ಆ್ಯಪ್ನಗರ

ಕೊಬ್ಬರಿ ವರ್ತಕರ ಕಪಟದಾಟಕ್ಕೆ ಕಡಿವಾಣ: ಮಾಧುಸ್ವಾಮಿ ಎಚ್ಚರಿಕೆ

ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಕೊಬ್ಬರಿ ಉತ್ಪಾದನೆಯಲ್ಲಿ ದೊಡ್ಡ ವ್ಯತ್ಯಾಸ ಆಗಿಲ್ಲ. ಆದರೂ, ಬೆಲೆ ಕುಸಿತವಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದ ಜತೆಗೆ, ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ವೈಜ್ಞಾನಿಕ ಮಾನದಂಡ ಅನುಸರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಾಧುಸ್ವಾಮಿ ಭರವಸೆ ನೀಡಿದರು.

Vijaya Karnataka 18 Feb 2020, 8:29 pm

ಬೆಂಗಳೂರು: ಕೊಬ್ಬರಿ ಮಾರುಕಟ್ಟೆಯಲ್ಲಿ ವರ್ತಕರ ‘ಕಪಟ ಆಟ’ದಿಂದ ಬೆಲೆ ಕುಸಿದು ಕಂಗಾಲಾಗಿರುವ ರಾಜ್ಯದ ತೆಂಗು ಬೆಳೆಗಾರರಿಗೆ ನೆರವಾಗುವ ಸಂಬಂಧ ಶೀಘ್ರ ಸ್ಪಷ್ಟ ನಿರ್ಧಾರ ಪ್ರಕಟಿಸುವುದಾಗಿ ಸರಕಾರ ವಿಧಾನಸಭೆಯಲ್ಲಿ ಮಂಗಳವಾರ ಪ್ರಕಟಿಸಿತು.
Vijaya Karnataka Web JC Madhu Swamy


ಪ್ರತಿ ಕ್ವಿಂಟಾಲ್‌ಗೆ 18,300 ರೂ. ಇದ್ದ ಕೊಬ್ಬರಿ ಬೆಲೆ ಪ್ರಸ್ತುತ 10 ಸಾವಿರಕ್ಕೆ ಕುಸಿದಿದ್ದು, ತೆಂಗು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂದು ಜೆಡಿಎಸ್‌ನ ಕೆಎಂ ಶಿವಲಿಂಗೇಗೌಡ ಹಾಗೂ ಬಿಜೆಪಿಯ ಬಿಸಿ ನಾಗೇಶ್‌ ಸದನದಲ್ಲಿ ಮಾಡಿದ ಪ್ರಸ್ತಾವನೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಈ ಭರವಸೆ ನೀಡಿದರು.

‘‘ಕೇಂದ್ರ ಸರಕಾರ 2019-20ನೇ ಸಾಲಿಗೆ ಪ್ರತಿ ಕ್ವಿಂಟಾಲ್‌ ಕೊಬ್ಬರಿಗೆ 9,920 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಬೆಲೆ ಈ ನಿಗದಿತ ಮೊತ್ತಕ್ಕಿಂತ ಕಡಿಮೆಯಾದರೆ ಮಾತ್ರ ಸರಕಾರ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ನಾಫೆಡ್‌ ಮೂಲಕ ಖರೀದಿ ಮಾಡಲು ಅವಕಾಶವಿದೆ. ಆದರೆ, ನಾಫೆಡ್‌ ಖರೀದಿಗೆ ಅವಕಾಶವಾಗದಂತೆ ವರ್ತಕರು ಜಾಣತನದಿಂದ ವರ್ತಿಸುತ್ತಿದ್ದು, ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ನೋವು ಸರಕಾರಕ್ಕೂ ಇದೆ. ಸಿಎಂ ಹಾಗೂ ಸಂಬಂಧಪಟ್ಟ ಸಚಿವರ ಜತೆಗೆ ಸಮಾಲೋಚನೆ ನಡೆಸಿ ತೆಂಗುಬೆಳೆಗಾರರ ಹಿತದೃಷ್ಟಿಯಿಂದ ಏನು ಕ್ರಮ ತೆಗೆದುಕೊಳ್ಳಬಹುದು ಎಂಬ ಕುರಿತು ನಿರ್ಧರಿಸಲಾಗುವುದು,’’ ಎಂದು ಸಚಿವರು ಹೇಳಿದರು.

ಪೊಲೀಸರು ಸೂರ್ಯಕಾಂತಿ ಹೂವು, ದೇವಸ್ಥಾನದ ದೇವದಾಸಿ ಇದ್ದಂತೆ: ಮಂಗಳೂರು ಗೋಲಿಬಾರ್‌ಗೆ ಇಬ್ರಾಹಿಂ ವ್ಯಂಗ್ಯ

‘‘ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಕೊಬ್ಬರಿ ಉತ್ಪಾದನೆಯಲ್ಲಿ ದೊಡ್ಡ ವ್ಯತ್ಯಾಸ ಆಗಿಲ್ಲ. ಆದರೂ, ಬೆಲೆ ಕುಸಿತವಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದ ಜತೆಗೆ, ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ವೈಜ್ಞಾನಿಕ ಮಾನದಂಡ ಅನುಸರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದು. ಕೇರಳದಲ್ಲಿ ತೆಂಗು ನೈಸರ್ಗಿಕವಾಗಿ ಬೆಳೆಯಾಗಿದ್ದು, ಅದಕ್ಕೆ ಸರಿಸಮನಾಗಿ ರಾಜ್ಯದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡುವುದು ಸರಿಯಲ್ಲ,’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ