ಆ್ಯಪ್ನಗರ

ಜಾಧವ್‌ ರಾಜೀನಾಮೆ : ತೀರ್ಪು ಕಾಯ್ದಿರಿಸಿದ ಸ್ಪೀಕರ್‌

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿರುವ ಚಿಂಚೋಳಿ ಶಾಸಕ ಡಾ.ಉಮೇಶ್‌ ಜಿ.ಜಾಧವ್‌ ಪ್ರಕರಣದಲ್ಲಿ ಸಂಬಂಧಿತ ಕ್ಷೇತ್ರದ ಮತದಾರರ ದೂರು, ಮನವಿ ಆಲಿಸುವ ಮೂಲಕ ಹೊಸದೊಂದು ಸಂಪ್ರದಾಯಕ್ಕೆ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ನಾಂದಿ ಹಾಡಿದ್ದಾರೆ. ಡಾ.ಜಾಧವ್‌ ರಾಜೀನಾಮೆ ಸ್ಪೀಕರಿಸಬೇಕೋ ಅಥವಾ ತಿರಸ್ಕರಿಸಬೇಕೋ ಎಂಬ ವಿಚಾರದಲ್ಲಿ ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ.

Vijaya Karnataka 26 Mar 2019, 5:00 am
ಬೆಂಗಳೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿರುವ ಚಿಂಚೋಳಿ ಶಾಸಕ ಡಾ.ಉಮೇಶ್‌ ಜಿ.ಜಾಧವ್‌ ಪ್ರಕರಣದಲ್ಲಿ ಸಂಬಂಧಿತ ಕ್ಷೇತ್ರದ ಮತದಾರರ ದೂರು, ಮನವಿ ಆಲಿಸುವ ಮೂಲಕ ಹೊಸದೊಂದು ಸಂಪ್ರದಾಯಕ್ಕೆ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ನಾಂದಿ ಹಾಡಿದ್ದಾರೆ. ಡಾ.ಜಾಧವ್‌ ರಾಜೀನಾಮೆ ಸ್ಪೀಕರಿಸಬೇಕೋ ಅಥವಾ ತಿರಸ್ಕರಿಸಬೇಕೋ ಎಂಬ ವಿಚಾರದಲ್ಲಿ ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ.
Vijaya Karnataka Web jadhav resignation reserve the desission
ಜಾಧವ್‌ ರಾಜೀನಾಮೆ : ತೀರ್ಪು ಕಾಯ್ದಿರಿಸಿದ ಸ್ಪೀಕರ್‌


ಸೋಮವಾರ ವಿಧಾನ ಸೌಧದಲ್ಲಿ ನಡೆದ ಕೋರ್ಟ್‌ ಕಲಾಪ ಮಾದರಿಯ ವಿಚಾರಣೆಯಲ್ಲಿ ರಾಜೀನಾಮೆ ನೀಡಿರುವ ಡಾ.ಜಾಧವ್‌ ಸಮ್ಮುಖದಲ್ಲಿ ರಾಜೀನಾಮೆಗೆ ಆಕ್ಷೇಪಣೆ ಸಲ್ಲಿಸಿರುವ ದೂರುದಾರರ ವಾದವನ್ನೂ ಆಲಿಸಿದ ಸ್ಪೀಕರ್‌ ತೀರ್ಪು ಕಾಯ್ದಿರಿಸಿದರು.

ತೀರ್ಮಾನ ಕಾಯ್ದಿರಿಸಿದ ಸ್ಪೀಕರ್‌

ರಾಜೀನಾಮೆ ಸ್ವೀಕಾರಕ್ಕೆ ತರಕಾರು ಎತ್ತಿರುವ ಪ್ರತಿಯೊಬ್ಬ ದೂರುದಾರರೂ ಪ್ರತಿಜ್ಞಾವಿಧಿ ಸ್ವೀಕರಿಸಿ ತಮ್ಮ ವಾದ ಮಂಡಿಸಿದರು. ಮುಖ್ಯ ದೂರುದಾರ ಕಾಂಗ್ರೆಸ್‌ ಹಾಗೂ ಶಾಸಕ ಡಾ.ಜಾಧವ್‌ ಪರ ವಕೀಲರೂ ವಿಚಾರಣೆಗೆ ಹಾಜರಾಗಿದ್ದರು.

ಕ್ಷೇತ್ರದ ದೂರುದಾರರ ಆಕ್ಷೇಪಗಳೇನು?

* ಡಾ.ಜಾಧವ್‌ ಆಮಿಷಗಳಿಗೆ ಒಳಗಾಗಿ ಬಿಜೆಪಿ ಸೇರಿದ್ದಾರೆ. ಅವರನ್ನು ಶಾಸಕರಾಗಿ ಆಯ್ಕೆ ಮಾಡಲು ನಾವು ಹಗಲು -ರಾತ್ರಿ ಕೆಲಸ ಮಾಡಿದ್ದೇವೆ. ರಾಜೀನಾಮೆ ತೀರ್ಮಾನದಿಂದ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುತ್ತದೆ. ರಾಜೀನಾಮೆ ವಾಪಸ್‌ ಪಡೆದು ನಮ್ಮ ಶಾಸಕರಾಗಿ ಮುಂದುವರಿಯಬೇಕು.

- ಸವಿತಾ ಎಂ ಸಜ್ಜನ, ಚಿಂಚೋಳಿ ಕ್ಷೇತ್ರದ ದೂರುದಾರರು.

* ಹಿಂದುಳಿದ ಚಿಂಚೋಳಿ ಮತಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮತಹಾಕಿದ ಜನರ ಕಷ್ಟಗಳಿಗೆ ಸ್ಪಂದಿಸುವ ಬದಲು ರಾಜೀನಾಮೆ ಕೊಟ್ಟು ಮತ್ತೊಂದು ಪಕ್ಷ ಕ್ಕೆ ಹೋಗುತ್ತಿರುವುದು ಎಷ್ಟು ಸರಿ...? ಜಾಧವ್‌ ಸ್ವತಂತ್ರ ನಿರ್ಧಾರ ತಪ್ಪು. ರಾಜೀನಾಮೆ ಹಿಂಪಡೆಯಬೇಕು. ಇಲ್ಲವಾದರೆ, ಸಭಾಧ್ಯಕ್ಷರು ಅನರ್ಹಗೊಳಿಸಬೇಕು.

-ರಾಜಕುಮಾರ, ಜ್ಞಾನಜ್ಯೋತಿ ಎಜುಕೇಷನ್‌ ಟ್ರಸ್ಟ್‌ನ ದೂರುದಾರ.

* ಡಾ.ಜಾಧವ್‌ ಮನಸ್ಸು ಕಲ್ಲಲ್ಲ, ಮುಳ್ಳಲ್ಲ. ಕ್ಷೇತ್ರದ ಮತದಾರರ ಆಕ್ಷೇಪ ಹಾಗೂ ಮನವಿಗಳ ಹಿನ್ನೆಲೆಯಲ್ಲಿ ರಾಜೀನಾಮೆ ತೀರ್ಮಾನ ಬದಲಾಗುತ್ತಾ ನೋಡೋಣ. ರಾಜೀನಾಮೆ ಸ್ವೀಕಾರ ಅಥವಾ ತಿರಸ್ಕಾರ ವಿಚಾರದಲ್ಲಿ ನನ್ನ ತೀರ್ಪು ಕಾಯ್ದಿರಿಸಿದ್ದೇನೆ.

-ಕೆ.ಆರ್‌.ರಮೇಶ್‌ಕುಮಾರ್‌, ವಿಧಾನಸಭಾಧ್ಯಕ್ಷರು.

* ಕಳೆದ ಏಳೆಂಟು ತಿಂಗಳಲ್ಲಿ ಏನೆಲ್ಲಾ ಆಗಿದೆ ಎಂಬುದು ಎಲ್ಲರಿಗೂ ಗೊತ್ತು. ಸದ್ಯ ನಾನು ಏನನ್ನೂ ಹೇಳುವುದಿಲ್ಲ. ಸಭಾಧ್ಯಕ್ಷರು ಯಾವುದೇ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ.

-ಡಾ.ಉಮೇಶ್‌ ಜಿ.ಜಾಧವ್‌.


ಕಾಲಮಿತಿಗೆ ನಕಾರ

ವಿಚಾರಣೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್‌ ರಮೇಶ್‌ಕುಮಾರ್‌ ''ಡಾ.ಜಾಧವ್‌ ವಿರುದ್ಧದ ಅನರ್ಹತೆ ದೂರು ಹಾಗೂ ರಾಜೀನಾಮೆ ಅಂಗೀಕಾರ ಎರಡು ಪ್ರಕರಣಗಳು ನಮ್ಮ ಮುಂದಿವೆ. ರಾಜೀನಾಮೆ ವಿಚಾರದಲ್ಲಿ ವಿಚಾರಣೆ ಪೂರ್ಣಗೊಂಡಿದೆ. ಪರಿಣಿತರ ಸಲಹೆ ಪಡೆದು ತೀರ್ಮಾನ ಪ್ರಕಟಿಸಲು ತೀರ್ಪು ಕಾಯ್ದಿರಿಸಿದ್ದೇನೆ. ಆದರೆ, ಅದಕ್ಕಾಗಿ ಕಾಲಮಿತಿ ಹೇಳಲು ಸಾಧ್ಯವಿಲ್ಲ. ಜಮೀರ್‌ ಅಹ್ಮದ್‌ಖಾನ್‌ ವಿರುದ್ಧದ ಅನರ್ಹತೆ ಪ್ರಕರಣದಲ್ಲಿ ಹೈಕೋರ್ಟ್‌ ವಿಭಾಗೀಯ ಪೀಠ ನೀಡಿರುವ ತೀರ್ಪನ್ನೂ ಗಮನಕ್ಕೆ ತೆಗೆದುಕೊಳ್ಳಲಾಗುವುದು'' ಎಂದು ತಿಳಿಸಿದರು.

''ಶಾಸಕರನ್ನು ಅನರ್ಹಗೊಳಿಸಲು ಅವಕಾಶ ಕಲ್ಪಿಸುವ ಸಂವಿಧಾನದ 10ನೇ ಷೆಡ್ಯೂಲ್‌ನ ಪ್ರಜಾಪ್ರತಿನಿಧಿ ಕಾಯಿದೆ ಅಪೂರ್ಣ ಹಾಗೂ ನಿಯಮಗಳು ನ್ಯೂನ್ಯತೆಯಿಂದ ಕೂಡಿವೆ. ಒಂದುವೇಳೆ ಡಾ.ಜಾಧವ್‌ ಅವರನ್ನು ಅನರ್ಹಗೊಳಿಸಿದರೂ ಅವರು ಚಿಂಚೋಳಿ ಮತಕ್ಷೇತ್ರದಿಂದಲೇ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶವಿದೆ. ಹೀಗಾಗಿ, ರಾಜೀನಾಮೆಗೆ ತಕರಾರುಗಳನ್ನು ಪರಿಶೀಲಿಸಿ ತೀರ್ಮಾನ ಮಾಡುವ ಅವಕಾಶ ತಮಗಿದೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ