commissioner appointment
ಮಾಹಿತಿ ಆಯುಕ್ತರ ನೇಮಕ ತಡೆಗೆ ಆಯೋಗಕ್ಕೆ ದೂರು


ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಹೊಸ ನೇಮಕಾತಿಗಳಿಗೂ ಸಂಹಿತೆ ಅನ್ವಯವಾಗುವ ಕಾರಣ ಸರಕಾರವು ರಾಜ್ಯಪಾಲರಿಗೆ ಸಲ್ಲಿಸಿರುವ ಪಟ್ಟಿಗೆ ಅಂಕಿತ ಹಾಕಿ ಪ್ರಕಟಿಸದಂತೆ ಕ್ರಮ ಕೈಗೊಳ್ಳಲು ಸಮಿತಿಯು ಆಗ್ರಹಿಸಿದೆ.

''ಚುನಾವಣೆ ವೇಳಾಪಟ್ಟಿ ಮಾ.10ರಂದು ಹೊರಬಿದ್ದಿದೆ. ಇದಕ್ಕೂ ಒಂದು ದಿನ ಮುಂಚೆ ಸರಕಾರ ಮುಖ್ಯಮಾಹಿತಿ ಆಯುಕ್ತರ ಸ್ಥಾನಕ್ಕೆ ಕಾನೂನು ಇಲಾಖೆಯ ನಿವೃತ್ತ ಕಾರ್ಯದರ್ಶಿ ಶ್ರೀನಿವಾಸ್‌ ಹಾಗೂ ಇಬ್ಬರು ಮಾಹಿತಿ ಆಯುಕ್ತರ ಸ್ಥಾನಕ್ಕೆ(ಶಿವಮೊಗ್ಗದ ವಕೀಲ ಮಂಜುನಾಥ್‌ ಹಾಗೂ ಹಾಸನದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸೋಮಶೇಖರ್‌) ಹೆಸರನ್ನು ಸೂಚಿಸಿದೆ. ವೇಳಾಪಟ್ಟಿ ಪ್ರಕಟಕ್ಕೂ ಮುನ್ನ ಹೆಸರುಗಳನ್ನು ಶಿಫಾರಸು ಮಾಡಿದ್ದರೂ, ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ಸಂಬಂಧ ರಾಜ್ಯಪಾಲರಿಗೂ ಮನವಿಪತ್ರ ನೀಡಲಾಗಿದೆ,'' ಎಂದು ಸಮಿತಿಯ ಸಂಚಾಲಕ ಬಿ.ಎಚ್‌.ವೀರೇಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ