ಆ್ಯಪ್ನಗರ

ಕವಿತೆ ಮೂಲಕ ಬಿಜೆಪಿ ಕಾಲೆಳೆದ ಜೆಡಿಎಸ್‌

ಬಿಎಸ್‌ವೈ ಸಂಪುಟದಲ್ಲಿ ಹಲವು ಹಿರಿಯ ಶಾಸಕರಿಗೆ ಅವಕಾಶ ಸಿಗದೆ, ಮತ್ತೆ ಕೆಲವರಿಗೆ ಸೂಕ್ತ ಖಾತೆ ಸಿಗದೆ ಬಿಜೆಪಿಯಲಿ ಅಸಮಾಧಾನ ಸೃಷ್ಟಿಯಾಗಿರುವ ಬಗ್ಗೆ ಜೆಡಿಎಸ್‌ ಕವಿತೆ ಮೂಲಕ ವ್ಯಂಗ್ಯವಾಡಿದೆ. ಬಿಜೆಪಿಯಲ್ಲಿನ ಅತೃಪ್ತಿಯ ಬಗ್ಗೆ ಟ್ಟಿಟರ್‌ನಲ್ಲಿ ಕವನದ ಮೂಲಕ ಜೆಡಿಎಸ್‌ ಪಕ್ಷವು ಕಾಲೆಳೆದಿದೆ.

Vijaya Karnataka 28 Aug 2019, 5:00 am
ಬೆಂಗಳೂರು : ಬಿಎಸ್‌ವೈ ಸಂಪುಟದಲ್ಲಿ ಹಲವು ಹಿರಿಯ ಶಾಸಕರಿಗೆ ಅವಕಾಶ ಸಿಗದೆ, ಮತ್ತೆ ಕೆಲವರಿಗೆ ಸೂಕ್ತ ಖಾತೆ ಸಿಗದೆ ಬಿಜೆಪಿಯಲಿ ಅಸಮಾಧಾನ ಸೃಷ್ಟಿಯಾಗಿರುವ ಬಗ್ಗೆ ಜೆಡಿಎಸ್‌ ಕವಿತೆ ಮೂಲಕ ವ್ಯಂಗ್ಯವಾಡಿದೆ. ಬಿಜೆಪಿಯಲ್ಲಿನ ಅತೃಪ್ತಿಯ ಬಗ್ಗೆ ಟ್ಟಿಟರ್‌ನಲ್ಲಿ ಕವನದ ಮೂಲಕ ಜೆಡಿಎಸ್‌ ಪಕ್ಷವು ಕಾಲೆಳೆದಿದೆ.
Vijaya Karnataka Web jds kindal bjp
ಕವಿತೆ ಮೂಲಕ ಬಿಜೆಪಿ ಕಾಲೆಳೆದ ಜೆಡಿಎಸ್‌


''ಮೀಸೆ ಮಣ್ಣಾಗಿಸಿಕೊಂಡು ಸೋತವರು

ನಗುನಗುತ ಬೀಗುತಿಹರು....

ಎದೆಯೊಡ್ಡಿ ಜಯಿಸಿದವರು

ತಲೆ ತಗ್ಗಿಸಿ ಕೈ ಚಾಚುತಿಹರು....

ಹಾರುತಿಹ ನ್ಯಾಯ ಧ್ವಜವನ್‌ ಇಳಿಸಿ ಮುನ್ನಡೆಯಲು..

ಎಲ್ಲಿಹುದು ನ್ಯಾಯ ಮರ್ಯಾದಾ ಪುರುಷೋತ್ತಮನ ಆಳ್ವಿಕೆಯೊಳ್‌?''


ಹಿಂದುಳಿದವರಿಗೆ ಅಪಮಾನ: ಜೆಡಿಎಸ್‌

ಹಿಂದುಳಿದ ವರ್ಗಕ್ಕೆ ಬಿಜೆಪಿ ಅಪಮಾನ: ಸಿಎಂ ಬಿಎಸ್‌ವೈ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡದೆ ಅಪಮಾನ ಮಾಡಲಾಗಿದೆ ಎಂದು ಜೆಡಿಎಸ್‌ ವಕ್ತಾರ ರಮೇಶ್‌ಬಾಬು ದೂರಿದ್ದಾರೆ.

''ಅರಸು ಜನ್ಮದಿನದಂದು ಸಂಪುಟ ವಿಸ್ತರಣೆ ಮಾಡಲಾಯಿತು. ಆದರೆ, ಈಶ್ವರಪ್ಪ ಮತ್ತು ಕೋಟ ಶ್ರೀನಿವಾಸ ಪೂಜಾರಿ ಹೊರತುಪಡಿಸಿ ಉಳಿದವರಿಗೆ ಸಂಪುಟದಲ್ಲಿ ಅವಕಾಶ ನೀಡಿಲ್ಲ. 3 ಡಿಸಿಎಂಗಳ ನೇಮಕದಲ್ಲೂ ಅಪಮಾನ ಮಾಡಲಾಗಿದೆ'' ಎಂದು ಅವರು ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ