ಆ್ಯಪ್ನಗರ

ಐಟಿ ದಾಳಿ: ದೋಸ್ತಿಗಳಿಗೆ ಮಾತ್ರವಲ್ಲ,ಬಿಜೆಪಿಗೂ ದಿಗಿಲು !

ಮಂಡ್ಯ, ಹಾಸನ ಸೇರಿದಂತೆ ಗುರುವಾರ ಬೆಳಗ್ಗೆ ರಾಜ್ಯದ ನಾನಾ ಕಡೆ ದಾಳಿ ನಡೆಸಿರುವ ಐಟಿ ಇಲಾಖೆ ಅಧಿಕಾರಿಗಳು ಪ್ರಮುಖ ರಾಜಕೀಯ ಪಕ್ಷಗಳ ಆದಾಯ ಮೂಲಕ್ಕೆ ಕೈಹಾಕಿದ್ದಾರೆ. ಆದರೆ, ಜೆಡಿಎಸ್‌-ಕಾಂಗ್ರೆಸ್‌ಗೆ ಸಂಬಂಧಿಸಿದವರ ಮನೆಯ ಮೇಲೆ ದಾಳಿ ನಡೆಸಿದ್ದರಿಂದ ಈ ಪ್ರಕ್ರಿಯೆಗೆ ರಾಜಕೀಯ ಬಣ್ಣ ತಗುಲಿಕೊಂಡಿದೆ.

Vijaya Karnataka 29 Mar 2019, 8:26 am
ಬೆಂಗಳೂರು: ಲೋಕಸಮರದ ನೆರಳಿನಲ್ಲೆ ನಡೆದ ಐಟಿ ದಾಳಿಯಿಂದ ರಾಜ್ಯದ ರಾಜಕೀಯ ಪಕ್ಷಗಳಲ್ಲಿ ತಳಮಳ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಅಪಾರ ಪ್ರಮಾಣದ ಹಣದ ಹರಿವಿಗೂ ಕಡಿವಾಣ ಬೀಳುವ ನಿರೀಕ್ಷೆಯಿದೆ.
Vijaya Karnataka Web IT


ಮಂಡ್ಯ, ಹಾಸನ ಸೇರಿದಂತೆ ಗುರುವಾರ ಬೆಳಗ್ಗೆ ರಾಜ್ಯದ ನಾನಾ ಕಡೆ ದಾಳಿ ನಡೆಸಿರುವ ಐಟಿ ಇಲಾಖೆ ಅಧಿಕಾರಿಗಳು ಪ್ರಮುಖ ರಾಜಕೀಯ ಪಕ್ಷಗಳ ಆದಾಯ ಮೂಲಕ್ಕೆ ಕೈಹಾಕಿದ್ದಾರೆ. ಆದರೆ, ಜೆಡಿಎಸ್‌-ಕಾಂಗ್ರೆಸ್‌ಗೆ ಸಂಬಂಧಿಸಿದವರ ಮನೆಯ ಮೇಲೆ ದಾಳಿ ನಡೆಸಿದ್ದರಿಂದ ಈ ಪ್ರಕ್ರಿಯೆಗೆ ರಾಜಕೀಯ ಬಣ್ಣ ತಗುಲಿಕೊಂಡಿದೆ. ಇದರ ಬೆನ್ನಿಗೇ ದೋಸ್ತಿ ಪಕ್ಷಗಳ ನಾಯಕರು ಐಟಿ ಇಲಾಖೆ ವಿರುದ್ಧ ಪ್ರತಿಭಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಬಿಡುಬೀಸು ವಾಗ್ದಾಳಿ ನಡೆಸಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣಾ ಅಖಾಡದಲ್ಲಿ ಹಣದ ಪ್ರವಾಹ ಹರಿಸುವ ತಯಾರಿ ಮಾಡಿಕೊಂಡಿದ್ದ ರಾಜಕೀಯ ಪಕ್ಷಗಳಿಗೆ ಈ ಬೆಳವಣಿಗೆಯಿಂದ ಹಿನ್ನಡೆಯಾಗಲಿದೆ. ಐಟಿ ಅಧಿಕಾರಿಗಳು ಹದ್ದಿನ ಕಣ್ಣಿಡುವುದರಿಂದ ಹಣದ ಸಾಗಣೆಯೇ ಕಷ್ಟವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.

ಐಟಿ ದಾಳಿಯಾಗುವ ಸುಳಿವನ್ನು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬುಧವಾರವೇ ನೀಡಿದ್ದರು. ರಾಜಕೀಯ ಪ್ರೇರಿತವಾದ ಇಂಥ ದಾಳಿಯನ್ನು ಪ್ರಶ್ನಿಸುವುದಿಲ್ಲ. ಇದನ್ನು ವಿರೋಧಿಸಿ ಪ್ರತಿಭಟಿಸಲಾಗುವುದು ಎಂದೂ ಹೇಳಿದರು. ಅದರಂತೆ ಐಟಿ ದಾಳಿಯ ವರ್ತಮಾನ ಬೆಳಗ್ಗೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌-ಜೆಡಿಎಸ್‌ ಪ್ರಮುಖರು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಐಟಿ ದಾಳಿಯನ್ನು ಖಂಡಿಸಿದರು. ಮತ್ತೊಂದೆಡೆ ಸಿಎಂ ಎಚ್‌ಡಿಕೆ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸೇರಿದಂತೆ ಹಲವರು ಇದು ನರೇಂದ್ರ ಮೋದಿ ಪ್ರೇರಿತ ದಾಳಿ ಎಂಬಂತೆ ಆರೋಪಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ನಾಯಕರು ಇದರಲ್ಲಿ ರಾಜಕೀಯವೇನಿಲ್ಲ. ಐಟಿ ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಮೋದಿ ಅವರತ್ತ ಬೆರಳು ತೋರಿಸುವ ಅಗತ್ಯವಿಲ್ಲವೆಂದು ಸಮರ್ಥಿಸಿಕೊಂಡರು.

ಇದರ ನಡುವೆಯೇ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು ಐಟಿ ಕಚೇರಿ ಎದುರು ಪ್ರತಿಭಟಿಸಿದರು. ದೋಸ್ತಿ ಪಕ್ಷಗಳ ಮುಖಂಡರೂ ಹಾಜರಿದ್ದು ಕೇಂದ್ರದ ವಿರುದ್ಧ ದೋಷಾರೋಪಣೆ ಹೊರಿಸಿದರು.

ಎಸಿಬಿ ಆಸ್ತ್ರ ಪ್ರಯೋಗಿಸಿದರೆ...?

ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ಮತ್ತು ನಿಕಟವರ್ತಿಗಳ ಮೇಲೆ ಐಟಿ ದಾಳಿಯಾಗಿದೆ ಎಂದ ಮಾತ್ರಕ್ಕೆ ಬಿಜೆಪಿಯಲ್ಲಿ ಸುರಕ್ಷತಾ ಭಾವ ಮನೆ ಮಾಡಿದೆ ಎಂದರ್ಥವಲ್ಲ. ಯಾಕೆಂದರೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪವನ್ನು ಮೋದಿ ಸರಕಾರದ ಮೇಲೆ ಹೊರಿಸುತ್ತಿರುವ ದೋಸ್ತಿಗಳು ರಾಜ್ಯದಲ್ಲಿ ಇದೇ ದಾರಿ ತುಳಿಯುವ ಆತಂಕ ಬಿಜೆಪಿಗಿದೆ. ರಾಜ್ಯ ಸರಕಾರವೇನಾದರೂ ಎಸಿಬಿ ಅಸ್ತ್ರ ಪ್ರಯೋಗಿಸಿದರೆ ತನಗೂ ತೊಂದರೆ ತಪ್ಪಿದ್ದಲ್ಲವೆಂಬ ದಿಗಿಲು ಬಿಜೆಪಿಗೆ ಶುರುವಾಗಿದೆ.

ಇಲ್ಲಿ ಕಾಂಗ್ರೆಸ್‌/ಜೆಡಿಎಸ್‌ ಹೇಳಿಕೆಗಳು

ಯಾರು ಏನೆಂದರು?

ಬಿಜೆಪಿಯವರು ಸತ್ಯಹರಿಶ್ಚಂದ್ರರೇ ?

ಇಂಥ ರಾಜಕೀಯ ಪ್ರೇರಿತ ಐಟಿ ದಾಳಿಯನ್ನು ಖಂಡಿಸುತ್ತೇವೆ. ಇದರ ವಿರುದ್ಧ ಪ್ರತಿಭಟಿಸುತ್ತೇವೆ. ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್‌ ಶೆಟ್ಟರ್‌, ಆರ್‌.ಅಶೋಕ್‌ ಮನೆ ಮೇಲೆ ದಾಳಿಗಳಾಗಿವೆಯೇ? ಹಾಗಾದರೆ ಇವರೆಲ್ಲ ಸತ್ಯ ಹರಿಶ್ಚಂದ್ರರೇ? ಇವರ ಮನೆಗಳ ಮೇಲೂ ದಾಳಿ ಮಾಡಿ ಐಟಿ ಇಲಾಖೆ ಸ್ವಾಯತ್ತ ಸಂಸ್ಥೆಯೆಂದು ಸಾಬೀತು ಪಡಿಸಲಿ-ಸಿದ್ದರಾಮಯ್ಯ, ಮಾಜಿ ಸಿಎಂ

ಕೇಂದ್ರ ಸರಕಾರವು ಪ್ರಜಾಪ್ರಭುತ್ವದ ದೊಡ್ಡ ದೊಡ್ಡ ಸಂಸ್ಥೆಗಳನ್ನು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಐಟಿ ಅಧಿಕಾರಿಗಳು ಬಿಜೆಪಿಯ ಸ್ಟಾರ್‌ ಪ್ರಚಾರಕರಂತೆ ವರ್ತಿಸುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ