ಆ್ಯಪ್ನಗರ

ಕಾಂಗ್ರೆಸ್ ನಾಯಕ ಎಂ. ಬಿ. ಪಾಟೀಲ್‌ ಮನೆಗೆ ಸಚಿವ ಅಶ್ವತ್ಥ ನಾರಾಯಣ ಭೇಟಿ ನೀಡಿದ್ದು ನಿಜವೇ..?

'ಅಶ್ವಥ್ ನಾರಾಯಣ ಅವರನ್ನು ನಾನು ಇತ್ತೀಚೆಗೆ ಭೇಟಿಯಾಗಿಲ್ಲ. ಸದನ ನಡೆಯುವ ಸಮಯದಲ್ಲಿ ಭೇಟಿ ಆಗಿರಬಹುದು. ಆದರೆ ಭೇಟಿಯಾಗಬಾರದು ಅಂತ ಏನಿಲ್ಲ. ನನ್ನ ಮಗ, ಅವರ ಮಗಳು ಕ್ಲಾಸ್ ಮೇಟ್ಸ್ ಗಳಾಗಿದ್ದಾರೆ. ಅಶ್ವತ್ಥ್ ನಾರಾಯಣ ಅವರು ಉನ್ನತ ಶಿಕ್ಷಣ ಸಚಿವರು. ಅವರನ್ನು ಭೇಟಿ‌ ಮಾಡಿದ್ರೆ ತಪ್ಪಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ‌ ಮನೆಗೆ ಹೊದರೆ ತಿಂಡಿ ಮಾಡುತ್ತೇವೆ. ಆಡಳಿತ, ವಿರೋಧ ಪಕ್ಷದ ನಾಯಕರು ಭೇಟಿ ‌ಮಾಡೋದು ಸಹಜ. ಅದ್ರಲ್ಲಿ ಯಾವುದೇ ವಿಶೇಷ ಇಲ್ಲ' - ಎಂ. ಬಿ. ಪಾಟೀಲ್

Authored byಇರ್ಷಾದ್ ಉಪ್ಪಿನಂಗಡಿ | Edited byದಿಲೀಪ್ ಡಿ. ಆರ್. | Vijaya Karnataka Web 10 May 2022, 5:49 pm

ಹೈಲೈಟ್ಸ್‌:

  • ರಾಜಕೀಯ ಮೊಗಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ ಸುದ್ದಿ
  • ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ನಾಯಕ ಎಂ. ಬಿ. ಪಾಟೀಲ್
  • ಉಭಯ ನಾಯಕರ ಭೇಟಿ ವಿಚಾರಕ್ಕೆ ಆನಂದ್ ಸಿಂಗ್ ಸಮರ್ಥನೆ..!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web mb patil and ashwath narayan
ಕಾಂಗ್ರೆಸ್ ನಾಯಕ ಎಂ. ಬಿ. ಪಾಟೀಲ್‌ ಮನೆಗೆ ಸಚಿವ ಅಶ್ವತ್ಥ ನಾರಾಯಣ ಭೇಟಿ ನೀಡಿದ್ದು ನಿಜವೇ..?
ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಕುರಿತು ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ. ಬಿ. ಪಾಟೀಲ್ ಅವರ ನಿವಾಸಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಭೇಟಿ ನೀಡಿದ್ದಾರೆ ಎಂಬ ಸುದ್ದಿ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಿಎಸ್‌ಐ ಹಗರಣದಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರ ಸಹೋದರನ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜಕೀಯ ಆರೋಪ - ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಈ ನಡುವೆ ಎಂ. ಬಿ. ಪಾಟೀಲ್ ಅವರನ್ನು ಅಶ್ವತ್ಥ ನಾರಾಯಣ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಕುತೂಹಲ ಕೆರಳಿಸಿದೆ.

ಕರ್ನಾಟಕದ ಅತ್ಯಂತ ಭ್ರಷ್ಟಾಚಾರಿ ಸಚಿವ : ಅಶ್ವಥ್ ನಾರಾಯಣ್ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ
ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಸಹಜವಾಗಿಯೇ 'ಇದೊಂದು ಖಾಸಗಿ ಭೇಟಿ. ಅವರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಸಲಹೆ ಪಡೆಯಲು ಎಂ ಬಿ ಪಾಟೀಲರ ಮನೆಗೆ ಹೋಗಿದ್ದೆ ಎಂಬ ಸಬೂಬು ನೀಡುತ್ತಾರೆ' ಎಂದು ಹೇಳಿದ್ದರು. 'ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರೂ ಧ್ವನಿ ಎತ್ತಬಾರದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ' ಎಂದೂ ಡಿಕೆಶಿ ಆಪಾದಿಸಿದ್ದರು. ಆದರೆ ಇದೀಗ ಭೇಟಿ ಕುರಿತಾಗಿ ಹರಿದಾಡುತ್ತಿರುವ ಸುದ್ದಿಯನ್ನು ಎಂ. ಬಿ. ಪಾಟೀಲ್‌ ನಿರಾಕರಿಸಿದ್ದಾರೆ.

ಎಂಬಿ ಪಾಟೀಲ್ ಸ್ಪಷ್ಟನೆ ಏನು?

'ಅಶ್ವಥ್ ನಾರಾಯಣ ಅವರನ್ನು ನಾನು ಇತ್ತೀಚೆಗೆ ಭೇಟಿಯಾಗಿಲ್ಲ. ಸದನ ನಡೆಯುವ ಸಮಯದಲ್ಲಿ ಭೇಟಿ ಆಗಿರಬಹುದು. ಆದರೆ ಭೇಟಿಯಾಗಬಾರದು ಅಂತ ಏನಿಲ್ಲ. ನನ್ನ ಮಗ, ಅವರ ಮಗಳು ಕ್ಲಾಸ್ ಮೇಟ್ಸ್ ಗಳಾಗಿದ್ದಾರೆ. ಅಶ್ವತ್ಥ್ ನಾರಾಯಣ ಅವರು ಉನ್ನತ ಶಿಕ್ಷಣ ಸಚಿವರು. ಅವರನ್ನು ಭೇಟಿ‌ ಮಾಡಿದ್ರೆ ತಪ್ಪಿಲ್ಲ' ಎಂಬುದು ಎಂ. ಬಿ. ಪಾಟೀಲ್ ಸ್ಪಷ್ಟನೆ.

ಸಿಎಂ ಬಸವರಾಜ ಬೊಮ್ಮಾಯಿ‌ ಮನೆಗೆ ಹೊದರೆ ತಿಂಡಿ ಮಾಡುತ್ತೇವೆ. ಆಡಳಿತ, ವಿರೋಧ ಪಕ್ಷದ ನಾಯಕರು ಭೇಟಿ ‌ಮಾಡೋದು ಸಹಜ. ಅದ್ರಲ್ಲಿ ಯಾವುದೇ ವಿಶೇಷ ಇಲ್ಲ. ಆದ್ರೆ ನಾನು ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಿಲ್ಲ. ನನ್ನ ಭೇಟಿ ಮಾಡಿ ರಕ್ಷಣೆ ಪಡೆದಿದ್ದಾರೆ ಅಂತ ಡಿಕೆಶಿ ಹೇಳಿಕೆ ಕೊಟ್ಟಿದ್ರೆ ಅದು ತಪ್ಪು. ನಾನು ಡಿಕೆಶಿ ಜತೆ ಮಾತನಾಡ್ತೀನಿ. ನಾನು ಅಶ್ವತ್ಥ್ ನಾರಾಯಣ ಅವರನ್ನು ರಕ್ಷಣೆ ಮಾಡಕ್ಕೆ ಸಾಧ್ಯವೇ? ಎಂದು ಪ್ರಶ್ನಿಸಿದರು.

ಬಿಡಿಎನಲ್ಲಿ ಶೇ.70ರಷ್ಟು ಕಾಂಟ್ರ್ಯಾಕ್ಟ್ ಅಶ್ವತ್ಥ್ ನಾರಾಯಣ್ ತಮ್ಮನಿಗೆ ಹೋಗ್ತವೆ : ಕೈ ವಕ್ತಾರ ಲಕ್ಷ್ಮಣ್ ಆರೋಪ
ಆನಂದ್ ಸಿಂಗ್ ಸಮರ್ಥನೆ..!

ಇನ್ನು ಎಂಬಿ ಪಾಟೀಲ್ ಹಾಗೂ ಅಶ್ವತ್ಥ ನಾರಾಯಣ ಭೇಟಿ ವಿಚಾರವಾಗಿ ಸಚಿವ ಆನಂದ್‌ ಸಿಂಗ್ ಸಮರ್ಥಿಸಿಕೊಂಡಿದ್ದಾರೆ. ವಿಕಾಸಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು 'ಇಬ್ಬರೂ ಭೇಟಿ ಮಾಡಿದ್ದರೂ ಮಾಡಿರಬಹುದು. ನಾನು ಹಿಂದೆ ಡಿಕೆ ಶಿವಕುಮಾರ್ ಮನೆಗೆ ಹೋಗಿರಲಿಲ್ವಾ? ಆಗ ದೊಡ್ಡ ಸುದ್ದಿ ಆಗೋಯ್ತು. ಸಂಗಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸದ ಬಗ್ಗೆ ಡಿಕೆ ಶಿವಕುಮಾರ್ ಫೋನ್ ಮಾಡಿದ್ದರು. ನಾನು ಅಲ್ಲಿಯೇ ಹತ್ತಿರದಲ್ಲೇ ಇದ್ದೆ, ಹೀಗಾಗಿ ಡಿ. ಕೆ. ಶಿವಕುಮಾರ್ ಮನೆಗೆ ಹೋಗಿದ್ದೆ' ಎಂದರು.

'ಅಶ್ವತ್ಥ ನಾರಾಯಣ ಕೂಡ ಹಾಗೆಯೇ ಹೋಗಿರಬಹುದು. ಹಾಗೆ ಹೋಗಬಾರದು ಅಂತೇನೂ ಇಲ್ಲ. ಸಚಿವರಾದವರು ಭೇಟಿ ಮಾಡಬಾರದು ಅಂತೇನೂ ಇಲ್ಲ' ಎಂದು ಆನಂದ್ ಸಿಂಗ್ ಸಮರ್ಥನೆ ಮಾಡಿಕೊಂಡರು.

ಒಟ್ಟಿನಲ್ಲಿ ಇಬ್ಬರೂ ಮುಖಂಡರ ಭೇಟಿ ಸದ್ಯ ಹಲವು ಆಯಾಮಗಳಲ್ಲಿ ಚರ್ಚೆ ಆಗುತ್ತಿದೆ. ವಿರೋಧ ಪಕ್ಷದ ಮುಖಂಡರು ಪರಸ್ಪರ ಭೇಟಿ ಆಗುವುದರಲ್ಲಿ ಅಚ್ಚರಿ ಏನಿಲ್ಲ. ಆದರೆ ಸದ್ಯ ಪಿಎಸ್‌ಐ ಹಗರಣ ತಳಕು ಹಾಕಿಕೊಂಡಿರುವುದರಿಂದ ಈ ಭೇಟಿ ಸುದ್ದಿ ಮಹತ್ವ ಪಡೆದುಕೊಳ್ಳುತ್ತಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ