ಆ್ಯಪ್ನಗರ

ಕಾಫಿಡೇ ಮಾಲೀಕ ಸಿದ್ಧಾರ್ಥರ ಮನೆ ಮೇಲೆ ಐಟಿ ದಾಳಿ

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Vijaya Karnataka Web 21 Sep 2017, 12:55 pm
ಬೆಂಗಳೂರು: ಕರ್ನಾಟಕದಲ್ಲಿ ಪ್ರಮುಖ ರಾಜಕೀಯ ನಾಯಕರ ನಿದ್ದೆ ಗೆಡಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈಗ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
Vijaya Karnataka Web it raid on smk son in law sddhartha house
ಕಾಫಿಡೇ ಮಾಲೀಕ ಸಿದ್ಧಾರ್ಥರ ಮನೆ ಮೇಲೆ ಐಟಿ ದಾಳಿ


ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅಳಿಯ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಅವರ ಸದಾಶಿವನಗರ 3ನೇ ಕ್ರಾಸ್ ನಲ್ಲಿರುವ ಮನೆ ಹಾಗೂ ಕಚೇರಿಯಲ್ಲಿ ಸುಮಾರು 10 ಅಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ.
ಸಿದ್ದಾರ್ಥ ಅವರು ಹಲವಾರು ಕಡೆ ಕಚೇರಿಗಳನ್ನು ಹೊಂದಿದ್ದು, ಎಷ್ಟು ಕಡೆ ದಾಳಿ ನಡೆದಿದೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ದೇಶದ ಹಲವಾರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬಿಗಿ ಪೊಲೀಸ್ ಬಂದೋಬಸ್ತ್‌ ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.



ಎಸ್‌.ಎಂ. ಕೃಷ್ಣ ಅಳಿಯ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಅವರ ಸದಾಶಿವನಗರ 3ನೇ ಕ್ರಾಸ್ ನಲ್ಲಿರುವ ಮನೆ.

ಚಿಕ್ಕಮಗಳೂರಿನಲ್ಲೂ ದಾಳಿ

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಸಂಬಂಧಿ ಸಿದ್ದಾರ್ಥ ಒಡೆತನದ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಜಾಗೂ ಎಬಿಸಿ ಕಚೇರಿ ಮೇಲೆ ಐಟಿ ದಾಳಿ ನಡೆದಿದೆ. ನಗರದ ಮೂಡಿಗೆರೆ ರಸ್ತೆಯಲ್ಲಿರುವ ಕಚೇರಿ, ಚಿಕ್ಕಮಗಳೂರಿನ ಕಾಫಿ ಡೇ, ಗ್ಲೋಬಕ್ ಲಿಮಿಟೆಡ್ ಹಾಗೂ ಎಬಿಸಿ ಕಚೇರಿ ಮೇಲೆ ಐಟಿ ಅಧಿಕಾರಿ ಶರೀಫ್ ನೇತೃತ್ವದಲ್ಲಿ ಐಟಿ ದಾಳಿ ನಡೆಸಲಾಗಿದ್ದು ದಾಖಲೆಗಳ ಪರಿಶೀಲನೆ ನಡೆದಿದೆ. ಕಚೇರಿಯ ಮುಂಭಾಗದ ಗೇಟ್ ಅನ್ನು ಸಂಪೂರ್ಣ ಬಂದ್ ಮಾಡಿ ದಾಖಲೆಗಳ ಪರಿಶೀಲನೆ.

IT Raid on SMK Son in law Sddhartha

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ